ಅಬ್ಬಬ್ಬಾ, ರವಿಚಂದ್ರನ್ ಅಶ್ವಿನ್ ಹೆಣ್ಮಕ್ಕಳ ಕ್ರಿಕೆಟ್ ನಾಲೆಡ್ಜ್ ನೋಡಿದ್ರಾ? ವಿಡಿಯೋ ವೈರಲ್!
ರವಿಚಂದ್ರನ್ ಅಶ್ವಿನ್ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಕುರಿತಾದ ಕೆಲವೊಂದು ಸರಳ ಹಾಗೂ ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಿದ್ದಾರೆ. ಒಂದು ಪ್ರಶ್ನೆಯನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕ್ರಿಕೆಟ್ ಕುರಿತಾದ ಪ್ರಶ್ನೆಗಳಿಗೆ ಅಶ್ವಿನ್ ಪುತ್ರಿಯರು ಸರಿಯಾದ ಉತ್ತರವನ್ನು ಹೇಳಿದ್ದಾರೆ.
ಚೆನ್ನೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಮುಕ್ತಾಯವಾದ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಜೂನ್ 01ರಿಂದ ಆರಂಭವಾಗಲಿರುವ 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೇಲೆ ನೆಟ್ಟಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ದೇಶಗಳು ಜಂಟಿ ಆತಿಥ್ಯ ವಹಿಸಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಇಬ್ಬರು ಹೆಣ್ಣು ಮಕ್ಕಳಾದ ಅಖಿರಾ ಹಾಗೂ ಆರಾಧ್ಯ ತಮ್ಮಲ್ಲಿರುವ ಕ್ರಿಕೆಟ್ ಜ್ಞಾನವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು, ರವಿಚಂದ್ರನ್ ಅಶ್ವಿನ್ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಕುರಿತಾದ ಕೆಲವೊಂದು ಸರಳ ಹಾಗೂ ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಿದ್ದಾರೆ. ಒಂದು ಪ್ರಶ್ನೆಯನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕ್ರಿಕೆಟ್ ಕುರಿತಾದ ಪ್ರಶ್ನೆಗಳಿಗೆ ಅಶ್ವಿನ್ ಪುತ್ರಿಯರು ಸರಿಯಾದ ಉತ್ತರವನ್ನು ಹೇಳಿದ್ದಾರೆ.
T20 World Cup: ಅಮೆರಿಕಗೆ ವಿಮಾನವೇರುವ ಮುನ್ನವೂ ಮಡದಿ ಅನುಷ್ಕಾ ಸ್ಮರಿಸಿದ ವಿರಾಟ್ ಕೊಹ್ಲಿ!
ಆರ್ ಅಶ್ವಿನ್ ತಮ್ಮ ಪುತ್ರಿಯರಿಗೆ, ಯಾವ ದೇಶದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಹಂತದ ಪಂದ್ಯಕ್ಕೆ ಯಾವ ನಗರ ಆತಿಥ್ಯ ವಹಿಸಲಿದೆ?. ಶಿಮ್ರೊನ್ ಹೆಟ್ಮೇಯರ್ ಯಾವ ದೇಶದ ಪರ ಟಿ20 ವಿಶ್ವಕಪ್ ಆಡುತ್ತಾರೆ?. ಭಾರತ ಕ್ರಿಕೆಟ್ ತಂಡದ ಕೋಚ್ ಯಾರು? ಎನ್ನುವ ಬಹುತೇಕ ಪ್ರಶ್ನೆಗಳಿಗೆ ಅಶ್ವಿನ್ ಪುತ್ರಿಯರು ಸರಿಯಾದ ಉತ್ತರ ಹೇಳಿದ್ದಾರೆ.
ಹೀಗಿದೆ ನೋಡಿ ಅಶ್ವಿನ್ ಮಕ್ಕಳ ಕ್ರಿಕೆಟ್ ಕ್ವಿಜ್ ವಿಡಿಯೋ:
ಇನ್ನು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ಹೇಳುವುದಾದರೇ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕದಲ್ಲಿಯೇ 4 ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ. ಮೊದಲಿಗೆ ಟೀಂ ಇಂಡಿಯಾ ಜೂನ್ 05ರಂದು ಐರ್ಲೆಂಡ್ ಎದುರು ಮೊದಲ ಪಂದ್ಯವನ್ನಾಡಲಿದೆ. ಇದಾದ ಬಳಿಕ ಜೂನ್ 09ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಆ ಬಳಿಕ ಜೂನ್ 12ರಂದು ಆತಿಥೇಯ ಅಮೆರಿಕವನ್ನು ಎದುರಿಸಿದರೆ, ಇನ್ನು ತನ್ನ ಪಾಲಿನ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಕೆನಡಾವನ್ನು ಜೂನ್ 15ರಂದು ಪ್ಲೋರಿಡಾದಲ್ಲಿ ಎದುರಿಸಲಿದೆ.
ಧೋನಿ ಬಯಸಿದ್ರೂ ಟೀಂ ಇಂಡಿಯಾ ಕೋಚ್ ಆಗಲು ಸಾಧ್ಯವಿಲ್ಲ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್, ಆರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.