Asianet Suvarna News Asianet Suvarna News

ಅಗ್ನಿ ಅವಘಡಕ್ಕೆ ಬಲಿಯಾದ ಮಾಜಿ ಐಪಿಎಲ್ ಆಟಗಾರನ ಸಹೋದರಿ, ಅಳಿಯ..!

ಗ್ಲೋರಿ ವಾಲ್ತಟಿಯವರು ಸ್ಕಾಟ್ಲೆಂಡ್‌ನಲ್ಲಿ ತಮ್ಮ ಕುಟುಂಬದ ಜತೆ ವಾಸವಾಗಿದ್ದಾರೆ. ಅವರು ಹಾಸಿಗೆ ಹಿಡಿದಿರುವ ತಮ್ಮ ಪೋಷಕರನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದರು. ವೀಣಾ ಸಂತೂರ್ ಕೋ ಆಪರೇಟಿವ್ ಸೊಸೈಟಿಯ 8 ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಈ ಘಟನೆಯಲ್ಲಿ ಐಪಿಎಲ್‌ ಮಾಜಿ ಕ್ರಿಕೆಟಿಗನ ಅಕ್ಕ ಹಾಗೂ ಅಳಿಯ ಕೊನೆಯುಸಿರೆಳೆದಿದ್ದಾರೆ.

Paul Valthaty sister and her child die in Mumbai fire incident kvn
Author
First Published Oct 25, 2023, 4:16 PM IST

ಮುಂಬೈ(ಅ.25): ತಮ್ಮ ಕುಟುಂಬವನ್ನು ಭೇಟಿಯಾಗಲು ಸ್ಕಾಟ್ಲೆಂಡ್‌ನಿಂದ ಬಂದಿದ್ದ ಮಹಿಳೆ ಹಾಗೂ ಅಪ್ರಾಪ್ತ ಮಗ ಮುಂಬೈನಲ್ಲಿ ನಡೆದ ಅಗ್ನಿ ಅನಾಹುತಕ್ಕೆ ಕೊನೆಯುಸಿರೆಳೆದಿದ್ದಾರೆ. ಇಲ್ಲಿನ ಕಂಡಿವಾಲಿಯಲ್ಲಿನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಇಂಡಿಯನ್ ಪ್ರೀಮಿಯರ್  ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಆಟಗಾರ ಪೌಲ್ ವಾಲ್ತಟಿಯವರ ಸಹೋದರಿ ಹಾಗೂ ಅಳಿಯ ಈ ದುರಂತದಲ್ಲಿ ಕೊನೆಯುಸಿರೆಳೆದಿರುವುದು ಬೆಳಕಿಗೆ ಬಂದಿದೆ.

ಇಬ್ಬರು  ಮೃತರನ್ನು 45 ವರ್ಷದ ಗ್ಲೋರಿ ವಾಲ್ತಟಿ ಹಾಗೂ 8 ವರ್ಷದ ಜೋಶ್ವಾ ಜೆಮ್ಸ್ ರೊಬರ್ಟ್‌ ಎಂದು ಗುರುತಿಸಲಾಗಿದೆ. ಗ್ಲೋರಿ ವಾಲ್ತಟಿ ಅವರು ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಪೌಲ್ ವಾಲ್ತಟಿಯವರ ಸಹೋದರಿಯಾಗಿದ್ದಾರೆ. ಇನ್ನು ಈ ಅಗ್ನಿ ಅವಘಡದಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

'ಬಾಬರ್ ಅಜಂರನ್ನು ನಾಯಕತ್ವದಿಂದ ಕೆಳಗಿಳಿಸಿ ಈತನಿಗೆ ಪಟ್ಟ ಕಟ್ಟಿ': ಪಾಕ್ ತಂಡದಲ್ಲಿ ಹೊಸ ಕಂಪನ

ಗ್ಲೋರಿ ವಾಲ್ತಟಿಯವರು ಸ್ಕಾಟ್ಲೆಂಡ್‌ನಲ್ಲಿ ತಮ್ಮ ಕುಟುಂಬದ ಜತೆ ವಾಸವಾಗಿದ್ದಾರೆ. ಅವರು ಹಾಸಿಗೆ ಹಿಡಿದಿರುವ ತಮ್ಮ ಪೋಷಕರನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದರು. ವೀಣಾ ಸಂತೂರ್ ಕೋ ಆಪರೇಟಿವ್ ಸೊಸೈಟಿಯ 8 ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಈ ಘಟನೆಯಲ್ಲಿ ಐಪಿಎಲ್‌ ಮಾಜಿ ಕ್ರಿಕೆಟಿಗನ ಅಕ್ಕ ಹಾಗೂ ಅಳಿಯ ಕೊನೆಯುಸಿರೆಳೆದಿದ್ದಾರೆ.

ಪ್ರಾಥಮಿಕ ಮೂಲಗಳ ಪ್ರಕಾರ, ಪ್ಲಾಟ್‌ನ ಒಳಗಡೆ ದೀಪವನ್ನು ಹಚ್ಚಿಡಲಾಗಿತ್ತು. ಇದೇ ಹೊತ್ತಿ ಉರಿದು ಇಡೀ ಕಟ್ಟಡವನ್ನೇ ಆವರಿಸಿದೆ. ವಿದ್ಯುತ್‌ ವೈರ್‌ಗೆ ಬೆಂಕಿ ತಗುಲಿರುವುದರಿಂದ ದೊಡ್ಡ ಮಟ್ಟದಲ್ಲಿ ಈ ಅವಘಡ ಸಂಭವಿಸಿದೆ ಎಂದು ಮುಂಬೈ ಫೈರ್ ಬ್ರಿಗೇಡ್‌ನ ಚೀಫ್ ಫೈರ್ ಆಫೀಸರ್ ರವೀಂದ್ರ ಅಬೊಲ್ಗೆಕರ್‌ ತಿಳಿಸಿದ್ದಾರೆ.

ICC World Cup 2023: ಹರಿಣ ಆರ್ಭಟಕ್ಕೆ ಬಾಂಗ್ಲಾ ತತ್ತರ!

ಈ ಘಟನೆ ನಡೆದಾಗ ಪೌಲ್ ವಾಲ್ತಟಿ ಹಾಗೂ ಅವರ ಪತ್ನಿ ಮತ್ತು ಅವರ ಮಕ್ಕಳು ಮೆಟ್ಟಿಲಿಳಿದು ಕಟ್ಟಡದ ಹೊರಗೆ ಬಂದಿದ್ದಾರೆ. ಆದರೆ ಗ್ಲೋರಿ ಹಾಗೂ ಅವರ ಮಗನಿಗೆ ಬಚಾವಾಗಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
 

Follow Us:
Download App:
  • android
  • ios