ಬೆಂಗಳೂರು(ಏ.14): ಒಂದು ಕಾಲದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಬಾಲಿವುಡ್‌ನ ಇಬ್ಬರು ನಟಿಯರೊಂದಿಗೆ ಸಂಬಂಧ ಹೊಂದಿದ್ದರು ಎನ್ನುವುದು ವಿವಾದವನ್ನೇ ಹುಟ್ಟುಹಾಕಿತ್ತು. ಆ ವಿಚಾರದ ಕುರಿತಂತೆ ಪಾಕ್ ಮಾಜಿ ವೇಗಿ ಅಖ್ತರ್ ಮೌನ ಮುರಿದಿದ್ದು, ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ.

ಹೌದು, ರಾವುಲ್‌ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಜತೆ ಬಾಲಿವುಡ್‌ ನಟಿಯರಾದ ಸೋನಾಲಿ ಬೇಂದ್ರೆ ಹಾಗೂ ದಿಯಾ ಮಿರ್ಜಾ ಹೆಸರು ತಳುಕು ಹಾಕಿಕೊಂಡಿತ್ತು. ಕ್ರಿಕೆಟಿಗರು ಹಾಗೂ ಸಿನಿಮಾ ನಟಿಯರ ನಡುವಿನ ಸಂಬಂಧ ಹೊಸತೇನಲ್ಲ. ಒಂದು ಕಾಲದಲ್ಲಿ ಮಾರಕ ವೇಗದ ಬೌಲಿಂಗ್‌ಗೆ ಹೆಸರಾಗಿದ್ದ ಅಖ್ತರ್ ಇದೀಗ ತಮ್ಮದೇ ಯೂಟ್ಯೂಬ್ ಚಾನಲ್‌ನಲ್ಲಿ  ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಲದಿನಗಳ ಹಿಂದಷ್ಟೇ ಅಖ್ತರ್, ಭಾರತ-ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜಿಸಿ ಅದರಿಂದ ಬರುವ ಹಣವನ್ನು ಕೋವಿಡ್ 19 ಪರಿಹಾರ ನಿಧಿಗೆ ನೀಡುವುದು ಒಳ್ಳೆಯದು ಅಭಿಪ್ರಾಯಪಟ್ಟಿದ್ದರು. ಆದರೆ ನಮಗೆ ಉಭಯ ತಂಡಗಳ ನಡುವೆ ಪಂದ್ಯ ನಡೆಸಿ ಹಣ ಮಾಡುವ ಅಗತ್ಯವಿಲ್ಲ ಎಂದು ಕಪಿಲ್ ದೇವ್, ಅಖ್ತರ್ ಪ್ರಸ್ತಾಪವನ್ನು ತಳ್ಳಿಹಾಕಿದ್ದರು.

ಪಂದ್ಯವಾಡಿಸಿ ಹಣ ಸಂಗ್ರಹಿಸುವ ಅವಶ್ಯಕತೆ ಭಾರತಕ್ಕಿಲ್ಲ; ಅಕ್ತರ್‌ಗೆ ಕಪಿಲ್ ದೇವ್ ತಿರುಗೇಟು!

ಕಳೆದ ವರ್ಷದ ಜೂನ್‌ನಲ್ಲಿ ಅಖ್ತರ್ ಬಾಲಿವುಡ್ ನಟಿಯರಾದ ಸೋನಾಲಿ ಹಾಗೂ ದಿಯಾ ಜತೆಗಿನ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ಗಾಳಿಸುದ್ದಿಯ ಬಗ್ಗೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಹಲವು ಮಾಧ್ಯಮಗಳು ಅಖ್ತರ್ ನಟಿ ಸೋನಾಲಿ ಬೇಂದ್ರೆಯವರನ್ನು ಪ್ರೀತಿಸುತ್ತಿದ್ದರು. ಕ್ರಿಕೆಟ್ ಆಡುವ ದಿನಗಳಲ್ಲಿ ಅಖ್ತರ್ ತಮ್ಮ ವ್ಯಾಲೆಟ್(ಪರ್ಸ್)ನಲ್ಲಿ ಸೋನಾಲಿ ಫೋಟೋ ಇಟ್ಟುಕೊಳ್ಳುತ್ತಿದ್ದರು ಎಂದೆಲ್ಲಾ ವರದಿ ಮಾಡಿದ್ದವು.


ಜೂನ್ 18, 2019ರಂದು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ್ದ ಅಖ್ತರ್, ಭಾರತದ ನಟಿ ಸೋನಾಲಿ ಬೇಂದ್ರೆ ಅವರ ಅಭಿಮಾನಿಯಾಗಿರಲಿಲ್ಲ. ನಾನು ಆಕೆಯ ಕೆಲ ಸಿನೆಮಾಗಳನ್ನು ನೋಡಿದ್ದೇನೆ ಅಷ್ಟೆ. ಆಕೆ ನಿಜ ಜೀವನದಲ್ಲಿ ಕ್ಯಾನ್ಸರ್ ವಿರುದ್ಧ ಸೆಣಸಿದ್ದನ್ನು ನಾನು ಮೆಚ್ಚಿದ್ದೇನೆ. ಕ್ಲಿಷ್ಟಕರ ಸನ್ನಿವೇಶದಲ್ಲಿ ಆಕೆಯ ಗಟ್ಟಿತನ ಹಲವರಿಗೆ ಸ್ಪೂರ್ತಿದಾಯಕವೆನಿಸಿದೆ. ಕ್ಯಾನ್ಸರ್ ವಿರುದ್ದದ ಆಕೆಯ ಹೋರಾಟ ನೋಡಿದ ಬಳಿಕ ನಾನು ಆಕೆಯ ಅಭಿಮಾನಿಯಾದೆ ಎಂದು ಹೇಳಿದ್ದರು.

ಮುಂದುವರೆದು, ನಾನು ಎಂದೆಂದಿಗೂ ಆಕೆಯೊಂದಿಗೆ ಸಂಬಂಧ ಹೊಂದಿರಲಿಲ್ಲ. ಫೋಟೋ ವಿಚಾರಕ್ಕೆ ಬಂದರೆ, ನಾನು ನನ್ನ ಮನೆಯಲ್ಲಿ ಇಮ್ರಾನ್ ಖಾನ್ ಅವರ ಫೋಟೋವನ್ನಷ್ಟೇ ಇಟ್ಟುಕೊಂಡಿದ್ದೇನೆ. ಮತ್ತೆ ಯಾರ ಫೋಟೋವೂ ನನ್ನ ಬಳಿ ಇಲ್ಲ. ನನ್ನ ಪಾಲಿಗೆ ಇಮ್ರಾನ್ ಖಾನ್‌ಗಿಂತ ಮತ್ತೊಬ್ಬ ಆದರ್ಶಪ್ರಾಯ ಕ್ರಿಕೆಟಿಗನಿಲ್ಲ. ಸುಮ್ಮನೆ ಕೆಲ ಮಾಧ್ಯಮಗಳು ನನ್ನನ್ನು ಸೋನಾಲಿ ಹಾಗೂ ದಿಯಾ ಜೊತೆಗೆ ಸಂಬಂಧ ಕಟ್ಟಿದ್ದವು ಎಂದಿದ್ದಾರೆ.
ಪಂದ್ಯವಾಡಿಸಿ ಹಣ ಸಂಗ್ರಹಿಸುವ ಅವಶ್ಯಕತೆ ಭಾರತಕ್ಕಿಲ್ಲ; ಅಕ್ತರ್‌ಗೆ ಕಪಿಲ್ ದೇವ್ ತಿರುಗೇಟು! ...

ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..! 

ನಾನು ಸೋನಾಲಿಯನ್ನಾಗಲಿ, ದಿಯಾ ಮಿರ್ಜಾ ಅವರನ್ನಾಗಲಿ ಯಾವತ್ತೂ ಭೇಟಿಯಾಗಿಲ್ಲ. ಇಂತಹ ಗಾಳಿ ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಅಖ್ತರ್ ಮನವಿ ಮಾಡಿಕೊಂಡಿದ್ದಾರೆ.