ರಣಜಿ ಟ್ರೋಫಿ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಬಂಗಾಳ ಹಾಗೂ ಸೌರಾಷ್ಟ್ರ ತಂಡಗಳು ಕಾದಾಡುತ್ತಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಸೌರಾಷ್ಟ್ರ ದಿಟ್ಟ ಆರಂಭವನ್ನು ಪಡೆದಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ರಾಜ್‌ಕೋಟ್‌(ಮಾ.09): 2019-20ರ ರಣಜಿ ಟ್ರೋಫಿ ಫೈನಲ್‌ ಪಂದ್ಯ ಸೋಮವಾರದಿಂದ ಇಲ್ಲಿ ಆರಂಭವಾಗಿದ್ದು, ಬಂಗಾಳ ಎದುರು ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಆಯ್ದುಕೊಂಡಿದೆ. 14 ಓವರ್ ಮುಕ್ತಾಯದ ವೇಳೆಗೆ ಸೌರಾಷ್ಟ್ರ ವಿಕೆಟ್ ನಷ್ಟವಿಲ್ಲದೇ 39 ರನ್ ಗಳಿಸಿದೆ. 

Scroll to load tweet…

ರಣಜಿ ಟ್ರೋಫಿ: ಕರ್ನಾಟಕ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಬಂಗಾಳ

1989-90ರಲ್ಲಿ ಕೊನೆ ಬಾರಿಗೆ ಪ್ರಶಸ್ತಿ ಜಯಿಸಿದ್ದ ಬಂಗಾಳ, ಸೆಮಿಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ತೋರಿದ ಪ್ರದರ್ಶನವನ್ನೇ ಮುಂದುವರಿಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ 2013-14ರಿಂದ ಈ ವರೆಗೂ 4 ಬಾರಿ ಫೈನಲ್‌ ಪ್ರವೇಶಿಸಿರುವ ಸೌರಾಷ್ಟ್ರ, ಈ ಬಾರಿ ಟ್ರೋಫಿ ಎತ್ತಿಹಿಡಿಯಲು ಕಾತರಿಸುತ್ತಿದೆ.

Scroll to load tweet…

ಚೇತೇಶ್ವರ್‌ ಪೂಜಾರ ಸೌರಾಷ್ಟ್ರದ ಬಲ ಹೆಚ್ಚಿಸಲಿದ್ದು, ವೃದ್ಧಿಮಾನ್‌ ಸಾಹ ಸೇರ್ಪಡೆ ಬಂಗಾಳದ ಆತ್ಮವಿಶ್ವಾಸ ವೃದ್ಧಿಸಿದೆ. ಸೌರಾಷ್ಟ್ರ ನಾಯಕ ಜಯದೇವ್‌ ಉನಾದ್ಕತ್‌ ಸೆಮಿಫೈನಲ್‌ನಲ್ಲಿ 7 ವಿಕೆಟ್‌ ಕಬಳಿಸಿ ಮಿಂಚಿದ್ದರು. ತಂಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ಬಂಗಾಳ ತನ್ನ ಹಿರಿಯ ಬ್ಯಾಟ್ಸ್‌ಮನ್‌ಗಳಾದ ಮನೋಜ್‌ ತಿವಾರಿ ಹಾಗೂ ಅನುಸ್ತೂಪ್‌ ಮಜುಂದಾರ್‌ರನ್ನು ನೆಚ್ಚಿಕೊಂಡಿದೆ.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್