ರಣಜಿ ಕ್ರಿಕೆಟ್: ಕರ್ನಾಟಕದ ದಾಳಿಗೆ ತತ್ತರಿಸಿದ ಬಿಹಾರ
ಶ್ರೇಯಸ್ ಗೋಪಾಲ್ ಮಾರಕ ದಾಳಿಗೆ ತತ್ತರಿಸಿದ ಬಿಹಾರ ತಂಡವು ಕರ್ನಾಟಕ ತಂಡದ ಎದುರು ಮೊದಲ ದಿನವೇ ಆಲೌಟ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪಾಟ್ನಾ: ಸ್ಪಿನ್ನರ್‌ಗಳ ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ ಬಿಹಾರ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೊದಲ ದಿನವೇ ಪ್ರಾಬಲ್ಯ ಸಾಧಿಸಿದೆ. ಮೊದಲೆರಡೂ ಪಂದ್ಯಗಳಲ್ಲಿ ಮಳೆ ಹಿನ್ನೆಲೆಯಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ರಾಜ್ಯ ತಂಡ ಬಿಹಾರ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಬಿಹಾರ 55.5 ಓವರ್‌ಗಳಲ್ಲಿ ಕೇವಲ 143ಕ್ಕೆ ಆಲೌಟಾಯಿತು. ಶರ್ಮನ್ ನಿಗ್ರೂದ್ (60) ಹಾಗೂ ಬಿಪಿನ್ ಸೌರಭ್ (31) ಹೊರತುಪಡಿಸಿ ಬೇರೆ ಯಾರೂ ಬಿಹಾರದ ನೆರವಿಗೆ ಬರಲಿಲ್ಲ. ಒಂದು ಹಂತದಲ್ಲಿ 121ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 22 ರನ್ ಸೇರಿಸುವಷ್ಟರಲ್ಲಿ ಗಂಟುಮೂಟೆ ಕಟ್ಟಿತು.
ಐಪಿಎಲ್ 2025 ಆಡ್ತಾರಾ ಧೋನಿ? ನಿರ್ಧಾರ ತಿಳಿಸಿದ ಸಿಎಸ್‌ಕೆ ಥಲಾ!
ಮಾರಕ ದಾಳಿ ಸಂಘಟಿಸಿದ ಶ್ರೇಯಸ್ ಗೋಪಾಲ್ 4, ಮೊಹ್ಸಿನ್ ಖಾನ್ 3 ವಿಕೆಟ್ ಕಿತ್ತರು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿದ್ದು, ಇನ್ನೂ 127 ರನ್ ಹಿನ್ನಡೆಲ್ಲಿದೆ.
ಮಯಾಂಕ್‌ಗೆ ಅನಾರೋಗ್ಯ: ಕರ್ನಾಟಕ ನಾಯಕ ಮಯಾಂಕ್ ಅಗರ್‌ವಾಲ್ ಪಂದ್ಯದ ನಡುವೆ ಅನಾರೋಗ್ಯಕ್ಕೆ ತುತ್ತಾದರು. ಹೀಗಾಗಿ ಅವರು ಬ್ಯಾಟಿ ಆಗಮಿಸಲಿಲ್ಲ. ಅವರ ಬದಲು ಬ್ಯಾಟಿಂಗ್‌ಗೆ ನಿಕಿನ್ ಜೋಸ್ ಜೊತೆ ಸುಜಯ್ ಸತೇರಿ ಆರಂಭಿಕರಾಗಿ ಕಣಕ್ಕಿಳಿದರು.
ಸ್ಕೋರ್: ಬಿಹಾರ 143/10 (ಶರ್ಮನ್ 60, ಬಿಪಿನ್ 31, ಶ್ರೇಯಸ್ 4-28, ಮೊಪ್ಪಿನ್ 3-50) ಕರ್ನಾಟಕ 16/0 (ಮೊದಲ ದಿನದಂತ್ಯಕ್ಕೆ) (ನಿಕಿನ್ ಜೋಸ್ 11*, ಸುಜಯ್ ಸತೇರಿ 4*)
ಪುಣೆಯಲ್ಲೂ ಸೋತು 12 ವರ್ಷ ಬಳಿಕ ಟೆಸ್ಟ್ ಸರಣಿ ಕೈಚೆಲ್ಲಿದ ಟೀಂ ಇಂಡಿಯಾಗೆ ಮತ್ತೊಂದು ಶಾಕ್!
ಮಹಿಳಾ ಟಿ20: ಕರ್ನಾಟಕ ತಂಡದ 4ನೇ ಪಂದ್ಯ ರದ್ದು!
ಕೋಲ್ಕತಾ: ಹಿರಿಯ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕದ 4ನೇ ಪಂದ್ಯ ಮಳೆಗೆ ಆಹುತಿಯಾಗಿದೆ. ಶನಿವಾರ ನಡೆಯಬೇಕಿದ್ದ ಕರ್ನಾಟಕ ಹಾಗೂ ಪುದುಚೇರಿ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಇದರಿಂದ ಇತ್ತಂಡಕ್ಕೆ ತಲಾ 2 ಅಂಕ ಲಭಿಸಿತು. ಸದ್ಯ ರಾಜ್ಯ 6 ಪಂದ್ಯಗಳಲ್ಲಿ 16 ಅಂಕ ಗಳಿಸಿ, ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಛತ್ತೀಸ್‌ಗಢ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ ವಿರುದ್ಧ ಪಂದ್ಯವೂ ಮಳೆಗೆ ರದ್ದಾಗಿತ್ತು. ಮುಂದಿನ ಪಂದ್ಯದಲ್ಲಿ ಅ.28ಕ್ಕೆ ಮಹಾರಾಷ್ಟ್ರ ವಿರುದ್ಧ ಸೆಣಸಾಡಲಿದೆ.