ನವದೆಹಲಿ(ಏ.19): ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ಕೆಲದಿನಗಳಿಂದ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮಗ ರಣ್ಬೀರ್ ಕಪೂರ್ ಹಳೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಂಚಿಕೊಂಡ ಒಂದು ಚಿತ್ರದಲ್ಲಿ ರಣ್ಬೀರ್ ಕಪೂರ್ ಕ್ರಿಕೆಟ್ ಆಡುತ್ತಿದ್ದು, ಇವರಿಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಾಥ್ ನೀಡಿದ್ದಾರೆ.

ಈ ಫೋಟೋದಲ್ಲಿ ಸಚಿನ್ ತೆಂಡುಲ್ಕರ್ ಬ್ಯಾಟ್ ಹಿಡಿದು ನಿಂತಿದ್ದರೆ, ರಣ್ಬೀರ್ ಸ್ಮೈಲ್‌ನೊಂದಿಗೆ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಈ ಫೋಟೋದೊಂದೊಗೆ  ಆಶಾದಾಯಕ ಸಾಲೊಂದನ್ನು ನೀತು ಪೋಣಿಸಿದ್ದಾರೆ. ಕಾಯಿಲೆ, ಒತ್ತಡದಿಂದ ಬಳಲುವಂತೆ ಮಾಡಿರುವ ವೈರಸನ್ನು ಈ ಜಗತ್ತಿನಿಂದಲೇ ಒದ್ದೋಡಿಸುವ ಶಕ್ತಿಯನ್ನು ನಾವೆಲ್ಲ ಹೊಂದುವಂತಾಗಲಿ ಎಂದು ಬರೆದುಕೊಂಡಿದ್ದಾರೆ. 

ಎರಡು ವರ್ಷಗಳ ಹಿಂದೆ ಸಂಜು ಸಿನೆಮಾ ವೀಕ್ಷಿಸಿದ ನಂತರ ರಣ್ಬೀರ್ ಬಗ್ಗೆ ಸಚಿನ್ ತೆಂಡುಲ್ಕರ್, ಸಂಜು ಸಿನೆಮಾವನ್ನು ಎಂಜಾಯ್ ಮಾಡಿದೆ. ಅದರಲ್ಲೂ ರಣ್ಬೀರ್ ಪ್ರದರ್ಶನ ಅದ್ಭುತವಾಗಿತ್ತು. ಪರೇಶ್ ರಾವಲ್, ವಿಕಿ ಕೌಶಲ್ ಎಲ್ಲರೂ ಪಾತ್ರದಲ್ಲಿ ಪರಕಾಶ ಪ್ರವೇಶಿಸಿದ್ದರು ಎಂದು ಟ್ವೀಟ್ ಮಾಡಿದ್ದರು.

ಒಂದೇ ದಿನ 33 ಸಾವಿರ ಕೊರೋನಾ ಕೇಸ್, ಅಮೆರಿಕದಲ್ಲಿ ವೈರಸ್ ಬಿರುಗಾಳಿ!

ಸದ್ಯ ರಣ್ಬೀರ್ ತನ್ನ ಪೋಷಕರೊಂದಿಗೆ ಲಾಕ್‌ಡೌನ್ ಆಗಿಲ್ಲ, ಬದಲಾಗಿ ಆಲಿಯಾ ಭಟ್ ಅವರೊಂದಿಗೆ ಲಾಕ್ ಆಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಈ ಜೋಡಿ ಒಟ್ಟಾಗಿ ಮನೆಯ ಮುಂದೆ ನಾಯಿಯೊಂದನ್ನು ಹಿಡಿದು ಓಡಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಆರ್ಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ಹಾಗೂ ರಣ್ಬೀರ್ ಮೊದಲ ಬಾರಿಗೆ ಬಿಗ್ ಸ್ಕ್ರೀನ್‌ನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.