Asianet Suvarna News Asianet Suvarna News

IPL Auction 2022: ಮೊದಲಿಗೆ ಹರಾಜಿಗೆ ಬರಲಿದ್ದಾರೆ ಈ 10 ಸ್ಟಾರ್ ಕ್ರಿಕೆಟಿಗರು..!

* ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ಐಪಿಎಲ್ ಹರಾಜಿನತ್ತ

* ಬೆಂಗಳೂರಿನಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ 600 ಆಟಗಾರರು ಭಾಗಿ

* ಕೋಟಿ ಕೋಟಿ ಹಣ ಬಾಚಿಕೊಳ್ಳಲು ಸಜ್ಜಾದ ಟಿ20 ಸ್ಟಾರ್ ಆಟಗಾರರು

Ravichandran Ashwin to David Warner these 10 Players will come in the first slot in the IPL 2022 mega auction kvn
Author
Bengaluru, First Published Feb 12, 2022, 9:46 AM IST

ಬೆಂಗಳೂರು(ಫೆ.12): ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟಿ20 ಟೂರ್ನಿಗೂ ಮುನ್ನ ನಡೆಯಲಿರುವ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಇಂದು(ಫೆ.12) ಹಾಗೂ ನಾಳೆ(ಫೆ.13) ನಡೆಯಲಿರುವ ಮೆಗಾ ಹರಾಜಿನಲ್ಲಿ (IPL Mega Auction) ಸಾಕಷ್ಟು ಅಳೆದು-ತೂಗಿ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ರಣತಂತ್ರ ಹೆಣೆದಿವೆ. 

ಫ್ರಾಂಚೈಸಿಗಳಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಲಿ ಎನ್ನುವ ಕಾರಣದಿಂದ ವಿವಿಧ ವಿಭಾಗಗಳನ್ನು ರಚಿಸಲಾಗಿದೆ. ಮೊದಲ ಸೆಟ್‌ನಲ್ಲಿ 10 ಆಟಗಾರರಿದ್ದು, ಈ ಆಟಗಾರರ ಹರಾಜು ಮೊದಲು ನಡೆಯಲಿದೆ. ಇವರಿಗೆ ಭಾರೀ ಬೇಡಿಕೆ ಕಂಡುಬರುವ ನಿರೀಕ್ಷೆ ಇದೆ. ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin), ಟ್ರೆಂಟ್ ಬೌಲ್ಟ್‌, ಪ್ಯಾಟ್ ಕಮಿನ್ಸ್‌, ಕ್ವಿಂಟನ್ ಡಿ ಕಾಕ್‌, ಶಿಖರ್ ಧವನ್‌, ಫಾಫ್ ಡು ಪ್ಲೆಸಿ, ಶ್ರೇಯಸ್‌ ಅಯ್ಯರ್‌ (Shreyas Iyer), ಕಗಿಸೋ ರಬಾಡ(Kagiso Rabada), ಮೊಹಮ್ಮದ್ ಶಮಿ, ಡೇವಿಡ್ ವಾರ್ನರ್‌ (David Warner) ಮೊದಲ ಸೆಟ್‌ನಲ್ಲಿರುವ ಆಟಗಾರರು. ಈ ಎಲ್ಲಾ ಆಟಗಾರರ ಮೂಲ ಬೆಲೆಯಾಗಿ 2 ಕೋಟಿ ರುಪಾಯಿ ನಿಗದಿಪಡಿಸಲಾಗಿದೆ.

ಐಪಿಎಲ್‌ ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. ಇನ್ನು 34 ಆಟಗಾರರ ಮೂಲ ಬೆಲೆ 1 ಕೋಟಿ ರುಪಾಯಿ ಇದೆ.

ಭಾರತದ ಕನಿಷ್ಠ 10 ಮಂದಿ 10+ ಕೋಟಿ ರು.ಗೆ ಬಿಡ್‌?

ಭಾರತದ ಕನಿಷ್ಠ 10 ಆಟಗಾರರಿಗೆ 10ರಿಂದ 15 ಕೋಟಿ ರುಪಾಯಿ ಬಿಡ್‌ ದೊರೆಯುವ ನಿರೀಕ್ಷೆ ಇದೆ. ಈ ಪೈಕಿ ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌, ದೀಪಕ್‌ ಚಹರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌, ಯಜುವೇಂದ್ರ ಚಹಲ್‌, ವಾಷಿಂಗ್ಟನ್‌ ಸುಂದರ್‌, ಶಿಖರ್‌ ಧವನ್‌, ದೇವದತ್‌ ಪಡಿಕ್ಕಲ್‌, ದೀಪಕ್‌ ಹೂಡಾ ಪ್ರಮುಖರೆನಿಸಿದ್ದಾರೆ. ಇವರ ಜೊತೆ ಹಿರಿಯ ಆಟಗಾರರಾದ ಭುವನೇಶ್ವರ್‌ ಕುಮಾರ್‌, ದಿನೇಶ್‌ ಕಾರ್ತಿಕ್‌, ಅಂಬಟಿ ರಾಯುಡು, ರಾಬಿನ್‌ ಉತ್ತಪ್ಪ, ಆರ್‌.ಅಶ್ವಿನ್‌, ಮೊಹಮದ್‌ ಶಮಿ ಸಹ ದೊಡ್ಡ ಮೊತ್ತ ನಿರೀಕ್ಷೆ ಮಾಡುತ್ತಿದ್ದಾರೆ. 

IPL Auction 2022: ಇಂದು, ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಐಪಿಎಲ್ ಮೆಗಾ ಹರಾಜು..!

ಇನ್ನು ಯುವ ಆಟಗಾರರಾದ ಶಾರುಖ್‌ ಖಾನ್‌, ನಿತೀಶ್‌ ರಾಣಾ, ರಾಹುಲ್‌ ತ್ರಿಪಾಠಿ, ಅಭಿನವ್‌ ಮನೋಹರ್‌ ಸೇರಿ ಹಲವರಿಗೆ ಕೋಟಿ ಕೋಟಿ ರುಪಾಯಿ ಹಣ ಸಿಗಬಹುದು. ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರೂ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ.

ತಂಡ ಬಾಕಿ ಇರುವ ಹಣ(ಕೋಟಿ ರು.ಗಳಲ್ಲಿ) ಖರೀದಿಸಬಹುದಾದ ಆಟಗಾರರು

ಚೆನ್ನೈ ಸೂಪರ್‌ ಕಿಂಗ್ಸ್‌: 48.21 ಕೋಟಿ ರುಪಾಯಿ

ಡೆಲ್ಲಿ ಕ್ಯಾಪಿಟಲ್ಸ್: 47.5 21 ಕೋಟಿ ರುಪಾಯಿ
 
ಕೋಲ್ಕತಾ ನೈಟ್ ರೈಡರ್ಸ್‌: 48.21 ಕೋಟಿ ರುಪಾಯಿ

ಲಖನೌ ಸೂಪರ್ ಜೈಂಟ್ಸ್: 59.22 ಕೋಟಿ ರುಪಾಯಿ

ಮುಂಬೈ ಇಂಡಿಯನ್ಸ್: 48 21 ಕೋಟಿ ರುಪಾಯಿ

ಪಂಜಾಬ್‌ ಕಿಂಗ್ಸ್‌: 72.23 ಕೋಟಿ ರುಪಾಯಿ

ರಾಜಸ್ಥಾನ ರಾಯಲ್ಸ್‌: 62.22 ಕೋಟಿ ರುಪಾಯಿ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 57.22 ಕೋಟಿ ರುಪಾಯಿ

ಸನ್‌ರೈಸ​ರ್ಸ್‌ ಹೈದರಾಬಾದ್: 68.22 ಕೋಟಿ ರುಪಾಯಿ

ಗುಜರಾತ್ ಟೈಟಾನ್ಸ್‌: 52.22 ಕೋಟಿ ರುಪಾಯಿ
 

Follow Us:
Download App:
  • android
  • ios