Asianet Suvarna News Asianet Suvarna News

ಪ್ರಥಮ ದರ್ಜೆ ಪಾದಾರ್ಪಣೆ ಪಂದ್ಯದಲ್ಲೇ 9 ವಿಕೆಟ್ ಕಬಳಿಸಿದ 16 ವರ್ಷದ ಫೀರೋಯಿಜಾಂ ಸಿಂಗ್‌..!

ಪ್ರಥಮ ದರ್ಜೆ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಫೀರೋಯಿಜಾಂ ಸಿಂಗ್‌
ಫೀರೋಯಿಜಾಂ ಸಿಂಗ್‌ ಮಣಿಪುರ ಕ್ರಿಕೆಟ್ ತಂಡದ ಮಧ್ಯಮ ವೇಗದ ಬೌಲರ್
16ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿ ದಾಖಲೆ ಸರಿಗಟ್ಟಿದ ವೇಗಿ

Ranji Trophy Manipur 16 year old Pheiroijam Singh take 9 wickets on First Class debut kvn
Author
First Published Dec 15, 2022, 5:46 PM IST

ನವದೆಹಲಿ(ಡಿ.15): ಮಣಿಪುರದ 16 ವರ್ಷದ ಯುವ ಮಧ್ಯಮ ವೇಗದ ಬೌಲರ್‌ ಫೀರೋಯಿಜಾಂ ಸಿಂಗ್‌, ಪ್ರಥಮ ದರ್ಜೆ ಪಾದಾರ್ಪಣೆ ಪಂದ್ಯದಲ್ಲೇ 9 ವಿಕೆಟ್‌ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 

ಇಲ್ಲಿನ ರಂಗ್‌ಪೊ ಮೈದಾನದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಸಿಕ್ಕಿಂ ಎದುರಿನ ಪಂದ್ಯದಲ್ಲಿ ಫೀರೋಯಿಜಾಂ ಸಿಂಗ್‌ 22 ಓವರ್‌ ಬೌಲಿಂಗ್‌ ಮಾಡಿ 5 ಮೇಡನ್‌ ಸಹಿತ ಕೇವಲ 69 ರನ್‌ ನೀಡಿ 9 ವಿಕೆಟ್‌ ಕಬಳಿಸಿದರು. ಪರಿಣಾಮ ಸಿಕ್ಕಿಂ ತಂಡವು 220 ರನ್‌ಗಳಿಗೆ ಸರ್ವಪತನ ಕಂಡಿತು. ಫೀರೋಯಿಜಾಂ ಸಿಂಗ್‌ ಅವರಿಗಿಂತ ಮೊದಲು ವಸಂತ್ ರಂಜನೆ(9/35), ಅಮರ್‌ಜಿತ್ ಸಿಂಗ್(45/9), ಸಂಜಯ್ ಯಾದವ್(52/9) ಪ್ರಥಮ ದರ್ಜೆ ಪಾದಾರ್ಪಣೆ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ ಇತಿಹಾಸದಲ್ಲಿ ಫೀರೋಯಿಜಾಂ ಸಿಂಗ್‌(69/5) ಅವರ ಬೌಲಿಂಗ್ ಪ್ರದರ್ಶನವು ಜಗತ್ತಿನ 10ನೇ ಹಾಗೂ ಭಾರತದ 4ನೇ ಅತ್ಯುತ್ತಮ ಪಾದಾರ್ಪಣೆ ಪಂದ್ಯದ ಪ್ರದರ್ಶನವೆನಿಸಿಕೊಂಡಿತು. 

ಫೀರೋಯಿಜಾಂ ಸಿಂಗ್‌ ಪ್ರಥಮ ದರ್ಜೆ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲೇ 10 ವಿಕೆಟ್ ಕಬಳಿಸಿ ಇತಿಹಾಸ ಬರೆಯುವ ಅವಕಾಶವಿತ್ತು. ಆದರೆ ಅನ್ವೇಶ್ ಶರ್ಮಾ(39) ಅವರನ್ನು ರೆಕ್ಸ್‌ ರಾಜ್‌ಕುಮಾರ್‌ ಬಲಿ ಪಡೆಯುವ ಮೂಲಕ ಫೀರೋಯಿಜಾಂ ಸಿಂಗ್‌ ಇತಿಹಾಸ ಬರೆಯಲು ಅವಕಾಶ ಮಾಡಿಕೊಡಲಿಲ್ಲ. 

ಇನ್ನು ಫೀರೋಯಿಜಾಂ ಸಿಂಗ್‌ ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಸಿಕ್ಕಿಂ ತಂಡವು ಮಣಿಪುರ ಎದುರು ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಮಣಿಪುರ ತಂಡವು 186 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಇದಕ್ಕುತ್ತರವಾಗಿ ಸಿಕ್ಕಿಂ ತಂಡವು 220 ರನ್ ಬಾರಿಸುವ ಮೂಲಕ 34 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಮಣಿಪುರ ತಂಡವು 193 ರನ್‌ ಬಾರಿಸಿ ಸರ್ವಪತನ ಕಾಣುವ ಮೂಲಕ ಸಿಕ್ಕಿಂ ತಂಡಕ್ಕೆ 160 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಇನ್ನು ಮೂರನೇ ದಿನದಾಟದಂತ್ಯಂದ ವೇಳೆಗೆ ಸಿಕ್ಕಿಂ ತಂಡವು ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿದ್ದು, ಕೊನೆಯ ದಿನ ಈ ಟೆಸ್ಟ್ ಪಂದ್ಯ ಗೆಲ್ಲಲು ಕೇವಲ 139 ರನ್ ಗಳಿಸಬೇಕಿದೆ.

ಇಂಗ್ಲೆಂಡ್‌ನ ಆಲ್ಬರ್ಟ್‌ ಮೊಸ್‌ 1889-90ರಲ್ಲಿ 38 ರನ್ ನೀಡಿ 10 ವಿಕೆಟ್‌ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇನ್ನು 1900-91ರಲ್ಲಿ 36 ರನ್ ನೀಡಿ 10 ವಿಕೆಟ್ ಪಡೆಯುವ ಮೂಲಕ ತಮ್ಮ ಪ್ರಥಮ ದರ್ಜೆ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದರು. 

Follow Us:
Download App:
  • android
  • ios