Asianet Suvarna News Asianet Suvarna News

IND vs SA ಕಿಲ್ಲರ್ ಮಿಲ್ಲರ್ ಆಟಕ್ಕೆ ಟೀಮ್ ಇಂಡಿಯಾ ಪಂಚರ್!

ಐಪಿಎಲ್ ವಿಜೇತ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಹಾಗೂ ಟೀಮ್ ಇಂಡಿಯಾ ಕ್ಯಾಪ್ಟನ್ ರಿಷಭ್ ಪಂತ್ ಕೊನೇ ನಾಲ್ಕು ಓವರ್ ಗಳಲ್ಲಿ 55 ರನ್ ದೋಚಿದ್ದರಿಂದ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಭಾರತ 212 ರನ್ ಗಳ ಅಗಾಧ ಸವಾಲು ನೀಡಿತ್ತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ, ಮಿಲ್ಲರ್ ಹಾಗೂ ಡುಸೆನ್ ಆಟದಿಂದ ಇನ್ನೂ 5 ಎಸೆತಗಳಿರುವಂತೆ ಗೆಲುವು ಕಂಡಿತು.
 

Rassie van der Dussen David Miller wreaked havoc South Africa Beat India by 7 wickets in delhi T20I san
Author
Bengaluru, First Published Jun 9, 2022, 10:33 PM IST | Last Updated Jun 9, 2022, 10:36 PM IST

ದೆಹಲಿ (ಜೂನ್ 9): ಸ್ಪೋಟಕ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ (David Miller) ಹಾಗೂ ಮಧ್ಯಮ ಕ್ರಮಾಂಕದ ತಾರೆ ರಸ್ಸಿ ವಾನ್ ಡರ್ ಡುಸೆನ್ (Rassie van der Dussen) ಬ್ಯಾಟಿಂಗ್ ಅಬ್ಬರದ ಮುಂದೆ ಸಂಪೂರ್ಣವಾಗಿ ಶರಣಾದ ಭಾರತ (India) ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್ ಸೋಲು ಕಂಡಿದೆ.

ದಕ್ಷಿಣ ಆಫ್ರಿಕಾ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದ  ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ 5 ಸಿಕ್ಸರ್ 4 ಬೌಂಡರಿ ಇದ್ದ 64 ರನ್ ಬಾರಿಸಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ರಸ್ಸಿ ವಾನ್ ಡರ್ ಡುಸೆನ್ (75ರನ್, 46 ಎಸೆತ, 7 ಬೌಂಡರಿ, 5 ಸಿಕ್ಸರ್ ) ಕೂಡ ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಕಂಡಿದೆ.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರ ಇಶಾನ್ ಕಿಶನ್ (76ರನ್, 48 ಎಸೆತ, 11 ಬೌಂಡರಿ, 3 ಸಿಕ್ಸರ್), ಹಾರ್ದಿಕ್  ಪಾಂಡ್ಯ (31ರನ್, 12 ಎಸೆತ, 2 ಬೌಂಡರಿ, 3 ಸಿಕ್ಸರ್) ಸೇರಿದಂತೆ ಇತರ ಬ್ಯಾಟ್ಸ್ ಮನ್ ಗಳ ಸಾಹಸಿಕ ಬ್ಯಾಟಿಂಗ್ ನಿಂದಾಗಿ 4 ವಿಕೆಟ್ ಗೆ 211 ರನ್ ಗಳ ಬೃಹತ್ ಮೊತ್ತ ಪೇರಿಸಿತು.

ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಕಂಡಿತಾದರೂ, ನಿಗದಿತ ಸಮಯದಲ್ಲಿ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ  ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿಹಾಕುವ ಪ್ರಯತ್ನ ಮಾಡಿತು. ಆದರೆ, ಮಿಲ್ಲರ್ ಹಾಗೂ ಡುಸೆನ್ ಜೋಡಿ 4ನೇ ವಿಕೆಟ್ ಗೆ ಕೇವಲ 64 ಎಸೆತಗಳಲ್ಲಿ 131 ರನ್ ಜೊತೆಯಾಟವಾಡಿದ್ದರಿಂದ ದಕ್ಷಿಣ ಆಫ್ರಿಕಾ 19.1 ಓವರ್ ಗಳಲ್ಲಿ 3 ವಿಕೆಟ್ ಗೆ 212 ರನ್ ಪೇರಿಸಿ ಗೆಲುವು ಕಂಡಿತು.

IND vs SA ಅಬ್ಬರಿಸಿದ ಟೀಂ ಇಂಡಿಯಾ, ಸೌತ್ ಆಫ್ರಿಕಾ ತಂಡಕ್ಕೆ 211 ರನ್ ಟಾರ್ಗೆಟ್

ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಪವರ್ ಪ್ಲೇ ಅವಧಿಯಲ್ಲಿಯೇ 2 ಪ್ರಮುಖ ವಿಕೆಟ್ ಕಳೆದುಕೊಂಡಿತು. ನಾಯಕ ಟೆಂಬಾ ಬವುಮಾ 8 ಎಸೆತಗಳಲ್ಲಿ 2 ಬೌಂಡರಿಗಳಿದ್ದ 10 ರನ್ ಬಾರಿಸಿ ಭುವನೇಶ್ವರ್ ಕುಮಾರ್ ಗೆ ವಿಕೆಟ್ ನೀಡಿದರೆ, 13 ಎಸೆತಗಳಲ್ಲಿ 4 ಅತ್ಯಾಕರ್ಷಕ ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 29 ರನ್ ಸಿಡಿಸುವ ಮೂಲಕ ಪವರ್ ಪ್ಲೇ ಅವಧಿಯಲ್ಲಿ ಭಾರತದ ಬೌಲರ್ ಗಳ ಬೆವರಿಳಿಸಿದ್ದ ಡ್ವೈನ್ ಪ್ರಿಟೋರಿಯಸ್ ರನ್ನು ಹರ್ಷಲ್ ಪಟೇಲ್ ಬೌಲ್ಡ್ ಮಾಡಿದರು. 61 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 9ನೇ ಓವರ್ ವೇಳೆ ಅನುಭವಿ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಕೂಡ ಕಳೆದುಕೊಂಡಿತು. 18 ಎಸೆತ ಆಡಿದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ 3 ಬೌಂಡರಿಗಳೊಂದಿಗೆ 22 ರನ್ ಬಾರಿಸಿದ್ದರು. ಅಕ್ಸರ್ ಪಟೇಲ್ ಇವರ ವಿಕೆಟ್ ಅನ್ನು ಉರುಳಿಸಿದರು.

IND vs SA ಟೀಂ ಇಂಡಿಯಾ ವಿರುದ್ಧ ಟಾಸ್ ಗೆದ್ದ ಸೌತ್ ಆಫ್ರಿಕಾ, ತಂಡದಲ್ಲಿ ಯಾರಿಗೆ ಸ್ಥಾನ?

22 ಎಸೆತಗಳಲ್ಲಿ ಮಿಲ್ಲರ್ ಹಾಫ್ ಸೆಂಚುರಿ: 81 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ವಾನ್ ಡರ್ ಡುಸೆನ್ ಗೆ ಜೊತೆಯಾದ ಡೇವಿಡ್ ಮಿಲ್ಲರ್ 4ನೇ ವಿಕೆಟ್ ಗೆ ಬಿರುಸಿನ ಜೊತೆಯಾಟವಾಡಿದರು.  ಐಪಿಎಲ್ ನ ಆಟವನ್ನು ಮುಂದುವರಿಸಿದಂತೆ ಆಡಿದ ಡೇವಿಡ್ ಮಿಲ್ಲರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದು ಭಾರತ ವಿರುದ್ಧ ಟಿ20ಯಲ್ಲಿ ಮೂರನೇ ಜಂಟಿ ಅತ್ಯಂತ ವೇಗದ ಅರ್ಧಶತಕ ಎನಿಸಿದೆ. ಡೇವಿಡ್ ಮಿಲ್ಲರ್ ಮೊದಲ 10 ಎಸೆತಗಳ ಆಟದಲ್ಲಿ ಕೇವಲ 90ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದರೆ, ನಂತರದ 15 ಎಸೆತಗಳಲ್ಲಿ 47 ರನ್ ಸಿಡಿಸುವ ಮೂಲಕ 313.3ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು.

Latest Videos
Follow Us:
Download App:
  • android
  • ios