Asianet Suvarna News Asianet Suvarna News

ಪಿಂಕ್ ಬಾಲ್ ಟೆಸ್ಟ್: ಅಕ್ಸರ್ ಸ್ಪಿನ್ ಮೋಡಿ , ರೋಹಿತ್ ಅರ್ಧಶತಕಕ್ಕೆ ತತ್ತರಿಸಿದ ಇಂಗ್ಲೆಂಡ್!

ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಮಹತ್ವದ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ.  ಬೌಲಿಂಗ್‌ನಲ್ಲಿ ಮ್ಯಾಜಿಕ್, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್‌ಗೆ ಸಂಕಷ್ಟ ಎದುರಾಗಿದೆ. 

IND vs ENG Pink ball test Day 1 stumps Rohit fifty cements team India dominance against England ckm
Author
Bengaluru, First Published Feb 24, 2021, 10:15 PM IST

ಅಹಮ್ಮದಾಬಾದ್(ಫೆ.24):  ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ  ಟೆಸ್ಟ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ಕಾರಣ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಸ್ಪಿನ್ ಶಾಕ್ ನೀಡಿದ ಟೀಂ ಇಂಡಿಯಾ ಕೇವಲ 112 ರನ್‌ಗಳಿಗೆ ಕಟ್ಟಿ ಹಾಕಿತು. ಇತ್ತ ಬ್ಯಾಟಿಂಗ್‌ನಲ್ಲಿ ಭಾರತ ದಿಟ್ಟ ಹೋರಾಟ ಪ್ರದರ್ಶಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 13 ರನ್ ಹಿನ್ನಡೆಯಲ್ಲಿದೆ.

ಮೊಟೆರಾ ಕ್ರೀಡಾಂಗಣಕ್ಕೆ ಮೋದಿ ಹೆಸರು; ಭುಗಿಲೆದ್ದ ವಿವಾದಕ್ಕೆ ಕೇಂದ್ರ ಸ್ಪಷ್ಟನೆ!...

ಮೊದಲ ದಿನ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿದ್ದು ಟಾಸ್ ಗೆದ್ದ ಸಂಭ್ರಮ ಹಾಗೂ ಶುಭಮನ್ ಗಿಲ್, ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ಸಂಭ್ರಮ ಹೊರತು ಪಡಿಸಿದರೆ ಇನ್ಯಾವುದೇ ಸಂಭ್ರಮ ಇಂಗ್ಲೆಂಡ್ ಪಾಳಯಕ್ಕೆ ದಕ್ಕಲಿಲ್ಲ. ಇಂಗ್ಲೆಂಡ್ ತಂಡವನ್ನ 112 ರನ್‌ಗೆ ಆಲೌಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದೆ.

ಶುಭಮನ್ ಗಿಲ್, ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಬಹುಬೇಗನೆ ವಿಕೆಟ್ ಕೈ ಚೆಲ್ಲಿದರು. ಗಿಲ್ 11, ಪೂಜಾರಾ ಶೂನ್ಯ ಹಾಗೂ ಕೊಹ್ಲಿ 27 ರನ್ ಸಿಡಿಸಿ ಔಟಾದರು. ಆದರೆ ಆಸರೆಯಾದ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಇಂಗ್ಲೆಂಡ್‌ನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಭಾರತ ಬರೆದ ದಾಖಲೆ ಒಂದೆರಡಲ್ಲ!.

ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 99 ರನ್ ಸಿಡಿಸಿದೆ. ರೋಹಿತ್ ಶರ್ಮಾ ಅಜೇಯ 57 ಹಾಗೂ ಅಜಿಂಕ್ಯ ರಹಾನೆ ಅಜೇಯ 1 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 13 ರನ್ ಹಿನ್ನಡೆಯಲ್ಲಿದೆ. 

ಟೀಂ ಇಂಡಿಯಾ ಸ್ಪಿನ್ ಮೋಡಿ:
ಮೊದಲ ಟೆಸ್ಟ್ ಪಂದ್ಯದ ರೀತಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಬೃಹತ್ ಮೊತ್ತದ ಕನಸು ಕಂಡಿತ್ತು. ಆದರೆ ಅಕ್ಸರ್ ಪಟೇಲ್ ಹಾಗೂ ಆರ್ ಅಶ್ವಿನ್ ಸ್ಪಿನ್ ಮೋಡಿಗೆ ಎಲ್ಲವೂ ತಲೆಕೆಳಗಾಯಿತು. ಅಕ್ಸರ್ ಪಟೇಲ್ 6 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿದರು. 

ಝಾಕ್ ಕ್ರಾವ್ಲಿ ಸಿಡಿಸಿದ 53 ರನ್ ಹೊರತು ಪಡಿಸಿದರೆ ಇಂಗ್ಲೆಂಡ್ ತಂಡದ ಇತರ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ. ಹೀಗಾಗಿ 112 ರನ್‌ಗಳಿಗೆ ಆಲೌಟ್ ಆಯಿತು.

Follow Us:
Download App:
  • android
  • ios