ಬೆಂಗಳೂರು[ಜ.08]: ಮುಂಬೈ ವಿರುದ್ಧದ ರಣಜಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಜಯದ ಲಯಕ್ಕೆ ಮರಳಿರುವ ಕರ್ನಾಟಕ ತಂಡ ಜ.11ರಿಂದ ಕಳೆದ ಬಾರಿಯ ರನ್ನರ್‌-ಅಪ್‌ ಸೌರಾಷ್ಟ್ರ ತಂಡವನ್ನು ರಾಜ್‌ಕೋಟ್‌ನಲ್ಲಿ ಎದುರಿಸಲಿದೆ. 

ಮಂಗಳವಾರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿತು. ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಕರುಣ್‌ ನಾಯರ್‌ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸಲಾಗಿದೆ.

ರಣಜಿ ಟ್ರೋಫಿ: ಮುಂಬೈ ಎದುರು ಗೆದ್ದು ಬೀಗಿದ ಕರ್ನಾಟಕ

ಗಾಯದಿಂದಾಗಿ ಈ ಋುತುವಿನ ಮೊದಲ 4 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಬ್ಯಾಟ್ಸ್‌ಮನ್‌ ಕೆ.ವಿ. ಸಿದ್ಧಾರ್ಥ್ ತಂಡಕ್ಕೆ ವಾಪಸಾಗಿದ್ದಾರೆ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಆಲ್ರೌಂಡರ್‌ ಪವನ್‌ ದೇಶಪಾಂಡೆ ಸಹ ಗುಣಮುಖರಾಗಿದ್ದು, ತಂಡಕ್ಕೆ ಮರಳಿದ್ದಾರೆ.

4 ಪಂದ್ಯಗಳಲ್ಲಿ 2 ಗೆಲುವು, 2 ಡ್ರಾಗಳೊಂದಿಗೆ ಒಟ್ಟು 16 ಅಂಕಗಳನ್ನು ಗಳಿಸಿರುವ ಕರ್ನಾಟಕ, ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದೆ.

ತಂಡ: ಶ್ರೇಯಸ್‌ ಗೋಪಾಲ್‌ (ನಾಯಕ), ದೇವದತ್‌ ಪಡಿಕ್ಕಲ್‌, ಡಿ.ನಿಶ್ಚಲ್‌, ಆರ್‌.ಸಮಥ್‌ರ್‍, ಕೆ.ವಿ.ಸಿದ್ಧಾಥ್‌ರ್‍, ಬಿ.ಆರ್‌.ಶರತ್‌, ರೋಹನ್‌ ಕದಂ, ಪವನ್‌ ದೇಶಪಾಂಡೆ, ಜೆ.ಸುಚಿತ್‌, ಅಭಿಮನ್ಯು ಮಿಥುನ್‌, ವಿ.ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಶರತ್‌ ಶ್ರೀನಿವಾಸ್‌, ಪ್ರವೀಣ್‌ ದುಬೆ.