ಪಂಜಾಬ್ ಎದುರು 8 ವಿಕೆಟ್ ಜತ ಸಾಧಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿಯುಂಡ ಆರೆಂಜ್ ಆರ್ಮಿಅಜೇಯ ಅರ್ಧಶತಕ ಸಿಡಿಸಿ ಮಿಂಚಿದ ರಾಹುಲ್ ತ್ರಿಪಾಠಿ

ಹೈದರಾಬಾದ್‌(ಏ.09): ಬೌಲರ್‌ಗಳ ಸಂಘಟಿಯ ಪ್ರದರ್ಶನ ಹಾಗೂ ರಾಹುಲ್ ತ್ರಿಪಾಠಿ ಆಕರ್ಷಕ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಪಂಜಾಬ್‌ ಕಿಂಗ್ಸ್‌ ಎದುರು ಸನ್‌ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ ಜಯ ಸಾಧಿಸಿದೆ.

ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಸವಾಲಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌, ಆರಂಭದಲ್ಲೇ ಹ್ಯಾರಿ ಬ್ರೂಕ್‌(13) ಹಾಗೂ ಮಯಾಂಕ್‌ ಅಗರ್‌ವಾಲ್‌(21) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ವಿಕೆಟ್‌ಗೆ ರಾಹುಲ್ ತ್ರಿಪಾಠಿ ಹಾಗೂ ಏಯ್ಡನ್‌ ಮಾರ್ಕಮ್‌ ಮೂರನೇ ವಿಕೆಟ್‌ಗೆ ಮುರಿಯದ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಹುಲ್ ತ್ರಿಪಾಠಿ 48 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 74 ರನ್ ಬಾರಿಸಿದರೆ, ನಾಯಕ ಏಯ್ಡನ್ ಮಾರ್ಕ್‌ರಮ್‌ ಸಮಯೋಚಿತ 37 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Scroll to load tweet…

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಂಜಾಬ್ ಕಿಂಗ್ಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಎಲ್‌ಬಿ ಬಲೆಗೆ ಕೆಡವಿ ಪೆವಿಲಿಯನ್ ಪೆರೇಡ್ ಮಾಡುವಂತೆ ಮಾಡಿದರು. ಇನ್ನು ಮ್ಯಾಥ್ಯೂ ಶಾರ್ಟ್‌ ಕೂಡಾ ಕಮಾಲ್ ಮಾಡಲು ಮಾರ್ಕೊ ಯಾನ್ಸೆನ್‌ ಅವಕಾಶ ನೀಡಲಿಲ್ಲ. ಶಾರ್ಟ್ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ 4 ರನ್‌ ಬಾರಿಸಿ ಮಾರ್ಕೊ ಯಾನ್ಸೆನ್‌ಗೆ ಎರಡನೇ ಬಲಿಯಾದರು. ಪಂಜಾಬ್ 22 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. 

IPL 2023 ಸನ್‌ರೈಸರ್ಸ್ ಬೆಂಕಿ ಬೌಲಿಂಗ್ ನಡುವೆ ಧವನ್ ಏಕಾಂಗಿ ಹೋರಾಟ, 144 ರನ್ ಟಾರ್ಗೆಟ್

ಇನ್ನು 4ನೇ ವಿಕೆಟ್‌ಗೆ ನಾಯಕ ಶಿಖರ್ ಧವನ್ ಹಾಗೂ ಸ್ಯಾಮ್‌ ಕರ್ರನ್ ಉಪಯುಕ್ತ 41 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ಸ್ಯಾಮ್‌ ಕರ್ರನ್‌ 15 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 22 ರನ್ ಬಾರಿಸಿ ಮಯಾಂಕ್‌ ಮಾರ್ಕಂಡೆಗೆ ವಿಕೆಟ್ ಒಪ್ಪಿಸಿದರು. 

ಶಿಖರ್ ಧವನ್ ಏಕಾಂಗಿ ಹೋರಾಟ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದೆಡೆ ನಾಯಕನ ಆಟವಾಡಿದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಧವನ್‌ 66 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 99 ರನ್‌ ಬಾರಿಸಿ ಮಿಂಚಿದರು. ಪಂಜಾಬ್ ಕಿಂಗ್ಸ್‌ ತಂಡದ ಪರ ಧವನ್‌(99*) ಹಾಗೂ ಸ್ಯಾಮ್ ಕರ್ರನ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಇದು ಪಂಜಾಬ್ ಕಿಂಗ್ಸ್‌ ತಂಡವು ಬೃಹತ್ ಮೊತ್ತ ಗಳಿಸುವ ಕನಸಿಗೆ ತಣ್ಣೀರೆರಚುವಂತೆ ಮಾಡಿತು.