* ಮೂರನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಹೀನಾಯ ಪ್ರದರ್ಶನ*  ನಾಯಕ ವಿರಾಟ್‌ ಕೊಹ್ಲಿಗೆ ಬ್ಯಾಟಿಂಗ್‌ ಸಲಹೆ ನೀಡಿದ  ಹಿರಿಯ ಆಟಗಾರ* ಟಾಸ್ ಗೆದ್ದು ಮೂರನೇ ಟೆಸ್ಟ್‌ ಪ್ರಥಮ ಇನಿಂಗ್ಸ್‌ನಲ್ಲಿ  7 ರನ್‌ಗೆ ಔಟ್‌ ಆಗಿದ್ದ ಕೊಹ್ಲಿ* ಭಾರತ ಕೇವಲ  78  ರನ್ ಗೆ ಆಲೌಟ್ ಆಗಿತ್ತು

ನವದೆಹಲಿ(ಆ. 26) ಎರಡನೇ ಟೆಸ್ಟ್ ಗೆದ್ದು ಬಿಗಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಅಗ್ರ ಕ್ರಮಾಂಕದ ಬ್ಯಾಟಿಂಗ್ ದಾಂಡಿಗರು ಎರಡಂಕಿಯನ್ನು ಮುಟ್ಟದೇ ಫೆವಿಲಿಯನ್ ಸೇರಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಗಳಿಸಿದ್ದ ಏಳು ರನ್!

ಸೋಶಿಯಲ್ ಮೀಡಿಯಾದಲ್ಲಿ ಭಾರತದ ಬ್ಯಾಟಿಂಗ್ ಅದರಲ್ಲಿಯೂ ವಿರಾಟ್ ಕೊಹ್ಲಿ ಮೇಲೆ ಟೀಕೆಗಳ ಸುರಿಮಳೆ ಬಂದಿತ್ತು. ಭಾರತದ ಮಾಜಿ ಕ್ರಿಕೆಟಿಗ ಮಣೀಂದರ್ ಸಿಂಗ್‌ ಕೊಹ್ಲಿಗೆ ಸಲಹೆಯೊಂದನ್ನು ನೀಡಿದ್ದಾರೆ.

ದಶಕಗಳ ಬಳಿಕ ಕಡಿಮೆ ಮೊತ್ತಕ್ಕೆ ಉರುಳಿದ ಟೀಂ ಇಂಡಿಯಾ

ಕ್ರೀಸ್ ನಲ್ಲಿ ಆಡುತ್ತ ಹೆಚ್ಚು ರನ್ ಗಳಿಸಬೇಕು ಎಂದರೆ ಅಹಂ ಭಾವನೆಯನ್ನು ಜೇಬಿನಲ್ಲಿ ಇಟ್ಟುಕೊಂಡು ಆಡಿ ಎಂದು ಮಣೀಂದರ್ ಕಟುವಾದ ಸಲಹೆಯನ್ನೇ ನೀಡಿದ್ದಾರೆ. ಕೊಹ್ಲಿ ಸಹ ಇದೇ ಮಾತನ್ನು ತಂಡದ ಆಟಗಾರರಿಗೆ ಹೇಳಿದ್ದರು. ಅವರೇ ಅದನ್ನು ಪಾಲಿಸಿದಂತೆ ಕಾಣುತ್ತಿಲ್ಲ ಎಂದು ಮಣೀಂದರ್ ಹೇಳಿದ್ದಾರೆ.

2014ರಲ್ಲಿ ಔಟ್‌ ಆದ ರೀತಿಯಲ್ಲಿಯೇ ಈ ಪ್ರವಾಸದಲ್ಲಿಯೂ ಕೊಹ್ಲಿ ಔಟ್‌ ಆಗುತ್ತಿದ್ದಾರೆ. 7 ವರ್ಷಗಳ ಹಿಂದಿನ ಪ್ರವಾಸದಲ್ಲಿ ಆಡಿದ್ದ 10 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 138 ರನ್‌. ಹಾಗಾಗಿ ಬ್ಯಾಟಿಂಗ್ ಬಗ್ಗೆ ನಿಮ್ಮ ಏಕಾಗ್ರತೆ ಸರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 

 ಇಡೀ ದೇಶ 2018 ರಲ್ಲಿ ನೀವು ಆಡಿದ ಆಟ ಎದುರು ನೋಡುತ್ತಿದೆ. ಸಹ ಆಟಗಾರರಿಗೆ ನೀವು ಹೇಳಿದ ಮಾತನ್ನು ಮೊದಲು ನೀವು ಪಾಲಿಸಿ ಎಂದು ಕಿವಿಮಾತು ಹೇಳಿದ್ದಾರೆ. ಭಾರತದ ಪಿಚ್, ವಿದೇಶದ ಪಿಚ್ ಎಂದು ಬೇರೆ ನೋಡಬೇಕಾಗಿಲ್ಲ ಎಂದು ಹೇಳಿದ್ದಾರೆ.