ಕೋಲ್ಕತಾ(ಮಾ.02): ಕರ್ನಾಟಕ-ಬಂಗಾಳ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದ್ದು, ಮೂರನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 3 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ. ಇನ್ನೂ ಕರ್ನಾಟಕ ಗೆಲ್ಲಲು 254 ರನ್‌ಗಳ ಅವಶ್ಯಕತೆಯಿದೆ. ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅಜೇಯ 50 ಹಾಗೂ ಮನೀಶ್ ಪಾಂಡೆ 11 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

352 ರನ್‌ಗಳ ಗುರಿ ಪಡೆದ ಕರ್ನಾಟಕ ಮೊದಲ ಓವರ್‌ನಲ್ಲೇ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಸಮರ್ಥ್ ಕೂಡಿಕೊಂಡ ದೇವದತ್ ಪಡಿಕ್ಕಲ್ ಎರಡನೇ ವಿಕೆಟ್‌ಗೆ 57 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಾಕಷ್ಟು ಎಚ್ಚರಿಕೆಯ ಆಟವಾಡುತ್ತಿದ್ದ ಸಮರ್ಥ್ 69 ಎಸೆತಗಳಲ್ಲಿ 2 ಬೌಂಡರಿ ಸಹಿತ 27 ರನ್ ಗಳಿಸಿ ಅಕ್ಷ್ ದೀಪ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಕರುಣ್ ನಾಯರ್ ಕೇವಲ 6 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ 109 ಎಸೆತಗಳಲ್ಲಿ 6 ಬೌಂಡರಿ ಸಹಿತ 50 ರನ್ ಗಳಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಕರುಣ್ ನಾಯರ್ 11 ರನ್ ಗಳಿಸಿದ್ದಾರೆ.

ರಣಜಿ ಟ್ರೋಫಿ: ಕರ್ನಾಟಕ ಫೈನಲ್ ಪ್ರವೇಶಿಸಲು 352 ರನ್‌ಗಳ ಗುರಿ

ಇದಕ್ಕೂ ಮೊದಲು ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 72 ರನ್ ಬಾರಿಸಿದ್ದ ಬಂಗಾಳ ತಂಡಕ್ಕೆ ಮೂರನೇ ದಿನದಲ್ಲಿ ಮತ್ತಷ್ಟು ರನ್‌ ಗಳಿಸುವ ಲೆಕ್ಕಾಚಾರವನ್ನು ಕರ್ನಾಟಕ ಬೌಲರ್‌ಗಳು ತಲೆಕೆಳಗೆ ಮಾಡಿದರು. ಅನುಸ್ತೂಪ್(41) ಹಾಗೂ ಶೆಹಬಾಜ್ ಅಹಮ್ಮದ್(31) ಕೆಲಕಾಲ ಕರ್ನಾಟಕ ಬೌಲರ್‌ಗಳ ಎದುರು ಪ್ರತಿರೋಧ ತೋರಿದರು. ಸತತ ಎಸೆತಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ ರೋನಿತ್ ಮೋರೆ ಬಂಗಾಳದ ಸುದೀಪ್ ಚಟ್ಟರ್ಜಿ(45) ಹಾಗೂ ಶ್ರೀವಸ್ತ್ ಗೋಸ್ವಾಮಿ ಅವರನ್ನು ಪೆವಿಲಿಯನ್ನಿಗಟ್ಟಿದರು. ಆ ಬಳಿಕ ಮಿಥುನ್  ಗೂ ಗೌತಮ್ ವಿಕೆಟ ಬಂಗಾಳ ಬಾಲಂಗೋಚಿಗಳನ್ನು  ಬೇಗನೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ಕರ್ನಾಟಕ ಪರ ಅಭಿಮನ್ಯು ಮಿಥುನ್ 3 ವಿಕೆಟ್ ಪಡೆದರೆ, ಕೆ. ಗೌತಮ್ 3, ರೋನಿತ್ ಮೋರೆ 2 ಹಾಗೂ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದರು. 

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್:

"