ಇಸ್ಲಾಮಾಬಾದ್(ಫೆ.20): ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದಕ್ಕಿದ್ದಂತೆ ಕ್ರಿಕೆಟಿಗ ಉಮರ್ ಅಕ್ಮಲ್‌ಗೆ ಅಮಾನತು ಶಿಕ್ಷೆ ವಿಧಿಸಿದೆ. ತಕ್ಷಣದಿಂದಲೇ ಅಕ್ಮಲ್ ಯಾವುದೇ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗುವಂತಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಏಷ್ಯಾಕಪ್‌ ಆತಿಥ್ಯ ಹಕ್ಕು ಬಿಟ್ಟುಕೊಡಲು ಪಾಕ್‌ ರೆಡಿ?

ಉಮರ್ ಅಕ್ಮಲ್ ಮೇಲಿನ ಬ್ರಷ್ಟಾಚಾರ ಪ್ರಕರಣದ ತನಿಖೆ ನಡೆಯುತ್ತಿದೆ. ಹೀಗಾಗಿ ತಕ್ಷಣವೇ ಅಮಾನತು ಶಿಕ್ಷೆ ನೀಡಿದೆ. ಆದರೆ ಯಾವ ಪ್ರಕರಣ, ಪ್ರಾಥಮಿಕ ವರದಿ, ತನಿಖೆಯ ಮಾಹಿತಿಯನ್ನು ಬಹಿರಂಗ ಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರಾಕರಿಸಿದೆ.

 

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದೆ ಎಂದು ಪಿಸಿಬಿ ಹೇಳಿದೆ. ಅಕ್ಮಲ್ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರ ಆಡುತ್ತಿದ್ದರು. ಇದೀಗ  ಫ್ರಾಂಚೈಸಿಗೆ ಬದಲಿ ಆಟಗಾರನ ಆಯ್ಕೆ ಮಾಡಲು ಪಿಸಿಬಿ ಅವಕಾಶ ನೀಡಿದೆ.

29 ವರ್ಷದ ಉಮರ್ ಅಕ್ಮಲ್ ಪಾಕಿಸ್ತಾನ ಪರ 16 ಟೆಸ್ಟ್, 121 ಏಕದಿನ ಹಾಗೂ 84 ಟಿ20 ಪಂದ್ಯ ಆಡಿದ್ದಾರೆ.