Asianet Suvarna News Asianet Suvarna News

Ranji Trophy Final: ಮುಂಬೈಗೆ ಮಧ್ಯಪ್ರದೇಶ ದಿಟ್ಟ ಉತ್ತರ

ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸಾಗುತ್ತಿರುವ ರಣಜಿ ಟ್ರೋಫಿ ಫೈನಲ್‌
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯ
ಬಲಿಷ್ಠ ಮುಂಬೈಗೆ ಭರ್ಜರಿ ತಿರುಗೇಟು ನೀಡುವತ್ತ ಮಧ್ಯಪ್ರದೇಶ

Ranji Trophy Final Madhya Pradesh make solid reply after Sarfaraz Khan Century in Bengaluru kvn
Author
Bengaluru, First Published Jun 24, 2022, 8:24 AM IST

ಬೆಂಗಳೂರು(ಜೂ.24): ಸರ್ಫರಾಜ್‌ ಖಾನ್‌ ಆಕರ್ಷಕ ಶತಕದ ನೆರವಿನಿಂದ ರಣಜಿ ಟ್ರೋಫಿ ಫೈನಲ್‌ (Ranji Trophy Final) ಹಣಾಹಣಿಯಲ್ಲಿ ಮಧ್ಯಪ್ರದೇಶ ವಿರುದ್ಧ ಮುಂಬೈ (Madhya Pradesh vs Mumbai) ಉತ್ತಮ ಮೊತ್ತ ಕಲೆ ಹಾಕಿದೆ. ಆದರೆ ಮಧ್ಯಪ್ರದೇಶ ಕೂಡಾ ಮುಂಬೈಗೆ ತಕ್ಕ ತಿರುಗೇಟು ನೀಡಿದ್ದು, ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಮೊದಲ ದಿನ 5 ವಿಕೆಟ್‌ಗೆ 248 ರನ್‌ ಗಳಿಸಿದ್ದ ಮುಂಬೈ ಕ್ರಿಕೆಟ್ ತಂಡವು (Mumbai Cricket) ಗುರುವಾರ 374ಕ್ಕೆ ಆಲೌಟ್‌ ಆಯಿತು. ಬಳಿಕ ಇನ್ನಿಂಗ್‌್ಸ ಆರಂಭಿಸಿದ ಮಧ್ಯಪ್ರದೇಶ 2ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 123 ರನ್‌ ಕಲೆ ಹಾಕಿದ್ದು, ಇನ್ನೂ 251 ರನ್‌ ಹಿನ್ನಡೆಯಲ್ಲಿದೆ.

ಯಶ್‌ ದುಬೆ ಮತ್ತು ಹಿಮಾಂಶು ಮಂತ್ರಿ ಮೊದಲ ವಿಕೆಟ್‌ಗೆ 47 ರನ್‌ ಜೊತೆಯಾಟವಾಡಿದರು. ಆದರೆ ಮಂತ್ರಿ 31 ರನ್‌ಗೆ ಇನ್ನಿಂಗ್‌್ಸ ಕೊನೆಗೊಳಿಸಿದರು. ಬಳಿಕ ಮುರಿಯದ 2ನೇ ವಿಕೆಟ್‌ಗೆ ಶುಭಂ ಶರ್ಮಾ ಜೊತೆಗೂಡಿ ಮಂತ್ರಿ 76 ರನ್‌ ಜೊತೆಯಾಟವಾಡಿದ್ದು, ತಂಡವನ್ನು ಇನ್ನಿಂಗ್‌್ಸ ಮುನ್ನಡೆಯತ್ತ ಕೊಂಡೊಯ್ಯಲು ಹೋರಾಡುತ್ತಿದ್ದಾರೆ. ಮಂತ್ರಿ 44, ಶುಭಂ 41 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ತುಷಾರ್‌ ದೇಶಪಾಂಡೆ ಏಕೈಕ ವಿಕೆಟ್‌ ಕಿತ್ತರು.

ಸರ್ಫರಾಜ್‌ 4ನೇ ಶತಕ

ಈ ಆವೃತ್ತಿಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿರುವ ಮುಂಬೈ ಬ್ಯಾಟರ್‌ ಸರ್ಫರಾಜ್‌ ಖಾನ್ (Sarfaraz Khan) 6ನೇ ಪಂದ್ಯದಲ್ಲಿ 4ನೇ ಶತಕ ಪೂರ್ತಿಗೊಳಿಸಿದರು. ಮೊದಲ ದಿನ 40 ರನ್‌ ಗಳಿಸಿದ್ದ ಅವರು ಗುರುವಾರವೂ ಮಧ್ಯಪ್ರದೇಶ (Madhya Pradesh Cricket) ಬೌಲರ್‌ಗಳನ್ನು ಚೆಂಡಾಡಿದರು. 243 ಎಸೆತಗಳನ್ನು ಎದುರಿಸಿದ ಅವರು 134 ರನ್‌ ಸಿಡಿಸಿ ನಿರ್ಗಮಿಸಿದರು. ಅವರ ಇನ್ನಿಂಗ್‌್ಸನಲ್ಲಿ 13 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು. ಸರ್ಫರಾಜ್‌ ಈ ವರ್ಷ ರಣಜಿಯಲ್ಲಿ 937 ರನ್‌ ಗಳಿಸಿದ್ದು, ಟೂರ್ನಿಯ ಅಗ್ರ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಇನ್ನುಳಿದಂತೆ ಶಮ್ಸ್‌ ಮುಲಾನಿ 12, ತನುಶ್‌ ಕೋಟ್ಯಾನ್‌ 15 ರನ್‌ ಗಳಿಸಲಷ್ಟೇ ಶಕ್ತರಾದರು.

ಮಧ್ಯ ಪ್ರದೇಶ ಪರ ಗೌರವ್‌ ಯಾದವ್‌ 106 ರನ್‌ಗೆ 4 ವಿಕೆಟ್‌ ಕಿತ್ತರೆ, ಅನುಭವ್‌ ಅಗರ್‌ವಾಲ್‌ 81ಕ್ಕೆ 3 ವಿಕೆಟ್‌ ಕಬಳಿಸಿದರು. ಶರನ್ಸ್‌ ಜೈನ್‌ 2, ಕುಮಾರ್‌ ಕಾರ್ತಿಕೇಯ 1 ವಿಕೆಟ್‌ ಪಡೆದರು.

ಖರ್ಚು ಜಾಸ್ತಿ ಎಂದು ರಣಜಿ ಫೈನಲ್‌ಗೂ ಡಿಆರ್‌ಎಸ್‌ ಇಲ್ಲ!

ಬೆಂಗಳೂರು: ದೇಸಿ ಕ್ರಿಕೆಟ್‌ನ ಅತಿ ದೊಡ್ಡ ಟೂರ್ನಿ ಎನಿಸಿಕೊಂಡಿರುವ ರಣಜಿ ಟ್ರೋಫಿಯಲ್ಲಿ ಅಂಪೈರ್‌ ತೀರ್ಪು ಮರುಪರಿಶೀಲನಾ ನಿಯಮ(ಡಿಆರ್‌ಎಸ್‌) ಅಳವಡಿಸಲು ಬಿಸಿಸಿಐ ಹಿಂದಿನಿಂದಲೂ ಹಿಂಜರಿಯುತ್ತಿದೆ. ಆದರೆ ಅದಕ್ಕೀಗ ಖರ್ಚು ಜಾಸ್ತಿ ಎಂಬ ಕಾರಣ ನೀಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಮುಂಬೈ-ಮಧ್ಯಪ್ರದೇಶ ನಡುವಿನ 2022ರ ರಣಜಿ ಫೈನಲ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೊದಲ ದಿನವೇ ಕೆಲ ಅಂಪೈರ್‌ ನಿರ್ಧಾರಗಳು ಚರ್ಚೆಗೆ ಕಾರಣವಾಗಿದೆ. ಈ ನಡುವೆ ರಣಜಿಯ ಫೈನಲ್‌ನಲ್ಲಾದರೂ ಡಿಆರ್‌ಎಸ್‌ ಬಳಸುವ ಬಗ್ಗೆ ಬಿಸಿಸಿಐಗೆ ಪ್ರಶ್ನಿಸಲಾಗಿದ್ದು, ಅಧಿಕಾರಿಗಳು ಇದಕ್ಕೆ ಖರ್ಚು ಜಾಸ್ತಿಯಾಗುತ್ತದೆ ಎಂಬ ಕಾರಣ ನೀಡಿದ್ದಾರೆ ಎಂದು ಗೊತ್ತಾಗಿದೆ.

Ranji Trophy Final: ಮುಂಬೈ-ಮಧ್ಯಪ್ರದೇಶ ನಡುವೆ ಪ್ರಶಸ್ತಿಗಾಗಿಂದು ಫೈನಲ್ ಫೈಟ್

ಡಿಆರ್‌ಎಸ್‌ ಅಳವಡಿಸಲು ಇನ್ನಷ್ಟು ಕ್ಯಾಮರಾಗಳ ಅಗತ್ಯವಿದೆ. ಅದಕ್ಕೆ ಖರ್ಚು ಕೂಡಾ ಜಾಸ್ತಿ. ನಮಗೆ ನಮ್ಮ ಅಂಪೈರ್‌ಗಳ ಮೇಲೆ ನಂಬಿಕೆ ಇದೆ. ಒಂದು ವೇಳೆ ಫೈನಲ್‌ನಲ್ಲಿ ಡಿಆರ್‌ಎಸ್‌ ಅಳವಡಿಸಿದರೆ ಮುಂದೆ ಲೀಗ್‌ ಹಂತಕ್ಕೂ ಅದನ್ನು ಬಳಸಬೇಕಾಗಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಬಿಸಿಸಿಐ 2019-20ರಲ್ಲಿ ಸೆಮಿಫೈನಲ್‌, ಫೈನಲ್‌ನಲ್ಲಿ ಡಿಆರ್‌ಎಸ್‌ ಬಳಸಿತ್ತು.

ಸಂಕ್ಷಿಪ್ತ ಸ್ಕೋರ್‌

ಮುಂಬೈ ಮೊದಲ ಇನ್ನಿಂಗ್ಸ್ 374/10(ಮೊದಲ ದಿನದಂತ್ಯಕ್ಕೆ 248/5) 
ಸರ್ಫರಾಜ್‌ 134, ಗೌರವ್‌ 4-106, ಅಗರ್‌ವಾಲ್‌ 3-81), 

ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‌ 123/1(ಎರಡನೇ ದಿನದಾಟದಂತ್ಯದ ವೇಳೆಗೆ) 
(ಯಶ್‌ ಔಟಾಗದೆ 44, ಶುಭಂ ಔಟಾಗದೆ 41, ದೇಶಪಾಂಡೆ 1-31)

Follow Us:
Download App:
  • android
  • ios