Asianet Suvarna News Asianet Suvarna News

Ranji Trophy: ಕರ್ನಾಟಕ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಕೆ ಎಲ್ ರಾಹುಲ್‌ಗೆ ಸ್ಥಾನ

2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿ ಡಿಸೆಂಬರ್ 13ರಿಂದ ಆರಂಭ
32 ಆಟಗಾರರ ಸಂಭವನೀಯರ ಪಟ್ಟಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗೆ ಕೆ ಎಲ್ ರಾಹುಲ್‌ಗೆ ಸ್ಥಾನ
ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ಸಂಭಾವ್ಯ ತಂಡ ಪ್ರಕಟ

Ranji Trophy KL Rahul included in 32 members Karnataka Probable squad kvn
Author
First Published Dec 7, 2022, 12:35 PM IST

ಬೆಂಗಳೂರು(ಡಿ.07): ಡಿಸೆಂಬರ್ 13ರಿಂದ ಆರಂಭಗೊಳ್ಳಲಿರುವ 2022-23ನೇ ಸಾಲಿನ ರಣಜಿ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) 32 ಆಟಗಾರರ ಸಂಭವನೀಯರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಕೆ.ಎಲ್‌.ರಾಹುಲ್‌ಗೆ ಸ್ಥಾನ ದೊರೆತಿದೆಯಾದರೂ ಅವರು ಆಡಲು ಲಭ್ಯರಿರುತ್ತಾರಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಗಮನ ಸೆಳೆದಿರುವ ಆಲ್ರೌಂಡರ್‌ ಮನೋಜ್‌ ಭಾಂಡ್ಗೆಗೆ ಸ್ಥಾನ ನೀಡಲಾಗಿಲ್ಲ.

ಸಂಭವನೀಯರ ಪಟ್ಟಿ: ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ, ಕರುಣ್‌ ನಾಯರ್‌, ದೇವದತ್‌ ಪಡಿಕ್ಕಲ್‌, ಆರ್‌.ಸಮರ್ಥ್, ನಿಶ್ಚಲ್‌ ಡಿ., ಅಭಿನವ್‌ ಮನೋಹರ್‌, ಕೆ.ವಿ.ಸಿದ್ಧಾರ್ಥ್, ಅನೀಶ್‌ ಕೆ.ವಿ., ನಿಕಿನ್‌ ಜೋಸ್‌, ವಿಶಾಲ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ಪರಾಸ್‌ ಆರ್ಯ, ಮೊಹ್ಸಿನ್‌ ಕಾನ್‌, ರಿತೇಶ್‌ ಭಟ್ಕಳ, ಶುಭಾಂಗ್‌ ಹೆಗ್ಡೆ, ರೋಹಿತ್‌ ಕುಮಾರ್‌, ರಿಶಿ ಬೋಪಣ್ಣ, ಶಶಿಕುಮಾರ್‌, ಶರತ್‌ ಶ್ರೀನಿವಾಸ್‌, ಶರತ್‌ ಬಿ.ಆರ್‌., ನಿಹಾಲ್‌, ಪ್ರಸಿದ್‌್ಧ ಕೃಷ್ಣ, ರೋನಿತ್‌ ಮೋರೆ, ವಿ.ವೈಶಾಖ್‌, ಎಂ.ವೆಂಕಟೇಶ್‌, ವಿದ್ಯಾಧರ್‌ ಪಾಟೀಲ್‌, ವಿ.ಕೌಶಿಕ್‌, ವಿದ್ವತ್‌ ಕಾವೇರಪ್ಪ.

ರಣಜಿ: ಮೂವರು ಮಹಿಳಾ ಅಂಪೈರ್‌ಗಳ ಕಾರ‍್ಯನಿರ್ವಹಣೆ

ನವದೆಹಲಿ: ಡಿ.13ರಿಂದ ಆರಂಭಗೊಳ್ಳಲಿರುವ 2022-23ರ ರಣಜಿ ಟ್ರೋಫಿಯಲ್ಲಿ ಮೂವರು ಮಹಿಳಾ ಅಂಪೈರ್‌ಗಳು ಕಾರ‍್ಯನಿರ್ವಹಿಸಲಿದ್ದಾರೆ. ಭಾರತದಲ್ಲಿ ಪುರುಷರ ಕ್ರಿಕೆಟ್‌ನಲ್ಲಿ ಮಹಿಳಾ ಅಂಪೈರ್‌ಗಳು ಕಾರ‍್ಯನಿರ್ವಹಿಸಲಿರುವುದು ಇದೇ ಮೊದಲು. ಚೆನ್ನೈನ ಜನನಿ ನಾರಾಯಣ್‌, ಮುಂಬೈನ ವೃಂದಾ ರಾಠಿ ಹಾಗೂ ದೆಹಲಿಯ ಗಾಯತ್ರಿ ವೇಣುಗೋಪಾಲನ್‌ ಆಯ್ಕೆಯಾಗಿರುವ ಅಂಪೈರ್‌ಗಳು. ಈ ಹಿಂದೆ ಗಾಯತ್ರಿ ಮೀಸಲು ಅಂಪೈರ್‌(4ನೇ ಅಂಪೈರ್‌) ಆಗಿ ರಣಜಿ ಟ್ರೋಫಿಯಲ್ಲಿ ಕಾರ‍್ಯನಿರ್ವಹಿಸಿದ್ದರು.

Ind vs Ban: ಬಾಂಗ್ಲಾದೇಶ ಎದುರು ಸರಣಿ ಉಳಿಸಿಕೊಳ್ಳುತ್ತಾ ಟೀಂ ಇಂಡಿಯಾ..?

ಅಂಧರ ಟಿ20 ವಿಶ್ವಕಪ್‌: ಭಾರತಕ್ಕೆ 274 ರನ್‌ ಜಯ!

ಫರೀದಾಬಾದ್‌: ಮಂಗಳವಾರದಿಂದ ಆರಂಭಗೊಂಡ 3ನೇ ಆವೃತ್ತಿಯ ಅಂಧರ ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ನೇಪಾಳ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 274 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರಲ್ಲಿ 2 ವಿಕೆಟ್‌ಗೆ 382 ರನ್‌ ಗಳಿಸಿತು. ಕರ್ನಾಟಕದ ಸುನಿಲ್‌ ರಮೇಶ್‌ 38 ಎಸೆತದಲ್ಲಿ 25 ಬೌಂಡರಿಗಳೊಂದಿಗೆ 106, ದೀಪಕ್‌ ಮಲಿಕ್‌ 34 ಎಸೆತದಲ್ಲಿ 22 ಬೌಂಡರಿ, 3 ಸಿಕ್ಸರ್‌ನೊಂದಿಗೆ 113 ರನ್‌ ಗಳಿಸಿದರು. ನೇಪಾಳ 20 ಓವರಲ್ಲಿ 9 ವಿಕೆಟ್‌ಗೆ 108 ರನ್‌ ಗಳಿಸಲಷ್ಟೇ ಶಕ್ತವಾಯಿತು.
 

Follow Us:
Download App:
  • android
  • ios