ಲಾಹೋರ್‌(ಜ.28): ಮಳೆ ಹಾಗೂ ಮಂದ ಬೆಳಕಿನ ಕಾರಣದಿಂದ ಇಲ್ಲಿ ಸೋಮವಾರ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ 3ನೇ ಟಿ20 ಪಂದ್ಯ ಒಂದೂ ಎಸೆತ ಕಾಣದೇ ರದ್ದಾಯಿತು. ಹೀಗಾಗಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ 2 ಪಂದ್ಯ ಗೆದ್ದಿದ್ದ ಪಾಕಿಸ್ತಾನ 2-0 ಯಿಂದ ಸರಣಿ ವಶಪಡಿಸಿಕೊಂಡಿದೆ. 

ವಿಶ್ವಕಪ್‌ನಲ್ಲಿ ಭಾಗವಹಿಸಲ್ಲ ಎಂದ ಪಿಸಿಬಿ U ಟರ್ನ್

ಮೊದಲ ಪಂದ್ಯವನ್ನು ಪಾಕಿಸ್ತಾನ 5 ವಿಕೆಟ್‌ಗಳಿಂದ ಹಾಗೂ 2ನೇ ಪಂದ್ಯವನ್ನು 9 ವಿಕೆಟ್‌ಗಳಿಂದ ಜಯಿಸಿತ್ತು. ಸರಣಿ ಜಯದೊಂದಿಗೆ ಪಾಕಿಸ್ತಾನ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದೆ.

ಬಾಂಗ್ಲಾ ಸರಣಿಗೂ ಮುನ್ನ ಪಾಕಿಸ್ತಾನ ಸತತ 7 ಸೋಲು ಕಂಡು ಮುಖಭಂಗ ಅನುಭವಿಸಿತ್ತು. 2019ರಲ್ಲಿ ಪಾಕಿಸ್ತಾನ ಆಡಿದ 9 ಟ ಅದರಲ್ಲೂ ತವರಿನಲ್ಲಿ ಶ್ರೀಲಂಕಾ ಎದುರು ಹಾಗೆಯೇ ಆಸೀಸ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಎದುರು ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿತ್ತು.