ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಕ್ರೀಡಾಸ್ಪೂರ್ತಿ ಮರೆತು ವರ್ತಿಸಿದ ಇಂಗ್ಲೆಂಡ್‌ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಹಮದಾಬಾದ್‌(ಫೆ.25): ಭಾರತ-ಇಂಗ್ಲೆಂಡ್‌ ನಡುವಿನ ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್‌ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ ವಿವಾದದ ಕೇಂದ್ರಬಿಂದುವಾಗಿದ್ದಾರೆ, ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೂ ಗುರಿಯಾಗಿದ್ದಾರೆ.

ಹೌದು, ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್‌ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಬ್ಯಾಟ್ ಸವರಿದ ಚೆಂಡು ನೇರವಾಗಿ ಸ್ಲಿಪ್‌ ಕಾರ್ಡನ್‌ನಲ್ಲಿದ್ದ ಬೆನ್ ಸ್ಟೋಕ್ಸ್‌ ಕೈಗೆ ಬಂದಿದೆ. ಕ್ಯಾಚ್‌ ಹಿಡಿಯುವ ಮುನ್ನ ಒಂದೆರಡಿಂಚು ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿದ್ದರೂ ಸಹ ಔಟ್‌ಗೆ ಮನವಿ ಸಲ್ಲಿಸಿ ನೆಟ್ಟಿಗರಿಂದ ಸ್ಟೋಕ್ಸ್‌ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಪಿಂಕ್ ಬಾಲ್ ಟೆಸ್ಟ್: ಅಕ್ಸರ್ ಸ್ಪಿನ್ ಮೋಡಿ , ರೋಹಿತ್ ಅರ್ಧಶತಕಕ್ಕೆ ತತ್ತರಿಸಿದ ಇಂಗ್ಲೆಂಡ್!

ಮೈದಾನದಲ್ಲಿದ್ದ ಅಂಪೈರ್ ಸಾಫ್ಟ್ ಸಿಗ್ನಲ್‌ ಔಟ್‌ ನೀಡಿದರಾದರೂ, ಥರ್ಡ್‌ ಅಂಪೈರ್ ರೀಪ್ಲೇ ನೋಡಿ ನಾಟೌಟ್‌ ತೀರ್ಮಾನವಿತ್ತರು. ಇದರ ಬೆನ್ನಲ್ಲೇ ಇಂಗ್ಲೆಂಡ್‌ ನಾಯಕ ಅಂಪೈರ್ ಜತೆ ಕೆಲಕಾಲ ವಾದವನ್ನು ನಡೆಸಿದರು. ನಾಟೌಟ್‌ ಬೆನ್ನಲ್ಲೇ ಬೆನ್ ಸ್ಟೋಕ್ಸ್‌ ವ್ಯಂಗ್ಯವಾಗಿ ಮುಗುಳು ನಕ್ಕಿದ್ದರು. ಕ್ರೀಡಾಸ್ಪೂರ್ತಿ ಮರೆತು ವರ್ತಿಸಿದ ಬೆನ್‌ ಸ್ಟೋಕ್ಸ್‌ರನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…