ಆರ್‌ಸಿಬಿ ಮಾಜಿ ಕೋಚ್‌ಗೆ ಹೊಸ ಜವಾಬ್ದಾರಿ, ಸನ್‌ರೈಸರ್ಸ್ ತಂಡ ಸೇರಿಕೊಂಡ ವೆಟೋರಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕೋಚ್ ಡೆನಿಯಲ್ ವೆಟೋರಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಹೈದರಾಬಾದ್(ಆ.07): ಏಷ್ಯಾಕಪ್ ಟೂರ್ನಿ, ಏಕದಿನ ವಿಶ್ವಕಪ್ ಟೂರ್ನಿಗಳ ತಯಾರಿ ನಡೆಯುತ್ತಿದೆ. ಇದರ ನಡುವೆ ಫ್ರಾಂಚೈಸಿಗಳು 2024ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿದೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡದ ಕೋಚಿಂಗ್, ಮೆಂಟರ್ ಸೇರಿದಂತೆ ಸಪೋರ್ಟ್ ಸ್ಟಾಫ್‌ನಲ್ಲಿ ಮಹತ್ತರ ಬದಲಾವಣೆ ಮಾಡುತ್ತಿದೆ. ಇದೀಗ ಹೈದರಾಬಾದ್ ತಂಡ ಮುಖ್ಯ ಕೋಚ್ ಆಗಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕೋಚ್ ಡೆನಿಯಲ್ ವೆಟೋರಿಯನ್ನು ನೇಮಕ ಮಾಡಿದೆ.
2024ರ ಐಪಿಎಲ್ ಟೂರ್ನಿಯಲ್ಲಿ ಡೆನಿಯಲ್ ವೆಟೋರಿ ಹೈದರಾಬಾದ್ ತಂಡದ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಐಪಿಎಲ್ ಆವತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು. ಇಷ್ಟೇ ಅಲ್ಲ ಮತ್ತೆ ಪ್ಲೇ ಆಫ್ ಹಂತಕ್ಕೇರುವ ಕನಸನ್ನು ಛಿದ್ರಗೊಳಿಸಿತ್ತು. ಹೀಗಾಗಿ ತಂಡದ ಸಪೋರ್ಟ್ ಸ್ಟಾಫ್ ಬದಲಾಯಿಸಲಾಗಿದೆ. ಪ್ರಧಾನ ಕೋಚ್ ಆಗಿದ್ದ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಬದಲು, ಮುಂದಿನ ಆವೃತ್ತಿಯಲ್ಲಿ ಡೆನಿಯಲ್ ವೆಟೋರಿ ಕೆಲಸ ಮಾಡಲಿದ್ದಾರೆ.
IPL 2024: RCB ತಂಡಕ್ಕೆ ಚಾಂಪಿಯನ್ ಕೋಚ್ ಸೇರ್ಪಡೆ..! ಇನ್ನಾದರೂ ಬದಲಾಗುತ್ತಾ ಬೆಂಗಳೂರು ಲಕ್?
ಕಳೆದ ಐಪಿಎಲ್ ಟೂರ್ನಿಯ 14 ಲೀಗ್ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 4 ಗೆಲುವು ಹಾಗೂ 14 ಸೋಲು ಕಂಡಿತ್ತು. ಕಳೆದ 6 ಆವೃತ್ತಿಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ರತಿ ಆವೃತ್ತಿಗೂ ಕೋಚ್‌ಗಳನ್ನು ಬದಲಾಯಿಸಿದೆ. ಆದರೆ ಪ್ರತಿ ಆವೃತ್ತಿಯಲ್ಲಿ ಪ್ಲೇ ಆಫ್ ಹಂತಕ್ಕೇರದೇ ನಿರಾಸೆಭವಿಸಿದೆ.
ಕಾವ್ಯಾ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2019ರ್ರಿ ಟಾಮ್ ಮೂಡಿಯನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ಆದರೆ 2020 ಹಾಗೂ 2021 ಟೂರ್ನಿಗೆ ಮೂಡಿಗೆ ಕೊಕ್ ನೀಡಿ, ಟ್ರಾವಿಸ್ ಬೈಲಿಸ್ ಕೋಚ್ ಜವಾಬ್ದಾರಿ ನೀಡಿತ್ತು. 2022ರಲ್ಲಿ ಟಾಮ್ ಮೂಡಿಯನ್ನು ಮತ್ತೆ ಹೈದರಾಬಾದ್ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಯಿತು. 2023ರಲ್ಲಿ ಅಂದರೆ ಕಳೆದ ಆವೃತ್ತಿಯಲ್ಲಿ ಬ್ಪಿಯನ್ ಲಾರಾಗೆ ಜವಾಬ್ದಾರಿ ನೀಡಲಾಯಿತು. 2020ರ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಸ್ಥಾನಕ್ಕೇರಿದ ಸಾಧನೆ ಮಾಡಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಡೇನಿಯಲ್ ವೆಟೋರಿಗೆ, ಐಪಿಎಲ್ ಟೂರ್ನಿಯ ವೇಗ ಹಾಗೂ ಪರಿಮಿತಿಗಳನ್ನು ಅರಿತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ವೆಟೋರಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಸದ್ಯ ಬರ್ಮಿಂಗ್‌ಹ್ಯಾಮ್ ಫೋನಿಕ್ಸ್ ಲೀಗ್ ತಂಡದ ಮುಖ್ಯ ಕೋಚ್ ಆಗಿರುವ ವೆಟೋರಿ, 2022ರಿಂದ ಆಸ್ಟ್ರೇಲಿಯಾ ತಂಡದ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ.
RCB ಮ್ಯಾನೇಜ್‌ಮೆಂಟ್ ನಂಬಿಸಿ ಮೋಸ ಮಾಡಿತು..! ಬೆಂಗಳೂರು ಫ್ರಾಂಚೈಸಿ ವಿರುದ್ದ ನೊಂದು ನುಡಿದ ಚಹಲ್..!
ಆರ್‌ಸಿಬಿ ತಂಡದ ಕೋಚ್ ಆಗಿ 2015 ಹಾಗೂ 2016ರಲ್ಲಿ ವೆಟೋರಿ ತಂಡವನ್ನು ಪ್ಲೇ ಆಫ್ ಸುತ್ತಿಗೇರಿಸುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನ ಪಡೆದಿತ್ತು. 2021ರಲ್ಲಿ ಬಾಂಗ್ಲಾದೇಶ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದಾರೆ.