Asianet Suvarna News Asianet Suvarna News

ಮತ್ತೊಬ್ಬ ಪಾಕ್ ಕ್ರಿಕೆಟಿಗನ ಪ್ರೀತಿ ಬಲೆಗೆ ಬಿದ್ದ ಭಾರತದ ಪೂಜಾ ಬೊಮನ್; ಲವ್ ಪ್ರಪೋಸ್ ಪೋಸ್ಟ್‌ ವೈರಲ್!

ಪಾಕಿಸ್ತಾನ ಕ್ರಿಕೆಟಿಗನೀಗ ಭಾರತದ ಹುಡುಗಿಗೆ ಮನಸೋತಿದ್ದು, ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Pakistan cricketer Raza Hasan gets ready to marry Indian girl Pooja Boman wedding to take place next year kvn
Author
First Published Oct 10, 2024, 2:59 PM IST | Last Updated Oct 10, 2024, 2:59 PM IST

ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಹಾಗೂ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್ ಭಾರತದ ಮೂಗುತಿ ಸುಂದರಿ, ಟೆನಿಸ್ ತಾರೆಯಾಗಿದ್ದ ಸಾನಿಯಾ ಮಿರ್ಜಾ ಅವರನ್ನು ಮದುವೆಯಾದಾಗ ಲಕ್ಷಾಂತರ ಭಾರತೀಯ ಸಾನಿಯಾ ಅಭಿಮಾನಿಗಳ ಹೃದಯ ಒಡೆದುಹೋಗಿತ್ತು. ಈ ಜೋಡಿಗೆ ಇಜಾಬ್ ಎನ್ನುವ ಗಂಡು ಮಗು ಕೂಡಾ ಜನಿಸಿತ್ತು. ಒಂದು ದಶಕಗಳ ಕಾಲ ಸುಂದರ ಸಂಸಾರ ನಡೆಸಿದ್ದ ಈ ಜೋಡಿ, ಈ ವರ್ಷಾರಂಭದಲ್ಲೇ ಡಿವೋರ್ಸ್ ಪಡೆದಿದ್ದು, ಉಭಯ ದೇಶಗಳಲ್ಲಿ ಸಂಚಲನವನ್ನೇ ಹುಟ್ಟುಹಾಕಿತ್ತು. ಸಾನಿಯಾಗೆ ತಲಾಕ್ ನೀಡಿದ್ದ ಶೋಯೆಬ್ ಮಲಿಕ್, ಪಾಕಿಸ್ತಾನ ಮೂಲದ ನಟಿ ಸನಾ ಜಾವೆದ್ ಅವರನ್ನು ಎರಡನೇ ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಈಗ ಇದೆಲ್ಲದರ ನಡುವೆ ಪಾಕಿಸ್ತಾನ ಮೂಲದ ಮತ್ತೋರ್ವ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ಹೆಜ್ಜೆಯನ್ನೇ ಹಿಂಬಾಲಿಸುತ್ತಿದ್ದಾರೆ. ರಾಜಾ ಹಸನ್ ಎನ್ನುವ ಪಾಕಿಸ್ತಾನ ಮೂಲದ ಕ್ರಿಕೆಟಿಗನೀಗ ಭಾರತೀಯ ಮೂಲದ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಜೋಡಿ ಈಗಾಗಲೇ ಎಂಗೇಜ್‌ ಆಗಿದ್ದು, ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿದ್ದೇ ರತನ್ ಟಾಟಾ ನೆರವಿನಿಂದ!

ರಾಜಾ ಹಸನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.  "ನಾನು ಎಂಗೇಜ್‌ಮೆಂಟ್ ಆಗಿದ್ದೇನೆ ಎಂದು ತಿಳಿಸಲು ಹರ್ಷಿಸುತ್ತೇನೆ. ನೀವು ಎಂದೆಂದಿಗೂ ನನ್ನ ಮುಂದಿನ ಜೀವನದ ಸಂಗಾತಿಯಾಗುತ್ತೀರಾ ಎಂದು ಕೇಳಿದೆ . ಅದಕ್ಕೆ ಆಕೆ ಸರಿ ಎಂದು ಸಮ್ಮತಿ ಸೂಚಿಸಿದರು. ನಮ್ಮ ಮುಂದಿನ ಸಾಹಸಮಯ ಜೀವನವನ್ನು ಒಟ್ಟಾಗಿ ಅನುಭವಿಸಲು ಉತ್ಸುಕರಾಗಿದ್ದೇವೆ ಎಂದು ರಾಜಾ ಹಸನ್ ತಮ್ಮ ಭಾವಿ ಮಡದಿ ಪೂಜಾ ಬೊಮನ್ ಅವರ ಜತೆಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ ರಾಜಾ ಹಸನ್ ಮುಂಬರುವ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಪೂಜಾ ಬೊಮನ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ರಾಜಾ ಹಸನ್ 2012ರಿಂದ 2014ರ ಅವಧಿಯಲ್ಲಿ ಪಾಕಿಸ್ತಾನ ಪರ 10 ಟಿ20 ಹಾಗೂ ಒಂದು ಏಕದಿನ ಪಂದ್ಯಗಳನ್ನಾಡಿದ್ದಾರೆ. ಪಾಕಿಸ್ತಾನ ಪರ ಟಿ20 ಕ್ರಿಕೆಟ್‌ನಲ್ಲಿ ರಾಜಾ ಹಸನ್ 10 ವಿಕೆಟ್ ಕಬಳಿಸಿದ್ದಾರೆ. ಇನ್ನು ಪಾಕಿಸ್ತಾನದ ರಾಜಾ ಹಸನ್ 48 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 29.05ರ ಸರಾಸರಿಯಲ್ಲಿ 149 ವಿಕೆಟ್ ಕಬಳಿಸಿದ್ದಾರೆ.

ಹೇಳಿದ್ದು ಒಂದೇ ಸುಳ್ಳು ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟಿಗನ ಬದುಕು ನುಚ್ಚುನೂರು; ಈಗ ಈತ ಯೂಟ್ಯೂಬರ್!

ಇನ್ನು ಇತ್ತೀಚಿನ ಮಾಧ್ಯಮಗಳ ವರದಿಯ ಪ್ರಕಾರ, ಪೂಜಾ ಬೊಮನ್ ಇಸ್ಲಾಂ ಬಗ್ಗೆ ಅತೀವ ಆಸಕ್ತಿ ಹೊಂದಿದ್ದು, ತಾವು ರಾಜಾ ಹಸನ್ ಅವರನ್ನು ಮದುವೆಯಾಗುವ ಮುನ್ನವೇ ಹಿಂದು ಧರ್ಮ ತೊರೆದು ಇಸ್ಲಾಂಗೆ ಮತಾಂತರವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 

Latest Videos
Follow Us:
Download App:
  • android
  • ios