Ranji Trophy: ಕರ್ನಾಟಕದ ದಾಳಿಗೆ ತಮಿಳುನಾಡು ತತ್ತರ!

ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 288 ರನ್‌ ಗಳಿಸಿದ್ದ ಕರ್ನಾಟಕ, 2ನೇ ದಿನ ಕೊನೆಯ 5 ವಿಕೆಟ್‌ಗೆ ಕೇವಲ 78 ರನ್‌ ಕಲೆಹಾಕಿತು. ಮೊದಲ ದಿನ 151 ರನ್‌ ಗಳಿಸಿದ್ದ ದೇವದತ್‌ ಪಡಿಕ್ಕಲ್‌ ಶನಿವಾರ ಆ ಮೊತ್ತಕ್ಕೆ ಒಂದೂ ರನ್‌ ಸೇರಿಸದ ಔಟಾದರು. ಹಾರ್ದಿಕ್‌ ರಾಜ್‌ (51) ಚೊಚ್ಚಲ ಅರ್ಧಶತಕ, ಎಸ್‌.ಶರತ್‌ 45 ರನ್‌ ಗಳಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.

Ranji Trophy Karnataka take control over Tamil Nadu on day 2 kvn

ಚೆನ್ನೈ(ಫೆ.11): ಕರ್ನಾಟಕ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ತಮಿಳುನಾಡು, ರಾಜ್ಯ ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಬಿಟ್ಟುಕೊಡುವ ಆತಂಕಕ್ಕೆ ಸಿಲುಕಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್‌ ಕಲೆಹಾಕಿದ ಬಳಿಕ, ಬ್ಯಾಟಿಂಗ್‌ ಆರಂಭಿಸಿದ ತಮಿಳುನಾಡು, ಮೊದಲ ಇನ್ನಿಂಗ್ಸಲ್ಲಿ 2ನೇ ದಿನದಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿದ್ದು, ಇನ್ನೂ 237 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 288 ರನ್‌ ಗಳಿಸಿದ್ದ ಕರ್ನಾಟಕ, 2ನೇ ದಿನ ಕೊನೆಯ 5 ವಿಕೆಟ್‌ಗೆ ಕೇವಲ 78 ರನ್‌ ಕಲೆಹಾಕಿತು. ಮೊದಲ ದಿನ 151 ರನ್‌ ಗಳಿಸಿದ್ದ ದೇವದತ್‌ ಪಡಿಕ್ಕಲ್‌ ಶನಿವಾರ ಆ ಮೊತ್ತಕ್ಕೆ ಒಂದೂ ರನ್‌ ಸೇರಿಸದ ಔಟಾದರು. ಹಾರ್ದಿಕ್‌ ರಾಜ್‌ (51) ಚೊಚ್ಚಲ ಅರ್ಧಶತಕ, ಎಸ್‌.ಶರತ್‌ 45 ರನ್‌ ಗಳಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.

ಬಳಿಕ ಕರ್ನಾಟಕದ ಬೌಲರ್‌ಗಳು ಅತ್ಯುತ್ತಮ ದಾಳಿ ಸಂಘಟಿಸಿ, ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಆಫ್‌ ಸ್ಪಿನ್ನರ್‌ ಶಶಿಕುಮಾರ್‌ 3, ಹಾರ್ದಿಕ್‌ 2, ವಿದ್ವತ್‌ ಹಾಗೂ ವೈಶಾಖ್‌ ತಲಾ 1 ವಿಕೆಟ್‌ ಪಡೆದಿದ್ದಾರೆ. ಬಾಬಾ ಇಂದ್ರಜಿತ್‌ 35 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ.

ಒಂದು ಸಲ ಅಲ್ಲ ಸಾವಿರ ಸಲ ಬೇಕಿದ್ದರೂ ಜೈ ಶ್ರೀರಾಮ್ ಘೋಷಣೆ ಕೂಗಲಿ: ಮೊಹಮ್ಮದ್ ಶಮಿ

ಸ್ಕೋರ್‌: 
ಕರ್ನಾಟಕ 366/10 (ಪಡಿಕ್ಕಲ್‌ 151, ಹಾರ್ದಿಕ್‌ 51, ಅಜಿತ್‌ 4-75)
ತಮಿಳುನಾಡು 129/7 (ಬಾಬಾ 35*, ಶಶಿ 3-41)

ಕೊಹ್ಲಿ ಬಗ್ಗೆ ತಪ್ಪು ಮಾಹಿತಿ ಹಂಚಿದ್ದಕ್ಕೆ ಎಬಿಡಿ ವಿಷಾದ!

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌, ಭಾರತದ ದಿಗ್ಗಜ ವಿರಾಟ್‌ ಕೊಹ್ಲಿ ಬಗ್ಗೆ ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕೆ ವಿಷಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಎಬಿಡಿ ತಮ್ಮ ಯೂಟ್ಯೂಬ್‌ ವಿಡಿಯೋದಲ್ಲಿ ‘ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅವರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡುತ್ತಿಲ್ಲ’ ಎಂದಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಬಿಡಿ, ‘ಕೊಹ್ಲಿ ಬದುಕಿನಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿಲ್ಲ. ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಅವರು ಆದಷ್ಟು ಬೇಗ ಕ್ರಿಕೆಟ್‌ಗೆ ಮರಳಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.
 

Latest Videos
Follow Us:
Download App:
  • android
  • ios