ಪಿಂಕ್ ಬಾಲ್ ಟೆಸ್ಟ್; ಅಲ್ಪ ಮೊತ್ತಕ್ಕೆ ಬಾಂಗ್ಲಾ ಆಲೌಟ್; ದಾಖಲೆ ಹೊಸ್ತಿಲಲ್ಲಿ ಭಾರತ!

ಬಾಂಗ್ಲಾದೇಶ ವಿರುದ್ದದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಮಿಂಚಿನ ದಾಳಿಗೆ ಬಾಂಗ್ಲಾ ತತ್ತರಿಸಿದೆ. ಈ ಮೂಲಕ ಬಾಂಗ್ಲಾ ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ. 

Pink ball test team India restrict Bangladesh by 106 runs in kolkata test

ಕೋಲ್ಕತಾ(ನ.22): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಬಿಗಿ ಹಿಡಿತ ಸಾಧಿಸಿದೆ. ಇದೇ ಮೊದಲ ಬಾರಿಗೆ ಹಗಲು ರಾತ್ರಿ ಪಂದ್ಯ ಆಯೋಜಿಸಿರು ಬಿಸಿಸಿಐಗೆ ಈ ಪಂದ್ಯವೂ 5 ದಿನ ನಡೆಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಕೋಲ್ಕತಾ ಟೆಸ್ಟ್ ಪಂದ್ಯದ ಮೊದಲ ದಿನ ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 106 ರನ್‌ಗೆ ಆಲೌಟ್ ಆಗಿದೆ. 

ಇದನ್ನೂ ಓದಿ: INDvWI; 2ನೇ ಟಿ20 ಪಂದ್ಯಕ್ಕೆ ಬಹಿಷ್ಕಾರ, ಬೇಡಿಕೆ ಈಡೇರಿಸಲು ಫ್ಯಾನ್ಸ್ ಪಟ್ಟು!.

ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ರನ್‌ಗಿಂತ ವಿಕೆಟ್ ಉಳಿಸಿಕೊಳ್ಳಲು ಹೆಚ್ಚು ಗಮನ ಕೇಂದ್ರೀಕರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ವೇಗಿ ಇಶಾಂತ್ ಶರ್ಮಾ ಶಾಕ್ ನೀಡಿದರು. ಇಮ್ರುಲ್ ಕೈಸ್ 4 ರನ್ ಸಿಡಿಸಿ ಔಟಾದರು. ಆದರೆ ಮತ್ತೊರ್ವ ಆರಂಭಿಕ ಶದ್ಮನ್ ಇಸ್ಲಾಂ ಹೋರಾಟ ಮುಂದುವರಿಸಿದರು.

ನಾಯಕ ಮೊಮಿನಲ್ ಹಕ್, ಮೊಹಮ್ಮದ್ ಮಿಥುನ್, ಮುಶ್ಫಿಕರ್ ರಹೀಮ್ ಶೂನ್ಯ ಸುತ್ತಿದರೆ, ಮೊಹಮ್ಮದುಲ್ಲಾ 6 ರನ್ ಸಿಡಿಸಿ ಔಟಾದರು. ಶದ್ಮನ್ 29 ರನ್ ಸಿಡಿಸಿ ಔಟಾದರು. ಲಿಟ್ಟನ್ ದಾಸ್ 24 ರನ್ ಸಿಡಿಸಿ ಗಾಯಗೊಂಡು ಹೊರಡನಡೆದರು. ನಯೀಮ್ ಹಸನ್ ಬ್ಯಾಟಿಂಗ್ ಮುಂದುವರಿಸಿದರೆ, ಎಬಾದತ್ ಹುಸೈನ್ ಕೇವಲ 1 ರನ್ ಸಿಡಿಸಿ ಔಟಾದರು. ಮೆಹದಿ ಹಸನ್ 8 ರನ್ ಸಿಡಿಸಿ ಔಟಾದರು. ಅಬು ಜಾಯೆದ್ ವಿಕೆಟ್ ಪತನದೊಂದಿಗೆ ಬಾಂಗ್ಲಾದೇಶ 106 ರನ್‌ಗೆ ಆಲೌಟ್ ಆಯಿತು.  ಭಾರತ ಪರ ಉಮೇಶ್ ಯಾದವ್ 3, ಇಶಾಂತ್ ಶರ್ಮಾ 5, ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿದರು. 

ನವೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios