ಕರಾಚಿ(ಅ.15): ವಿಶ್ವಕಪ್ ಟೂರ್ನಿಯಂದ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಟೀಕೆ ಎದುರಿಸುತ್ತಲೇ ಇದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ, ಫಿಟ್ನೆಸ್ ಸೇರಿದಂತೆ ಸರ್ಫರಾಜ್ ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗಿದ್ದಾರೆ. ಇದೀಗ ನಾಯಕ ಸರ್ಫರಾಜ್ ಅಹಮ್ಮದ್‌ಗೆ ಅಸಂಬದ್ದ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಪಾಕ್ ಕ್ರಿಕೆಟ್ ಮಂಡಳಿ ನಿಷೇಧ ಹೆರಿದೆ.

ಇದನ್ನೂ ಓದಿ: ಶಮಿ ಹೊಗಳುತ್ತಲೇ ಪಾಕ್ ಬೌಲರ್ಸ್ ಕಾಲೆಳೆದ ಅಖ್ತರ್..!

ವಿಶ್ವಕಪ್ ಟೂರ್ನಿ ಬಳಿಕ, ಪಾಕಿಸ್ತಾನ ವಿರುದ್ದದ ಟಿ20  ಸರಣಿಯಲ್ಲೂ ಸರ್ಫರಾಜ್ ಅಹಮ್ಮದ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇಷ್ಟೇ ಅಲ್ಲ ಟಿ20 ಸರಣಿಯಲ್ಲೂ ಸೋಲು ಕಂಡಿತ್ತು. ಇನ್ನು ರಾಷ್ಟ್ರೀಯ ಕಪ್ ಟಿ20 ಸರಣಿಯಲ್ಲೂ ಸರ್ಫರಾಜ್ ಅಹಮ್ಮದ್ ಉತ್ತಮ ಬ್ಯಾಟಿಂಗ್ ಪ್ರದದರ್ಸನ ನೀಡಿಲ್ಲ. ಪ್ರತ್ರಕರ್ತ, ನೀವು ಈ ರೀತಿ ಪ್ರದರ್ಶನ ನೀಡಿದರೆ ಮುಂದೆ ಯಾರು ಪಂದ್ಯವನ್ನು ವೀಕ್ಷಿಲಲು ಬರುತ್ತಾರೆ ಎಂದು ಪ್ರಶ್ನಿಸಿದ್ದಾನೆ.

 

ಇದನ್ನೂ ಓದಿ: ಪಾಕ್‌ಗೆ ಮುಖಭಂಗ; ಟಿ20 ಸರಣಿ ಲಂಕಾ ಕೈವಶ

ಕಳಪೆ ಪ್ರದರ್ಶನ ನೀಡುತ್ತಿದ್ದರೆ, ಜನರು ಟಿಕೆಟ್ ದುಡ್ದು ಕೊಟ್ಟು ಪಂದ್ಯ ನೋಡಲು ಯಾರು ಬರುತ್ತಾರೆ ಎಂದು ಪ್ರಶ್ನಿಸಿದ್ದಾನೆ. ಅಸಂಬದ್ದ ಪ್ರಶ್ನೆಗೆ ನಾಯಕ ಸರ್ಫರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪತ್ರಕರ್ತನಿಗೆ ನಿಷೇಧ ಹೆರಿದೆ. ಫೈಸ್ಲಾಬಾದ್ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ಇಷ್ಟೇ ಅಲ್ಲ ಪತ್ರಕರ್ತನ ಎಕ್ರಡಿಟೇಶನ್ ಕಾರ್ಡ್ ರದ್ದು ಮಾಡಿದೆ.