Asianet Suvarna News Asianet Suvarna News

Ind vs Eng ಅಶ್ವಿನ್ ಹೊರಗಿಟ್ಟಿದ್ದಕ್ಕೆ ಭಾರತ ಬೆಲೆ ತೆರುತ್ತಿದೆ ಎಂದ ಕನೇರಿಯಾ..!

ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ಇಂಗ್ಲೆಂಡ್ ದಾಪುಗಾಲು
ಅಶ್ವಿನ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದ್ದನ್ನು ಟೀಕಿಸಿದ ಕನೇರಿಯಾ
ಭಾರತದ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿರುವ ಅಶ್ವಿನ್

Pakistan former Cricketer Danish Kaneria questions Indian team selection after leaving Ravichandran Ashwin kvn
Author
Bengaluru, First Published Jul 5, 2022, 3:46 PM IST

ಬರ್ಮಿಂಗ್‌ಹ್ಯಾಮ್ (ಜು.05) : ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ಆಯ್ಕೆ ಮಾಡದಿರುವ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ. ಎಜ್‌ಬಾಸ್ಟನ್‌ ಮೈದಾನದಲ್ಲಿರುವ ಪಿಚ್‌ನಲ್ಲಿ ವಿಶ್ವದರ್ಜೆಯ ಸ್ಪಿನ್ನರ್ ಎನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್‌ ಪರಿಣಾಮಕಾರಿ ದಾಳಿ ನಡೆಸುತ್ತಿದ್ದರು ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಭಾರತ ನೀಡಿರುವ 378 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಕೇವಲ 3 ವಿಕೆಟ್ ಕಳೆದುಕೊಂಡು 259 ರನ್ ಬಾರಿಸಿದ್ದು, ಕೊನೆಯ ದಿನ ಗೆಲ್ಲಲು ಕೇವಲ 119 ರನ್‌ಗಳ ಅಗತ್ಯವಿದೆ. ಮಾಜಿ ನಾಯಕ ಜೋ ರೂಟ್ 76 ಹಾಗೂ ಜಾನಿ ಬೇರ್‌ಸ್ಟೋವ್ 72 ಕೊನೆಯ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವು ಸರಿಯಾದ ಆಟಗಾರರನ್ನು ಆಯ್ಕೆ ಮಾಡದಿರುವುದಕ್ಕೆ ತಂಡ ಈಗ ಬೆಲೆ ತೆರುತ್ತಿದೆ ಎಂದು ಕನೇರಿಯಾ ಹೇಳಿದ್ದಾರೆ.

"ಎಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ (Team India) ಗೆಲುವಿನಿಂದ ಸೋಲಿನತ್ತ ಸಾಗುತ್ತಿದೆ. ರವಿಚಂದ್ರನ್ ಅಶ್ವಿನ್ (Ravichandran Ashwin) ಹನ್ನೊಂದರ ಆಟದಲ್ಲಿ ಏಕೆ ಆಡುತ್ತಿಲ್ಲ. ಯಾರು ಈ ನಿರ್ಧಾರವನ್ನು ಮಾಡಿದರು. ದ್ರಾವಿಡ್ ಅವರೇ? ಸ್ವತಃ ಅವರೇ ಕೋಚ್ ಆಗಿ ಇಂಗ್ಲೆಂಡ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್‌ನಲ್ಲಿನ ವಾತಾವರಣ ಅವರಿಗೆ ಚೆನ್ನಾಗಿ ಗೊತ್ತಿದೆ. ಇದು ಇಂಗ್ಲೆಂಡ್ ಬೇಸಿಗೆ ಕಾಲ. ಈಗ ಇಲ್ಲಿ ವಿಕೆಟ್‌ಗಳು ಒಣಗಿರುತ್ತವೆ. ಅಲ್ಲದೆ 3ನೇ ದಿನದಿಂದ ಚೆಂಡು ಸ್ಪಿನ್ ಆಗುತ್ತದೆ, ವೇಗ ಇರುವಲ್ಲಿ ತೇವಾಂಶದ ಕಾರಣದಿಂದ ಅದು ತಿರುಗುತ್ತದೆ. ಬುಮ್ರಾ ಮಾತ್ರ ಅದ್ಭುತಗಳನ್ನು ಮಾಡಬಲ್ಲರು ಎಂದು ಕಾಣುತ್ತದೆ. ಭಾರತ ತಪ್ಪು  ಮಾಡಿದೆ ಮತ್ತು ಅದರ ಬೆಲೆಯನ್ನು ತೆರುತ್ತಿದೆ"ಎಂದು ಕನೇರಿಯಾ ಸಾಮಾಜಿಕ ಜಾಲತಾಣವಾದ ಕೂ ನಲ್ಲಿ ಬರೆದುಕೊಂಡಿದ್ದಾರೆ.

Pakistan former Cricketer Danish Kaneria questions Indian team selection after leaving Ravichandran Ashwin kvn

Ind vs Eng ಶ್ರೇಯಸ್ ಅಯ್ಯರ್‌ಗೆ ಮೋಸ ಮಾಡಿದ್ರಾ ಮೆಕ್ಕಲಂ..? ಮೀಮ್ಸ್‌ ವೈರಲ್‌..!

ಏಷ್ಯಾಖಂಡದಲ್ಲಿ ಮಿಂಚಿನ ದಾಳಿ ನಡೆಸುವ ಮೂಲಕ ವಿಕೆಟ್ ಬೇಟೆಯಾಡುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿರುವ ರವಿಚಂದ್ರನ್ ಅಶ್ವಿನ್‌ ಅವರನ್ನು ಕಳೆದ ವರ್ಷ ನಡೆದ ನಾಲ್ಕು ಪಂದ್ಯದಲ್ಲೂ ಬೆಂಚ್ ಕಾಯಿಸಿದ್ದರು. ಇದೀಗ 5ನೇ ಟೆಸ್ಟ್ ಪಂದ್ಯದಲ್ಲಿಯೂ ಅಶ್ವಿನ್, ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಲು ವಿಫಲವಾಗಿದ್ದರು.

Follow Us:
Download App:
  • android
  • ios