2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಪುಣೆ[ಅ.10]: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಆಲ್ರೌಂಡರ್ ಹನುಮಾ ವಿಹಾರಿ ಬದಲಿಗೆ ಉಮೇಶ್ ಯಾದವ್ ಸ್ಥಾನ ಪಡೆದಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಡೀನ್ ಪಿಯೆಟ್ ಬದಲಿಗೆ ಆ್ಯನ್ರಿಚ್ ನೋರ್ಜೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

Scroll to load tweet…

ಕಳೆದ ಟೆಸ್ಟ್ ಪಂದ್ಯದಲ್ಲೂ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಜತೆಗೆ ಪಂದ್ಯವನ್ನೂ ಜಯಿಸಿದ್ದರು. ಆದರೆ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಏಷ್ಯಾದಲ್ಲಿ ಸತತ 9 ಬಾರಿಗೆ ಟಾಸ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಈ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿದ್ದರೆ, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 

ಕೊಹ್ಲಿಗಿದು 50ನೇ ನಾಯಕತ್ವದ ಪಂದ್ಯ: ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ 50ನೇ ಟೆಸ್ಟ್ ಪಂದ್ಯವನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ಭಾರತ 50 ಪಂದ್ಯವನ್ನು ಮುನ್ನಡೆಸುತ್ತಿರುವ ಎರಡನೇ ನಾಯಕ ಎನ್ನುವ ಗೌರವಕ್ಕೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೊದಲು ಎಂ.ಎಸ್. ಧೋನಿ 60 ಬಾರಿ ಟೆಸ್ಟ್ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈಗಾಗಲೇ ಭಾರತಕ್ಕೆ ಅತಿಹೆಚ್ಚು ಟೆಸ್ಟ್ ಗೆಲುವನ್ನು ತಂದುಕೊಟ್ಟ ನಾಯಕ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ[29] ಇದೀಗ ತಮ್ಮ 50ನೇ ನಾಯಕತ್ವದ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಎದುರು ನೋಡುತ್ತಿದ್ದಾರೆ. 

ತಂಡಗಳು ಹೀಗಿವೆ:

ಭಾರತ

Scroll to load tweet…

ದಕ್ಷಿಣ ಆಫ್ರಿಕಾ: 

Scroll to load tweet…