Asianet Suvarna News Asianet Suvarna News

ಪಂಜಾಬ್‌ ನಾಯಕತ್ವದಿಂದ ಮಯಾಂಕ್‌ಗೆ ಕೊಕ್‌..? ಇಂಗ್ಲೆಂಡ್‌ ಕ್ರಿಕೆಟಿಗನಿಗೆ ನಾಯಕ ಪಟ್ಟ..?

ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬದಲಾವಣೆ
ಮುಂಬರುವ ಐಪಿಎಲ್‌ಗೂ ಮುನ್ನ ಪಂಜಾಬ್ ಕಿಂಗ್ಸ್‌ ತಂಡದಲ್ಲಿ ಕ್ಯಾಪ್ಟನ್, ಕೋಚ್ ಚೇಂಜ್
ಇಂಗ್ಲೆಂಡ್ ಆಟಗಾರ ಪಂಜಾಬ್ ಕಿಂಗ್ಸ್‌ ಕ್ಯಾಪ್ಟನ್ ಆಗುವ ಸಾಧ್ಯತೆ

Punjab Kings set to sack captain Mayank Agarwal ahead of IPL 2023 kvn
Author
Bengaluru, First Published Aug 23, 2022, 11:06 AM IST

ನವದೆಹಲಿ(ಆ.23): ಕಳೆದ 8 ಐಪಿಎಲ್‌ ಆವೃತ್ತಿಗಳಲ್ಲಿ ಪ್ಲೇ-ಆಫ್‌ಗೇರಲು ವಿಫಲವಾಗಿದ್ದ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಮತ್ತೊಮ್ಮೆ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ಕೆ.ಎಲ್‌.ರಾಹುಲ್‌ ನಿರ್ಗಮನದ ಬಳಿಕ 2022ರಲ್ಲಿ ತಂಡದ ನಾಯಕತ್ವ ವಹಿಸಿದ್ದ ಮಯಾಂಕ್‌ ಅಗರ್‌ವಾಲ್‌ರನ್ನು ಆ ಸ್ಥಾನದಿಂದ ಬಿಡುಗಡೆ ಮಾಡಲು ಫ್ರಾಂಚೈಸಿ ಚಿಂತನೆ ನಡೆಸುತ್ತಿದ್ದು, ಇಂಗ್ಲೆಂಡ್‌ ಬ್ಯಾಟರ್‌ ಜಾನಿ ಬೇರ್‌ಸ್ಟೋವ್‌ಗೆ ನಾಯಕತ್ವ ವಹಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನು ಹೆಡ್‌ ಕೋಚ್‌ ಸ್ಥಾನದಿಂದ ಅನಿಲ್‌ ಕುಂಬ್ಳೆ ಅವರನ್ನು ಕೂಡಾ ಕೈಬಿಡುವ ಸಾಧ್ಯತೆ ಇದ್ದು, ಈ ಸ್ಥಾನಕ್ಕೆ ಇಯಾನ್‌ ಮೊರ್ಗನ್‌ ಅಥವಾ ಆಸ್ಪ್ರೇಲಿಯಾದ ಟ್ರೆವರ್‌ ಬೇಲಿಸ್‌ರನ್ನು ಫ್ರಾಂಚೈಸಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ. ಅನಿಲ್‌ ಕುಂಬ್ಳೆ ಅವರ 3 ವರ್ಷದ ಗುತ್ತಿಗೆ 2022ರ ಆವೃತ್ತಿಯ ಬಳಿಕ ಮುಕ್ತಾಯಗೊಂಡಿದ್ದು, ತಂಡದ ಮಾಲಿಕರು ಅವರ ಗುತ್ತಿಗೆಯನ್ನು ನವೀಕರಿಸುವ ಸಾಧ್ಯತೆ ಇಲ್ಲ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. ಕುಂಬ್ಳೆ ಕೋಚ್‌ ಆದ ಬಳಿಕ ಪಂಜಾಬ್‌ 42 ಪಂದ್ಯಗಳನ್ನು ಆಡಿದ್ದು ಕೇವಲ 19ರಲ್ಲಿ ಗೆದ್ದಿದೆ. 

17 ವರ್ಷ ಬಳಿಕ ಪಾಕ್‌ನಲ್ಲಿ ಟೆಸ್ಟ್‌ ಆಡಲಿರುವ ಇಂಗ್ಲೆಂಡ್‌

ಇಸ್ಲಾಮಾಬಾದ್‌: 17 ವರ್ಷಗಳ ಬಳಿಕ ಇಂಗ್ಲೆಂಡ್‌ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್‌ನಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಸೋಮವಾರ ಮಾಹಿತಿ ನೀಡಿದೆ. ಕಳೆದ ವರ್ಷ ಭದ್ರತಾ ಸಮಸ್ಯೆಯ ಕಾರಣ ಪಾಕ್‌ ಪ್ರವಾಸ ರದ್ದುಗೊಳಿಸಿದ್ದ ಇಂಗ್ಲೆಂಡ್‌ ಮುಂದಿನ ತಿಂಗಳು ಪಾಕ್‌ನಲ್ಲಿ 7 ಟಿ20 ಪಂದ್ಯಗಳನ್ನಾಡಲಿದೆ. ಟಿ20 ವಿಶ್ವಕಪ್‌ ಬಳಿಕ ವರ್ಷಾಂತ್ಯದಲ್ಲಿ ಮತ್ತೆ ಪಾಕ್‌ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್‌, ಡಿ.1ರಿಂದ 21ರ ವರೆಗೆ 3 ಟೆಸ್ಟ್‌ ಪಂದ್ಯಗಳನ್ನಾಡಲಿದೆ. ಪಂದ್ಯಗಳಿಗೆ ಕ್ರಮವಾಗಿ ರಾವಲ್ಪಿಂಡಿ, ಮುಲ್ತಾನ್‌ ಹಾಗೂ ಕರಾಚಿ ಕ್ರೀಡಾಂಗಣ ಆತಿಥ್ಯ ವಹಿಸಲಿವೆ ಎಂದು ಪಿಸಿಬಿ ತಿಳಿಸಿದೆ. 2005ರಲ್ಲಿ ಕೊನೆ ಬಾರಿಗೆ ಇಂಗ್ಲೆಂಡ್‌ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.

ವಿಂಡೀಸ್‌ ಏಕದಿನ ಸರಣಿ 2-1ರಿಂದ ಗೆದ್ದ ಕಿವೀಸ್‌

ಬ್ರಿಡ್ಜ್‌ಟೌನ್‌: ವೆಸ್ಟ್‌ಇಂಡೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ 5 ವಿಕೆಟ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಕೈವಶಪಡಿಸಿಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 8 ವಿಕೆಟ್‌ ಕಳೆದುಕೊಂಡು 301 ರನ್‌ ಕಲೆ ಹಾಕಿತು. ಕೈಲ್‌ ಮೇಯ​ರ್‍ಸ್(105) ಶತಕ ಬಾರಿಸಿದರೆ, ನಿಕೋಲಸ್‌ ಪೂರನ್‌ 55 ಎಸೆತಗಳಲ್ಲಿ 91 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಕಿವೀಸ್‌ 47.1 ಓವರಲ್ಲಿ 5 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಲ್ಯಾಥಮ್‌ 69, ಡ್ಯಾರಿಲ್‌ ಮಿಚೆಲ್‌ 63, ಗಪ್ಟಿಲ್‌ 57 ಹಾಗೂ ಕಾನ್‌ವೇ 56 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

Follow Us:
Download App:
  • android
  • ios