Asianet Suvarna News Asianet Suvarna News

ಪುರುಷ ಕ್ರಿಕೆಟಿಗರಿಗೂ ಮಿಥಾಲಿ ರಾಜ್‌ ಸ್ಫೂರ್ತಿ: ಮೋದಿ ಮೆಚ್ಚುಗೆ

ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಕೊಂಡಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

PM Narendra Modi Hails Womens Cricketer Mithali Raj in Mann Ki Baat programme kvn
Author
New Delhi, First Published Mar 29, 2021, 8:32 AM IST

ನವದೆಹಲಿ(ಮಾ.29): ಭಾರತ ಮಹಿಳಾ ತಂಡದ ಏಕದಿನ ನಾಯಕಿ ಮಿಥಾಲಿ ರಾಜ್‌ ಹಾಗೂ ಪಿ.ವಿ.ಸಿಂಧು ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮನಃಪೂರ್ವಕವಾಗಿ ಶ್ಲಾಘಿಸಿದ್ದು, ಕ್ರೀಡಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ತೋರುತ್ತಿರುವ ಸಾಧನೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ನವದೆಹಲಿಯಲ್ಲಿ ಭಾನುವಾರವಷ್ಟೇ ಮುಕ್ತಾಯಗೊಂಡ ವಿಶ್ವಕಪ್‌ ಶೂಟಿಂಗ್‌ನಲ್ಲೂ ಸಾಧನೆ ಮೆರೆದ ಭಾರತೀಯ ಶೂಟರ್‌ಗಳನ್ನು ಅಭಿನಂದಿಸಿದ್ದಾರೆ.

ಭಾನುವಾರ(ಮಾ.28)ದಂದು ನಡೆದ ಮನ್‌ ಕೀ ಬಾತ್‌ನಲ್ಲಿ ಮಿಥಾಲಿ ರಾಜ್‌ ಸಾಧನೆಯನ್ನು ಹೊಗಳಿದ ಮೋದಿ, ಮಹಿಳಾ ಕ್ರಿಕೆಟ್‌ಗೆ ಮಿಥಾಲಿ ರಾಜ್‌ ಕೊಡುಗೆ ಅದ್ಭುತ. ತಮ್ಮ 2 ದಶಕದ ವೃತ್ತಿಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮದ ಕಥೆ ಹಾಗೂ ಯಶಸ್ಸು ಮಹಿಳಾ ಆಟಗಾರ್ತಿಯರಿಗೆ ಮಾತ್ರವಲ್ಲ ಪುರುಷರ ಕ್ರಿಕೆಟಿಗರಿಗೂ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ.

ಮಹಿಳಾ ಕ್ರಿಕೆಟ್‌: 10 ಸಾವಿರ ರನ್ ಬಾರಿಸಿ ಹೊಸ ದಾಖಲೆ ಬರೆದ ಮಿಥಾಲಿ ರಾಜ್‌..!

ಮಿಥಾಲಿ ರಾಜ್‌ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ಸಾವಿರ ರನ್‌ ಪೂರೈಸಿದ್ದರು. ಈ ಸಾಧನೆ ಮಾಡಿದ ಭಾರತದ ಏಕೈಕ ಆಟಗಾರ್ತಿ ಮಿಥಾಲಿ ಆಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 7,000ಕ್ಕಿಂತ ಅಧಿಕ ರನ್‌ ಬಾರಿಸಿರುವ ವಿಶ್ವದ ಏಕೈಕ ಆಟಗಾರ್ತಿ ಮಿಥಾಲಿ. ಇನ್ನು ಮೋದಿ ತನ್ನ ಮನ್‌ ಕೀ ಬಾತ್‌ನಲ್ಲಿ ಕಳೆದ ತಿಂಗಳಷ್ಟೇ ನಡೆದ ಸ್ವಿಸ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಪಿ.ವಿ.ಸಿಂಧು ಸಾಧನೆಯನ್ನು ಕೊಂಡಾಡಿದ್ದಾರೆ.
 

Follow Us:
Download App:
  • android
  • ios