Asianet Suvarna News Asianet Suvarna News

T20 World Cup: Aus vs Pak : ಪಾಕಿಸ್ತಾನ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ!

* ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕ್‌-ಆಸೀಸ್ ಕಾದಾಟ
* ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ
*ಪಾಕಿಸ್ತಾನ ವಿರುದ್ಧ ಟಾಸ್‌ ಗೆದ್ದು ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ

Pakistan won the toss and chose to bat in  Aus vs Pak T20 World Cup mnj
Author
Bengaluru, First Published Nov 11, 2021, 7:08 PM IST
  • Facebook
  • Twitter
  • Whatsapp

ದುಬೈ(ನ.11): 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಗೆಲ್ಲುವ ಫೇವರಿಟ್‌ ಎನಿಸಿಕೊಂಡಿರುವ ಮಾಜಿ ಚಾಂಪಿಯನ್‌ ಪಾಕಿಸ್ತಾನ (Pakistan Cricket Team) ಹಾಗೂ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಆಸ್ಪ್ರೇಲಿಯಾ (Australia Cricket Team) ಗುರುವಾರ 2ನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಟಾಸ್‌ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

2009ರ ಚಾಂಪಿಯನ್‌ ಪಾಕಿಸ್ತಾನ, ಸೂಪರ್‌-12 ಹಂತದಲ್ಲಿ ಸೋಲು ಕಾಣದ ಏಕೈಕ ತಂಡವಾಗಿದ್ದು, ಆಡಿರುವ ಐದೂ ಪಂದ್ಯಗಳಲ್ಲಿ ಜಯಿಸಿದೆ. ಪಾಕ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಆಸೀಸ್‌ ಕಾತರಿಸುತ್ತಿದೆ. ಆಸೀಸ್‌ ಪ್ರಧಾನ ಸುತ್ತಿನಲ್ಲಿ ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಸೋಲುಂಡರೂ ಉಳಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಸೆಮೀಸ್‌ಗೆ ಅರ್ಹತೆ ಪಡೆದಿದೆ. 2010ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವಿನ ಅತೀ ರೋಚಕ ಸೆಮಿಫೈನಲ್‌ ಕಾದಾಟದಲ್ಲಿ ಆಸ್ಪ್ರೇಲಿಯಾ ಗೆದ್ದು ಬೀಗಿತ್ತು. ಈ ಸೋಲಿಗೆ ಸೇಡು ತೀರಿಸಿಕೊಂಡು 3ನೇ ಬಾರಿಗೆ ಫೈನಲ್‌ ಪ್ರವೇಶಿಸುವ ಕಾತರದಲ್ಲಿ ಪಾಕ್‌ ಇದ್ದರೆ, ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸು ಹೊತ್ತಿರುವ ಆಸೀಸ್‌ 2ನೇ ಬಾರಿ ಫೈನಲ್‌ ಪ್ರವೇಶಿಸಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳಲು ಎದುರು ನೋಡುತ್ತಿದೆ.

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (wk), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಮ್, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ.

ICC T20 Rankings: 8ನೇ ಸ್ಥಾನಕ್ಕೆ ಜಾರಿದ ವಿರಾಟ್ ಕೊಹ್ಲಿ..!

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ (wk), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್ .

ಯುಎಇ ನಮ್ಮ ಹಿತ್ತಲು ಮನೆ ಇದ್ದ ಹಾಗೆ!

ಟಾಸ್‌ ಗೆದ್ದ ಆರನ್ ಫಿಂಚ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಆಟದ ಅವಧಿಯಲ್ಲಿ ವಿಕೆಟ್ ಬಹಳಷ್ಟು ಬದಲಾಗುವುದಿಲ್ಲ. ಹುಡುಗರು ನಿರಾಳರಾಗಿದ್ದಾರೆ. ಐಪಿಎಲ್ ಮತ್ತು ವಿಶ್ವಕಪ್‌ನಲ್ಲಿ ಈ ಪಿಚ್ ಉತ್ತಮ ಪ್ರದರ್ಶನ ನೀಡಿದೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಹೇಳಿದ್ದಾರೆ.

T20 World Cup: 2022ರ ಟಿ20 ವಿಶ್ವಕಪ್ ಆಡುತ್ತೇನೆಂದ ಇಯಾನ್ ಮಾರ್ಗನ್‌..!

ನಾವು ಬೋರ್ಡ್‌ನಲ್ಲಿ ಮೊದಲು ರನ್‌ಗಳನ್ನು ಕಲೆ ಹಾಕುತ್ತೇವೆ  ಮತ್ತು ನಂತರ ಅದನ್ನು ಡಿಫೆಂಡ್‌ ಮಾಡಲು ನೋಡುತ್ತೇವೆ. ಈ ಆಟಗಾರರ ತಂಡವನ್ನು ಮುನ್ನಡೆಸುವುದು ಗೌರವವಾಗಿದೆ. ಯುಎಇ ನಮ್ಮ ಹಿತ್ತಲು ಮನೆ ಇದ್ದ ಹಾಗೆ; ಇಲ್ಲಿನ ಪರಿಸ್ಥಿತಿಗಳು ನಮಗೆ ಚೆನ್ನಾಗಿ ತಿಳಿದಿದೆ. ನಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಹೇಳಿದ್ದಾರೆ.

ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಬಲಿಷ್ಠ ನ್ಯೂಜಿಲೆಂಡ್‌ಗೆ ಸೋಲುಣಿಸಿರುವ ಪಾಕ್‌ ಅದೇ ಉತ್ಸಾಹದಲ್ಲಿ ಸೆಮೀಸ್‌ ಕಾದಾಟಕ್ಕೆ ಸಿದ್ಧವಾಗಿದೆ. ಬಾಬರ್‌ ಆಜಂ ಪಡೆಗೆ ಯುಎಇ ಪಿಚ್‌ಗಳು ತವರಿನ ಅನುಭವ ನೀಡುತ್ತಿದ್ದು, ತಂಡ ಎಲ್ಲಾ ವಿಭಾಗಗಳಲ್ಲೂ ಉತ್ತಮ ಲಯ ಕಾಯ್ದುಕೊಂಡಿದೆ. 5 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಬಾರಿಸಿ ಉತ್ಕೃಷ್ಟ ಲಯದಲ್ಲಿರುವ ಆಜಂ (Babar Azam) ಜೊತೆ ಮೊಹಮದ್‌ ರಿಜ್ವಾನ್‌, ಅನುಭವಿಗಳಾದ ಶೋಯಿಬ್‌ ಮಲಿಕ್‌ (Shoaib Malik), ಮೊಹಮದ್‌ ಹಫೀಜ್‌, ಮ್ಯಾಚ್‌ ಫಿನಿಶರ್‌ ಆಸಿಫ್‌ ಅಲಿ ಆಸೀಸ್‌ಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

Follow Us:
Download App:
  • android
  • ios