Asianet Suvarna News Asianet Suvarna News

Pak vs WI ಫವಾದ್ ಮತ್ತೊಂದು ಶತಕ, ಪಾಕ್‌ ಹಿಡಿತದಲ್ಲಿ ವಿಂಡೀಸ್‌

* ವೆಸ್ಟ್‌ ಇಂಡೀಸ್ ಎದುರು ಬಿಗಿ ಹಿಡಿತ ಸಾಧಿಸಿದ ಪಾಕಿಸ್ತಾನ

* ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸಿ ಮಿಂಚಿದ ಫವಾದ್ ಆಲಂ

* ಆರಂಭಿಕ ಆಘಾತದ ಹೊರತಾಗಿಯೂ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡಿದ ಪಾಕ್

Fawad Alam Shaheen Afridi put Pakistan on Driver Seat in second Test against Windies kvn
Author
Jamaica, First Published Aug 23, 2021, 5:43 PM IST

ಜಮೈಕಾ(ಆ.23): ಆರಂಭಿಕ ಆಘಾತದ ಹೊರತಾಗಿಯೂ ಫವಾದ್ ಆಲಂ ಬಾರಿಸಿದ ವೃತ್ತಿಜೀವನದ 5ನೇ ಶತಕ ಹಾಗೂ ದಿನದಂತ್ಯದ ವೇಳೆಗೆ ವೇಗಿ ಶಾಹಿನ್ ಅಫ್ರಿದಿ ಮಾರಕ ದಾಳಿಯ ನೆರವಿನಿಂದ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದಂತ್ಯದ ವೇಳೆಗೆ ಕೆರಿಬಿಯನ್ನರೆದುರು ಪಾಕಿಸ್ತಾನ ಕ್ರಿಕೆಟ್ ತಂಡವು ಬಿಗಿ ಹಿಡಿತ ಸಾಧಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆಬಿದ್ ಅಲಿ, ಇಮ್ರಾನ್ ಬಟ್ ತಲಾ ಒಂದೊಂದು ರನ್‌ ಬಾರಿಸಿ ಪೆವಿಲಿಯನ್ ಸೇರಿದರೆ, ಅಜರ್ ಅಲಿ ಶೂನ್ಯ ಸುತ್ತಿ ಪೆವಿಲಿಯನ್ ಪರೇಡ್ ನಡೆಸಿದರು. 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ಹಾಗೂ ಫವಾದ್ ಆಲಂ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 166 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು, ನಾಯಕ ಅಜಂ 75 ರನ್‌ ಬಾರಿಸಿ ಕೀಮರ್‌ ರೋಚ್‌ಗೆ ಮೂರನೇ ಬಲಿಯಾದರು. ಇನ್ನು ಮತ್ತೊಂದು ತುದಿಯಲ್ಲಿ ಅಜೇಯ ಬ್ಯಾಟಿಂಗ್ ನಡೆಸಿದ ಫವಾದ್ ಆಲಂ 213 ಎಸೆತಗಳನ್ನು ಎದುರಿಸಿ 17 ಬೌಂಡರಿಗಳ ಸಹಾಯದಿಂದ ಅಜೇಯ 124 ರನ್‌ ಚಚ್ಚುವುದರೊಂದಿಗೆ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು. ಅಂತಿಮವಾಗಿ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 302 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು.

Ind vs Eng ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಂಗ್ಲೆಂಡ್ ಮಾರಕ ವೇಗಿ..!

ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್‌ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 39 ರನ್‌ಗಳನ್ನು ಕಲೆಹಾಕಿದೆ. ವೆಸ್ಟ್‌ ಇಂಡೀಸ್‌ ನಾಯಕ ಕ್ರೆಗ್ ಬ್ರಾಥ್‌ವೇಟ್‌(4), ಕೀರನ್ ಪೊವೆಲ್‌(5) ಒಂದಂಕಿ ಮೊತ್ತಕ್ಕೆ ಪೆವಿಲಿಯನ್ನಿಗಟ್ಟುವಲ್ಲಿ ಶಾಹಿನ್ ಅಫ್ರಿದಿ ಯಶಸ್ವಿಯಾದರು. ಇನ್ನು 10 ರನ್ ಗಳಿಸಿದ್ದ ರೋಸ್ಟನ್ ಚೇಸ್ ಅವರಿಗೆ ಫಾಹಿಮ್ ಅಶ್ರಫ್ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಸದ್ಯ ಬೋನರ್(18) ಹಾಗೂ ನೈಟ್‌ ವಾಚ್‌ಮನ್‌ ಅಲ್ಜೆರಿ ಜೋಸೆಫ್(0) ನಾಲ್ಕನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.
 

Follow Us:
Download App:
  • android
  • ios