ಅಹಮದಾಬಾದ್‌(ಫೆ.25): ಟೀಂ ಇಂಡಿಯಾ ವೇಗದ ಬೌಲರ್‌ ಇಶಾಂತ್ ಶರ್ಮಾ ತಮ್ಮ ವೃತ್ತಿಜೀವನದ 100ನೇ ಟೆಸ್ಟ್‌ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ತಮ್ಮ ಹೆಜ್ಜೆಗುರುತನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

32 ವರ್ಷದ ಇಶಾಂತ್ ಶರ್ಮಾ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಸ್ಪಿನ್ನರ್ ಜಾಕ್ ಲೀಚ್‌ ಬೌಲಿಂಗ್‌ ಆಕರ್ಷಕ ಸಿಕ್ಸರ್‌ ಮೂಲಕ ಗಮನ ಸೆಳೆದಿದ್ದಾರೆ. ಅಂದಹಾಗೆ ಇದು ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರಿಸಿದ ಮೊಟ್ಟ ಮೊದಲ ಸಿಕ್ಸರ್‌ ಎನ್ನುವುದು ವಿಶೇಷ. ಇನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಿಕ್ಸರ್‌ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ಗೌರವವೂ ಇಶಾಂತ್ ಶರ್ಮಾ ಪಾಲಾಗಿದೆ.

ಪಿಂಕ್‌ ಬಾಲ್ ಟೆಸ್ಟ್‌: ರೂಟ್‌ ತಂತ್ರಕ್ಕೆ ಭಾರತ ತಬ್ಬಿಬ್ಬು, ಕೇವಲ 33 ರನ್‌ ಮುನ್ನಡೆ

ಇಶಾಂತ್ ಶರ್ಮಾ ಸಿಕ್ಸರ್ ಬಾರಿಸಿದ ವಿಡಿಯೋ ಇಲ್ಲಿದೆ ನೋಡಿ:

ಒಂದು ಹಂತದಲ್ಲಿ 99 ರನ್‌ಗಳಿಗೆ ಕೇವಲ 3 ವಿಕೆಟ್‌ ಕಳೆದುಕೊಂಡಿದ್ದ ಭಾರತ ತನ್ನ ಖಾತೆಗೆ 46 ರನ್‌ ಸೇರಿಸುವಷ್ಟರಲ್ಲೇ ಎಲ್ಲಾ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 33 ರನ್‌ಗಳ ಮುನ್ನಡೆ ಸಾಧಿಸಿತು. ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ 10 ರನ್‌ ಬಾರಿಸಿ ಅಜೇಯರಾಗುಳಿದರು.