Asianet Suvarna News Asianet Suvarna News

ಫಿಕ್ಸಿಂಗ್ ನಡೆಸಿರುವುದು ನಿಜ, ತಪ್ಪೊಪ್ಪಿಕೊಂಡ ಪಾಕ್ ಮಾಜಿ ಕ್ರಿಕೆಟಿಗ ಸಲೀಮ್ ಮಲಿಕ್!

ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಅತೀ ದೊಡ್ಡ ಸಮಸ್ಯೆ. ಆಯಾ ಕ್ರಿಕೆಟ್ ಸಂಸ್ಥೆ, ಐಸಿಸಿ ಕ್ರಿಕೆಟ್‌ನ್ನು ಫಿಕ್ಸಿಂಗ್‌ನಿಂದ ಮುಕ್ತ ಮಾಡಲು ಹೋರಾಟ ನಡೆಸುತ್ತಿದೆ. ಇದೀಗ ಫಿಕ್ಸಿಂಗ್‌ನಿಂದ ಅಮಾನತ್ತಾದ ಇತ್ತೀಚೆಗಿನ ಕ್ರಿಕೆಟಿಗ ಪಾಕಿಸ್ತಾನದ ಉಮರ್ ಅಕ್ಮಲ್. ಕಳೆದೆರಡು ದಿನದ ಹಿಂದೆ ಅಕ್ಮಲ್‌ಗೆ ನಿಷೇಧ ಹೇರಲಾಗಿದೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲೀಮ್ ಮಲಿಕ್ ತಾನು ಫಿಕ್ಸಿಂಗ್ ನಡೆಸಿರುವುದುನ್ನು ಒಪ್ಪಿಕೊಂಡಿದ್ದಾರೆ.

Pakistan former cricketer Saleem Malik admits to spot fixing
Author
Bengaluru, First Published Apr 30, 2020, 8:08 PM IST

ಕರಾಚಿ(ಏ.29): ಕ್ರಿಕೆಟ್ ಫಿಕ್ಸಿಂಗ್‌ಗೆ ಪ್ರತಿ ದೇಶಕೂಡ ನರಳಾಡಿದೆ. ಇದರಲ್ಲಿ ಪಾಕಿಸ್ತಾನದ ಕ್ರಿಕೆಟಿಗರ ಮೇಲೆ ಹೆಚ್ಚು ಫಿಕ್ಸಿಂಗ್ ನಡೆಸಿದ ಆರೋಪಗಳಿವೆ. ಉಮರ್ ಅಕ್ಮಲ್‌ಗೆ ಐಸಿಸಿ ಅಮಾನತು ಶಿಕ್ಷೆ ನೀಡಿದ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲೀಮ್ ಮಲಿಕ್ ತಾನು ಫಿಕ್ಸಿಂಗ್ ನಡೆಸಿರುವು ನಿಜ ಎಂದು ಒಪ್ಪಿಕೊಂಡಿದ್ದಾರೆ. 19 ವರ್ಷಗಳ ಹಿಂದೆ ನಡೆಸಿದ್ದ ಫಿಕ್ಸಿಂಗ್ ಕುರಿತು ಇದೀಗ ತಪ್ಪೊಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಅನುಭವಿ ಕ್ರಿಕೆಟಿಗ 3 ವರ್ಷ ಬ್ಯಾನ್..!

2000ನೇ ಇಸವಿಯಲ್ಲಿ ಸಲೀಮ್ ಮಲೀಕ್ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಶೇನ್ ವಾರ್ನ್,ಮಾರ್ಕ್ ವ್ಹಾ ಹಾಗೂ ಟಿಮ್ ಮೇಗೆ ಪಂದ್ಯದಿಂದ ಹೊರಗುಳಿಯುವಂತೆ ಹಣದ ಆಮಿಷ ಒಡ್ಡಿದ್ದರು. ಬುಕ್ಕಿ ಸಹಾಯದಿಂದ ಸಲೀಮ್ ಮಲಿಕ್, ನೇರವಾಗಿ ಆಸ್ಟ್ರೇಲಿಯಾ ಮೂವರು ಕ್ರಿಕೆಟಿಗರಿಗೆ ಹಣದ ಮೂಲಕ ಫಿಕ್ಸಿಂಗ್ ನಡೆಸಲು ಯತ್ನಿಸಿದ್ದರು. ಆದರೆ ಆಸೀಸ್ ಮೂವರ ಕ್ರಿಕೆಟಿಗರು ಐಸಿಸಿಗೆ ದೂರು ನೀಡದ ಹಿನ್ನಲೆಯಲ್ಲಿ ತನಿಖೆ ನಡೆಸಿತು. ಬಳಿಕ ಸಲೀಮ್ ಮಲಿಕ್ ಆರೋಪ ಸಾಬೀತಾಗಿತ್ತು. ಹೀಗಾಗಿ ಅಜೀವ ನಿಷೇಧದ ಶಿಕ್ಷೆ ಹೇರಲಾಗಿತ್ತು.

ದೀಪಕ ಅರ್ವಾಲ್‌ಗೆ 2 ವರ್ಷ ನಿಷೇಧ ಶಿಕ್ಷೆ; ಎಲ್ಲಾ ಕ್ರಿಕೆಟ್ ಚಟುವಟಿಕೆಯಿಂದ ಅಮಾನತು

2000ದಲ್ಲಿ ಈ ಫಿಕ್ಸಿಂಗ್ ಘಟನೆ ನಡೆದಿತ್ತು. ಬಳಿಕ ಮಲೀಕ್ ಮೇಲೆ ನಿಷೇಧ ಶಿಕ್ಷೆ ಹೇರಲಾಗಿತ್ತು. ಹೀಗಾಗಿ ಮಲಿಕ್ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಇದೀಗ 57 ವರ್ಷದ ಸಲೀಮ್ ಮಲಿಕ್ ತಾನು 19 ವರ್ಷಗಳ ಹಿಂದೆ ಫಿಕ್ಸಿಂಗ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ವಿಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದಾರೆ. ನನ್ನನ್ನು ಕ್ಷಮಿಸಿ. ನಾನು ಐಸಿಸಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ತನಿಖೆಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ದ ಎಂದಿದ್ದಾರೆ.

ಪ್ರಮುಖವಾಗಿ ಸಲೀಮ್ ಮಲಿಕ್ ಮನವಿಯೊಂದನ್ನು ಮಾಡಿದ್ದಾರೆ. ನನಗೆ ಕ್ರಿಕೆಟ್ ಹೊರತು ಪಡಿಸಿ ಇನ್ಯಾವ ಉದ್ಯೋಗ ಗೊತ್ತಿಲ್ಲ. ಕ್ರಿಕೆಟ್ ನನ್ನ ತುತ್ತಿನ ಚೀಲ ತುಂಬವ ಏಕೈಕ ದಾರಿ. ಪಾಕಿಸ್ತಾನದ ಫಿಕ್ಸಿಂಗ್ ನಡೆಸಿದ ಕೆಲ ಕ್ರಿಕೆಟಿಗರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇದೀಗ ನನಗೆ ಇನ್ನೊಂದು ಅವಕಾಶ ಕೊಡಿ. ಕ್ರಿಕೆಟ್‌ಗೆ ಸೇವೆ ಸಲ್ಲಿಸಲು ನಾನು ಸಿದ್ದ ಎಂದು ವಿಡಿಯೋ ಮೂಲಕ ಸಲೀಮ್ ಮಲಿಕ್ ಮನವಿ ಮಾಡಿದ್ದಾರೆ.

 

1992ರ ವಿಶ್ವಕಪ್ ಗೆಲುವಿನ ಪಾಕಿಸ್ತಾನ ತಂಡದ ಸದಸ್ಯನಾಗಿದ್ದ ಸಲೀಮ್ ಮಲಿಕ್, ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು. 2008ರಲ್ಲಿ ಸಲೀಮ್ ಮಲೀಕ್ ಮೇಲಿನ ನಿಷೇಧದ ಶಿಕ್ಷೆ ತೆರವುಗೊಳಿಸಲಾಗಿತ್ತು. ಹೀಗಾಗಿ 2012ರಲ್ಲಿ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹುದ್ದೆಗೆ ಸಲೀಮ್ ಮಲಿಕ್ ಅರ್ಜಿ ಹಾಕಿದ್ದರು. ಆದರೆ ಸಲೀಮ್ ಮಲಿಕ್ ಅರ್ಜಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಲಿ ಪರಿಗಣಿಸಲಿಲ್ಲ.

ಇದೀಗ ಸಲೀಮ್ ಮಲೀಕ್ ಹಲವು ಪಾಕಿಸ್ತಾನ ಕ್ರಿಕೆಟಿಗರಿಗೆ ಪಿಸಿಬಿ ಎರಡನೇ ಅವಕಾಶ ನೀಡಿದೆ. ಇದೀಗ ನನಗೂ ನೀಡಿ ಎಂದು ಮನವಿ ಮಾಡಿದ್ದಾರೆ.

Follow Us:
Download App:
  • android
  • ios