ಚೆನ್ನೈ ಟೆಸ್ಟ್: ಭಾರತದಲ್ಲಿ ಟೆಸ್ಟ್‌ ವಿಕೆಟ್‌ ಖಾತೆ ತೆರೆದ ಬುಮ್ರಾ..!

ಚೆನ್ನೈ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಮೊದಲ ಸೆಷನ್‌ನಲ್ಲೇ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ರೋಚಕ ಪೈಪೋಟಿ ಏರ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

R Ashwin Jasprit Bumrah gets Breakthrough for India in Chennai Test kvn

ಚೆನ್ನೈ(ಫೆ.05): ರೋರಿ ಬರ್ನ್ಸ್‌ ಹಾಗೂ ಡಾಮಿನಿಕ್ ಸಿಬ್ಲಿ ಉತ್ತಮ ಆರಂಭದ ಹೊರತಾಗಿಯೂ ಮೊದಲ ಸೆಷನ್‌ನ ಕೊನೆಯಲ್ಲಿ ಭಾರತೀಯ ಬೌಲರ್‌ಗಳ ಕೈಚಳಕದಿಂದ ಪ್ರವಾಸಿ ತಂಡಕ್ಕೆ ಆತಿಥೇಯ ಟೀಂ ಇಂಡಿಯಾ ತಿರುಗೇಟು ನೀಡುವಲ್ಲಿ ಯುಶಸ್ವಿಯಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ತವರಿನಲ್ಲಿ ಟೆಸ್ಟ್ ವಿಕೆಟ್‌ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಂಚ್ ಬ್ರೇಕ್‌ ವೇಳೆಗೆ ಇಂಗ್ಲೆಂಡ್ 2  ವಿಕೆಟ್ ಕಳೆದುಕೊಂಡು 67 ರನ್‌ ಬಾರಿಸಿದೆ.

ಹೌದು, ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು.  ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್‌ ಮಾಡಿದ ಬರ್ನ್ಸ್‌ ಹಾಗೂ ಸಿಬ್ಲಿ ಜೋಡಿ ಮೊದಲ ವಿಕೆಟ್‌ಗೆ 63 ರನ್‌ಗಳ ಜತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ರೋರಿ ಬರ್ನ್ಸ್‌ ಆಫ್‌ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ ಬೌಲಿಂಗ್‌ನಲ್ಲಿ ರಿವರ್ಸ್‌ ಸ್ವೀಪ್‌ ಮಾಡುವ ಯತ್ನದಲ್ಲಿ ವಿಕೆಟ್ ಕೀಪರ್‌ ರಿಷಭ್‌ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ದಾಳಿಗಿಳಿದ ವೇಗಿ ಜಸ್ಪ್ರೀತ್‌ ಬುಮ್ರಾ ಇಂಗ್ಲೆಂಡ್ ಯುವ ಬ್ಯಾಟ್ಸ್‌ಮನ್‌ ಡೇನಿಯಲ್ ಲಾರೆನ್ಸ್‌(0) ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚೆನ್ನೈ ಟೆಸ್ಟ್‌: ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ

ಸದ್ಯ ಇಂಗ್ಲೆಂಡ್‌ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಡೋಮಿನಿಕ್ ಸಿಬ್ಲಿ(26) ಹಾಗೂ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ನಾಯಕ ಜೋ ರೂಟ್‌(4) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಭಾರತದಲ್ಲಿ ಮೊದಲ ಟೆಸ್ಟ್ ವಿಕೆಟ್‌ ಪಡೆದ ಬುಮ್ರಾ: 
2018ರಲ್ಲಿ ದ.ಆಫ್ರಿಕಾದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಬುಮ್ರಾ, ಈ ವರೆಗೂ ಆಡಿರುವ ಎಲ್ಲಾ 17 ಟೆಸ್ಟ್‌ಗಳನ್ನು ವಿದೇಶಿ ನೆಲದಲ್ಲೇ 79 ವಿಕೆಟ್‌ ಕಬಳಿಸಿದ್ದರು. ಇದೀಗ ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಬುಮ್ರಾ 7ನೇ ಓವರ್‌ನಲ್ಲೇ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

Latest Videos
Follow Us:
Download App:
  • android
  • ios