Asianet Suvarna News Asianet Suvarna News

IND vs SL Test ಜಡೇಜಾ, ಅಶ್ವಿನ್ ಮ್ಯಾಜಿಕ್, ಲಂಕಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಹಾಗೂ 222 ರನ್ ಗೆಲುವು!

  • ಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ದಾಖಲೆ
  • ಭಾರತಕ್ಕೆ ಇನ್ನಿಂಗ್ಸ್ ಹಾಗೂ 222 ರನ್ ಗೆಲುವು
  • ಮೂರೇ ದಿನದೊಳಗೆ ಪಂದ್ಯ ಮುಗಿಸಿದ ಭಾರತ
Ravindra Jadesh R ashwin help Team india to innings and 222 runs win against srilanka in 1st test mohali ckm
Author
Bengaluru, First Published Mar 6, 2022, 5:38 PM IST

ಮೊಹಾಲಿ(ಮಾ.06): ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ಶ್ರೀಲಂಕಾ ವಿರುದ್ಧಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 222 ರನ್ ಗೆಲುವು ಕಂಡಿದೆ. ಕೇವಲ ಮೂರೇ ದಿನಕ್ಕೆ ಪಂದ್ಯ ಮುಗಿಸಿದ ಭಾರತ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಪಂದ್ಯದ ಹೀರೋ ರವೀಂದ್ರ ಜಡೇಜಾ. ಆಲ್ರೌಂಡ್ ಪರ್ಫಾಮೆನ್ಸ್ ಮೂಲಕ ಟೀಂ ಇಂಡಿಯಾದ ಅಭೂತಪೂರ್ವ ಗೆಲುವಿಗೆ ಕಾರಣರಾಗಿದ್ದಾರೆ.ಬ್ಯಾಟಿಂಗ್‌ನಲ್ಲಿ ಅಜೇಯ 174 ರನ್ ಸಿಡಿಸಿದರೆ, ಬೌಲಿಂಗ್‌ನಲ್ಲಿ ಒಟ್ಟು 9 ವಿಕೆಟ್ ಕಬಳಿಸಿ ಶ್ರೀಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ಇತ್ತ ಆರ್ ಅಶ್ವಿನ್ ಮ್ಯಾಜಿಕ್ ಕೂಡ ನೆರವಾಯಿತು.

Ind vs SL: ಮೊಹಾಲಿ ಟೆಸ್ಟ್‌ನಲ್ಲಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ರವಿಚಂದ್ರನ್‌ ಅಶ್ವಿನ್‌..!

ರವೀಂದ್ರ ಜಡೇಜಾ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 574 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 174 ರನ್ ಸಿಡಿಸಿ ಆಲೌಟ್ ಆಯಿತು. ಲಂಕಾ ಮೇಲೆ ಫಾಲೋ ಹೇರಿ ಭಾರತ ಬಿಗಿ ಹಿಡಿತ ಸಾಧಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 178 ರನ್ ಸಿಡಿಸಿತು. 

ಭಾರತ ಮೊದಲ ಇನ್ನಿಂಗ್ಸ್:
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತು. ಮಯಾಂಕ್ ಅಗರ್ವಾಲ್ 33 ರನ್ ಸಿಡಿಸಿದರೆ, ನಾಯಕ ರೋಹಿತ್ ಶರ್ಮಾ 29 ರನ್ ಸಿಡಿಸಿ ಔಟಾಗಿದ್ದರು. ಹುನುಮಾವಿಹಾರಿ ಹಾಫ್ ಸೆಂಚುರಿ ಸಿಡಿಸಿ ಆಸರೆಯಾಗಿದ್ದರು. ವಿಹಾರಿ 58 ರನ್ ಕಾಣಿಕೆ ನೀಡಿದರು. ಇನ್ನು 100 ನೇ ಟೆಸ್ಟ್ ಪಂದ್ಯ ಆಡಿದ ವಿರಾಟ್ ಕೊಹ್ಲಿ 45 ರನ್ ಸಿಡಿಸಿದ್ದರು. ಆದರೆ ರಿಷಪ್ ಪಂತ್ 96 ರನ್ ಕಾಣಿಕೆ ನೀಡಿದರು. ಇತ್ತ ಶ್ರೇಯಸ್ ಅಯ್ಯರ್ 27 ರನ್ ಸಿಡಿಸಿದರು. ಆದರೆ ರವೀಂದ್ರ ಜಡೇಜಾ ಹೋರಾಟ ಶ್ರೀಲಂಕಾದ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿತು.  ಜಡೇಜಾಗೆ ಅಶ್ವಿನ್ ಉತ್ತಮ ಸಾಥ್ ನೀಡಿದರು. ಆರ್ ಅಶ್ವಿನ್ 61 ರನ್ ಕಾಣಿಕೆ ನೀಡಿದ್ದರು. ಇತ್ತ ಸೆಂಚುರಿ ಸಿಡಿಸಿದ ಬಳಿಕ ದ್ವಿಶತಕದತ್ತ ಮುನ್ನಗ್ಗಿದ ಜಡೇಜಾ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದರು. ಆದರೆ 175 ರನ್ ಸಿಡಿಸಿದ ವೇಳೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.

Ind vs SL: ಜಡೇಜಾ ಮ್ಯಾಜಿಕ್, ಲಂಕಾ ಮೇಲೆ ಫಾಲೋ ಆನ್ ಹೇರಿದ ಟೀಂ ಇಂಡಿಯಾ..!

ಶ್ರೀಲಂಕಾ ಇನ್ನಿಂಗ್ಸ್
ಶ್ರೀಲಂಕಾ ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಪಥುಮ್ ನಿಸಾಂಕ 61 ರನ್ ಸಿಡಿಸಿ ಆಸರೆಯಾಗಿದ್ದರು. ಇತರ ಲಂಕಾ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಹೋರಾಟ ಮೂಡಿ ಬರಲಿಲ್ಲ. ಇದಕ್ಕೆ ಟೀಂ ಇಂಡಿಯಾ ಬೌಲರ್ ಅವಕಾಶ ನೀಡಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದರು. ಆರ್ ಅಶ್ವಿನ್ 2, ಜಸ್ಪ್ರೀತ್ ಬುಮ್ರಾ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಕಬಳಿಸಿದರು.

ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ ನಿರೋಶನ್ ಡಿಕ್‌ವೆಲ್ಲಾ ಅಜೇಯ 51 ರನ್ ಸಿಡಿಸಿದರು. ಇನ್ನುಳಿದ ಬ್ಯಾಟ್ಸ್‌ಮನ್ ಹೋರಾಟ ಸಾಕಾಗಲಿಲ್ಲ. ರವೀಂದ್ರ ಜಡೇಜಾ 4, ಆರ್ ಅಶ್ವಿನ್ 4 ಹಾಗೂ ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿ ಮಿಂಚಿದರು.

ಎರಡೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 13 ರಿಂದ ಬೆಂಗಳೂರಿಲ್ಲಿ ನಡೆಯಲಿದೆ. ಇದು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಈ ಪಂದ್ಯದಲ್ಲೂ ಜಯಬೇರಿ ಬಾರಿ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ಪೀಪ್ ಮಾಡಲು ರೋಹಿತ್ ಪಡೆ ಸಜ್ಜಾಗಿದೆ.
 

Follow Us:
Download App:
  • android
  • ios