Asianet Suvarna News Asianet Suvarna News

Asia Cup 2022​ ಆಡುವ ರವಿ ಬಿಷ್ನೋಯಿ ಐಸಿಸಿ ಟಿ20 ವಿಶ್ವಕಪ್ ಆಡಲ್ವಾ..?

ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಗೆ ಆಯ್ಕೆಯಾದ ಸ್ಪಿನ್ನರ್ ರವಿ ಬಿಷ್ಣೋಯಿ
ಏಷ್ಯಾಕಪ್ ಟೂರ್ನಿಗೆ 15 ಆಟಗಾರರ ತಂಡದಲ್ಲಿ ಲೆಗ್‌ ಸ್ಪಿನ್ನರ್ ಬಿಷ್ಣೋಯಿ
ಬಿಷ್ಣೋಯಿ ಚೊಚ್ಚಲ ಟಿ20 ವಿಶ್ವಕಪ್​​ ಆಡುವ ಬಿಗ್​ ಡ್ರೀಮ್​ ನುಚ್ಚುನೂರು..?
 

Ravi Bishnoi selection doubtful for upcoming ICC T20 World Cup 2022 kvn
Author
Bengaluru, First Published Aug 12, 2022, 1:01 PM IST

ಬೆಂಗಳೂರು(ಆ.12): ಏಷ್ಯಾದ ಕಿಂಗ್​ ಯಾರು ಎನ್ನುವುದನ್ನು ನಿರ್ಧರಿಸುವ ಏಷ್ಯಾಕಪ್​​​ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಇನ್ನು 3  ವಾರಗಳಷ್ಟೇ ಬಾಕಿ ಇದೆ. ಇದಕ್ಕಾಗಿ ಬಿಸಿಸಿಐ ಬಲಿಷ್ಠ 15 ಸದಸ್ಯರ ತಂಡವನ್ನ ಅನೌನ್ಸ್​​​ ಮಾಡಿದೆ. ಈ ಮೆಗಾ ಈವೆಂಟ್​​​ನಲ್ಲಿ ಯಾರಿಗೆಲ್ಲಾ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್​ ಸಿಗಬಹುದು. ಯಾರೆಲ್ಲಾ ಬೆಂಚ್​​ ಕಾಯಿಸಬಹುದು ಅನ್ನೋ ಚರ್ಚೆನೂ ಜೋರಾಗಿದೆ. ಜೊತೆಗೆ ಏಷ್ಯಾಕಪ್​​​ಗೆ ಸೆಲೆಕ್ಟ್​​​ ಆದವರೇ ಟಿ20 ವಿಶ್ವಕಪ್​ ಆಡ್ತಾರೆ ಅಂತಾನೂ ಹೇಳಲಾಗ್ತಿದೆ. ಆದರೆ ಗೂಗ್ಲಿ ಸ್ಪಿನ್ನರ್​​ ರವಿ ಬಿಷ್ನೋಯಿಗೆ ಮಾತ್ರ ಗೋಲ್ಡನ್ ಚಾನ್ಸ್ ಸಿಗಲ್ವಾ ಅನ್ನೋ ಪ್ರಶ್ನೆ ಎದ್ದಿದೆ. 

ರಾಜಸ್ಥಾನಿ ಬೌಲರ್​​​ ಏಷ್ಯಾಕಪ್​​ನಲ್ಲಿ ಎಷ್ಟೇ ದಮ್ದಾರ್​​​ ಆಟವಾಡಿದ್ರೂ ಅದು ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತೆ ವ್ಯರ್ಥವಾಗಲಿದೆ. ಚೊಚ್ಚಲ ಟಿ20 ವಿಶ್ವಕಪ್​​ ಆಡುವ ಬಿಗ್​ ಡ್ರೀಮ್​ ನುಚ್ಚುನೂರಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸದ್ಯಕ್ಕೆ ಬಿಷ್ನೋಯಿ ಏಷ್ಯಾಕಪ್​​​ನಲ್ಲಿ ಶೈನ್​​ ಆದರೂ ಬಂತೂ, ಆಗದಿದ್ರೂ ಬಂತು. ಲೆಗ್​ ಬ್ರೇಕರ್​​​ ಮಾತ್ರ ಆಸೀಸ್​​​​​​​​​​​​ಗೆ ಫ್ಲೈಟ್​​ ಏರಲ್ಲ. ಇವರ ಬದಲು ಕೇರಂ ಸ್ಪೆಶಲಿಸ್ಟ್​​​​​​ ಅಶ್ವಿನ್​​​​, ಟಿ20 ವಿಶ್ವಕಪ್​​ನಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋದು ಪಕ್ಕಾ ಆಗಿದೆ.

ಸೆಲೆಕ್ಟರ್ಸ್​ಗೆ ಬೇಕಿದೆ ಆಫ್​ ಸ್ಪಿನ್ನರ್​: 

ಅಷ್ಟಕ್ಕೂ ಬಿಷ್ನೋಯಿ ಟಿ20 ವಿಶ್ವಕಪ್​​​ ಯಾಕೆ ಆಡಲ್ಲ ಅನ್ನೋದಕ್ಕೆ ಕಾರಣನೇ ಇದು. 2022ರ ಚುಟುಕು ಮಹಾದಂಗಲ್​​​​​​ ಗೆಲ್ಲಲು ಬಿಸಿಸಿಐ ಪಣತೊಟ್ಟಿದೆ. ಅದಕ್ಕಾಗಿ ಬ್ಲೂ ಪ್ರಿಂಟ್​​ ರೆಡಿಮಾಡಿಕೊಂಡಿದ್ದು, ಆ ಬ್ಲೂ ಪ್ರಿಂಟ್​​​ನಲ್ಲಿ ಒಬ್ಬ ಆಫ್​​​​ ಸ್ಪಿನ್ನರ್​​ನನ್ನ ಆಡಿಸುವ ಪ್ಲಾನ್​ ಇದೆ. ಅಲ್ಲಿಗೆ ಆಫ್​​ ಸ್ಪಿನ್ನರ್​​​​​​​ ಅಂದ್ರೆ ಮೊದಲಿಗೆ ನೆನಪಾಗೋದೆ ರವಿಚಂದ್ರನ್ ಅಶ್ವಿನ್​​. ಸೋ ಕೇರಂ ಸ್ಪೆಶಲಿಸ್ಟ್​​​​​​​​ಗೆ ಟಿ20 ವಿಶ್ವಕಪ್​​ನಲ್ಲಿ ಪ್ಲೇಸ್​ ಫಿಕ್ಸ್ ಅನ್ನೋದನ್ನ ಮರೆಯುವಂತಿಲ್ಲ.

ಬೆಂಚ್ ಸ್ಟ್ರೆಂಥ್ ಹೆಚ್ಚಿದ್ರೆ ದ್ರಾವಿಡ್​ಗೆ ಲಾಭ, ಸೀನಿಯರ್ ಪ್ಲೇಯರ್ಸ್​ಗೆ ಶುರುವಾಯ್ತು ಪೀಕಲಾಟ..!

ವಾಷಿಂಗ್ಟನ್ ಸುಂದರ್ ಆಫ್​ ಸ್ಪಿನ್ನರ್​ ಅನ್ನಿಸಿಕೊಂಡಿದ್ರೂ ಸಾಕಷ್ಟು ಫಿಟ್ನೆಸ್​ ಸಮಸ್ಯೆ ಎದುರಿಸ್ತಿದ್ದಾರೆ. ಐಪಿಎಲ್​ ಬಳಿಕ ಒಂದೂ ಅಂತರರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಹೀಗಾಗಿ ವಿಶ್ವಕಪ್​​​​​​ಗೆ ನಿಮ್ಮನ್ನ ಆಡಿಸಲ್ಲ ಎಂದೂ ಬಿಸಿಸಿಐ ಈಗಾಗ್ಲೇ ವಾಷಿಗೆ ತಿಳಿಸಿದ್ದು, ಅಶ್ವಿನ್​ ಆಸ್ಟ್ರೇಲಿಯಾ ಫ್ಲೈಟ್​ ಏರೋದು ಪಕ್ಕಾ.

ವೇಗಿಗಳ ಸ್ವರ್ಗದಲ್ಲಿ ಆಫ್ ಸ್ಪಿನ್ನರ್​​​​ಗೇಕೆ ಮಣೆ..? :

ಈ ಬಾರಿ ವಿಶ್ವಕಪ್​ ನಡೆಯುವ ಸ್ಥಳ ಆಸ್ಟ್ರೇಲಿಯಾ. ಇದನ್ನ ವೇಗಿಗಳ ತಾಣವೆಂದೇ ಹೇಳಲಾಗ್ತಿದೆ. ಅಂತ್ರದಲ್ಲಿ ಆಫ್​​ ಸ್ಪಿನ್ನರ್​​​​​ ಆಡಿಲು ಸೆಲೆಕ್ಟರ್ಸ್​ ನಿರ್ಧಾರ ಮಾಡಿದ್ದರ ಹಿಂದೆ ಒಂದು ಪ್ಲಾನ್​​​ ಇದೆ. ಅದೇನಂದ್ರೆ ಕ್ವಾಲಿಟಿ ಲೆಫ್ಟಿ ಬ್ಯಾಟರ್​​ಗಳನ್ನ ಕಟ್ಟಿಹಾಕಲು ಆಫ್​​ ಸ್ಪಿನ್ನರ್​ ನ ಅಗತ್ಯವಿದೆ. ಜೊತೆಗೆ ಆ್ಯಷ್​​​​​ ಅನುಭವಿ ಬೌಲರ್​​​​. ವೇರಿಯೇಶನ್​ ಸ್ಪಿನ್​​ ಮಾಡಬಲ್ಲರು. ಆ ಮೂಲಕ ಎದುರಾಳಿಗೆ ಕಂಟಕ ಆಗಬಲ್ಲರು. ಅಲ್ಲದೇ ಆಸೀಸ್​​​ ಪಿಚ್​ ಕಂಡೀಷನ್​​ನಲ್ಲಿ ಅಶ್ವಿನ್​​ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಹೀಗಾಗಿ ಅಶ್ವಿನ್​​​​ ವಿಶ್ವಕಪ್​​ನಲ್ಲಿ ಟಿಕೆಟ್​ ಗಿಟ್ಟಿಸಿಕೊಳ್ಳೋದು ಗ್ಯಾರಂಟಿ.  

ಇನ್ನು ಟಿ20 ವಿಶ್ವಕಪ್​​ಗೆ ಸೆಲೆಕ್ಟ್​​​ ಆದ್ರೂ ಪ್ಲೇಯಿಂಗ್​​​​​-11 ನಲ್ಲಿ ಚಾನ್ಸ್​​​ ಸಿಗೋದು ಕಷ್ಟ. ಯಾಕಂದ್ರೆ ಆಡುವ ಹನ್ನೊಂದರ ಬಳಗದಲ್ಲಿ ರವೀಂದ್ರ ಜಡೇಜಾ ಮತ್ತು ಯುಜುವೇಂದ್ರ ಚಹಲ್​​ ಆಡೋದು ಖಚಿತ. ಒಂದು ವೇಳೆ 3ನೇ ಸ್ಪಿನ್ನರ್​ ಆಯ್ಕೆ ಬಯಸಿದರಷ್ಟೇ ಅಶ್ವಿನ್​​ಗೆ​ ಚಾನ್ಸ್​​. ಇಲ್ಲವಾದ್ರೆ ಬೆಂಚ್​​ಗೆ ಸೀಮಿತವಾಗಲಿದ್ದಾರೆ.

Follow Us:
Download App:
  • android
  • ios