Asianet Suvarna News Asianet Suvarna News

ಒಮ್ಮೆ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಬಳಿಕ, ನಿಮಗಿಂತ ಉತ್ತಮರು ಮತ್ತೊಬ್ಬರಿಲ್ಲ: ಕಪಿಲ್‌ ದೇವ್

* ತಾವು ನಾಯಕರಾಗಿದ್ದ ಆ ದಿನಗಳನ್ನು ಮೆಲುಕು ಹಾಕಿದ ಕಪಿಲ್‌ ದೇವ್

* ಕಪಿಲ್‌ ದೇವ್ ನೇತೃತ್ವದ ಟೀಂ ಇಂಡಿಯಾ ದೇಶಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟಿತ್ತು

* ಬಲಿಷ್ಠ ವಿಂಡೀಸ್ ಎದುರು ಗೆದ್ದು ಬೀಗಿದ್ದ ಕಪಿಲ್ ಡೆವಿಲ್ಸ್ ಪಡೆ

Once you enter the cricket ground nobody is better than you Says Kapil Dev kvn
Author
Bengaluru, First Published Oct 22, 2021, 3:16 PM IST

ನವದೆಹಲಿ(ಅ.22): ಭಾರತ ಕ್ರಿಕೆಟ್ ಕಂಡ ದಿಗ್ಗಜ ನಾಯಕರಲ್ಲಿ ಕಪಿಲ್‌ ದೇವ್ (Kapil Dev) ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ. ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ (Team India) 1983ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಎನ್ನುವ ಕೀರ್ತಿಗೆ ಕಪಿಲ್ ದೇವ್ ಭಾಜನರಾಗಿದ್ದರು. 

ಇದೀಗ ಕಪಿಲ್‌ ದೇವ್ ತಾವು ನಾಯಕರಾಗಿದ್ದ ಆ ದಿನಗಳನ್ನು ಮೆಲುಕುಹಾಕಿದ್ದಾರೆ. ಕಪಿಲ್ ದೇವ್ ತಮ್ಮ 23ನೇ ವಯಸ್ಸಿಗೆ ಟೀಂ ಇಂಡಿಯಾ ನಾಯಕತ್ವದ ಚುಕ್ಕಾಣಿ ಹಿಡಿದಿದ್ದರು. ಇದೇ ರೀತಿ ದೇಶಕ್ಕೆ ಎರಡನೇ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಯ ಸಾಮರ್ಥ್ಯದ ಬಗ್ಗೆಯೂ ಗುಣಗಾನ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ತಾಳ್ಮೆಯೊಂದಿಗೆ ಪರಿಸ್ಥಿತಿಗೆ ತಕ್ಕಂತೆ ತಂಡವನ್ನು ಮುನ್ನಡೆಸುವ ಮೂಲಕ ಜಗತ್ತಿನ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ. ಇನ್ನೊಂದೆಡೆ ಹರ್ಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್ ಕೊನೆಯ ಕ್ಷಣದವರೆಗೂ ಕೆಚ್ಚೆದೆಯ ಹೋರಾಟದ ಮೂಲಕ ದೇಶಕ್ಕೆ ಚೊಚ್ಚಲ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟಿದ್ದರು. ಕಪಿಲ್ ದೇವ್ ಪಡೆ ಕಪ್‌ ಗೆದ್ದಿದ್ದು, ಅದೃಷ್ಟದಿಂದಲ್ಲ ಬದಲಾಗಿ 1983ರ ಏಕದಿನ ವಿಶ್ವಕಪ್ (ODI World Cup) ಆರಂಭಕ್ಕೆ ಒಂದು ವರ್ಷ ಮುಂಚೆ ಕಪಿಲ್‌ ದೇವ್ ತಂಡದಲ್ಲಿ ಗಮನಾರ್ಹ ಬದಲಾವಣೆ ತರುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಕ್ರೆಡ್ ದಿ ಲಾಂಗ್ ಗೇಮ್‌ ಎನ್ನುವ ಸರಣಿ ಯೂಟೂಬ್ ಚಾನೆಲ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಕಪಿಲ್‌ ದೇವ್, ನನಗೆ ನಾಯಕತ್ವ ಪಟ್ಟ ಕಟ್ಟಿದಾಗ. ನಾನು ಆ ಹುದ್ದೆಗೆ ಅರ್ಹವಾದ ವ್ಯಕ್ತಿಯೆಂದು ನನಗೇ ಅನಿಸಿರಲಿಲ್ಲ. ನನಗಾಗ ತುಂಬಾ ಚಿಕ್ಕ ವಯಸ್ಸು. ನನ್ನ ತಂಡದಲ್ಲಿ ಸಾಕಷ್ಟು ಹಿರಿಯ ಹಾಗೂ ಪ್ರತಿಭಾನ್ವಿತ ಆಟಗಾರರಿದ್ದರು. ಅವರೆಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿತ್ತು. ಸುನಿಲ್ ಗವಾಸ್ಕರ್ (Sunil Gavaskar), ಮೋಹಿಂದರ್ ಅಮರ್‌ನಾಥ್, ಮದನ್‌ ಲಾಲ್‌, ಸಯ್ಯದ್ ಕಿರ್ಮಾನಿ ಅವರಿಗೆ ತಾವೇನು ಮಾಡಬೇಕು ಎಂದು ಹೇಳುವ ಅಗತ್ಯವಿರಲಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.

T20 World Cup ಇಂಡೋ-ಪಾಕ್‌ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!

ನಾನು ಅವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಿತ್ತಷ್ಟೇ. ನಾನು ಯಾವಾಗಲೂ ಹೇಳುತ್ತಿದ್ದೆ, ಒಂದು ಸಲ ಕ್ರಿಕೆಟ್ ಮೈದಾನಕ್ಕೆ ಪ್ರವೇಶ ಮಾಡಿದ ಬಳಿಕ ನಿನಗಿಂತ ಉತ್ತಮ ಮತ್ತೊಬ್ಬರಿಲ್ಲ. ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯ ಮುಕ್ತಾಯದ ಬಳಿಕ ಎದುರಾಳಿಯನ್ನು ಗೌರವಿಸಿ, ಆದರೆ ಮೈದಾನಕ್ಕಿಳಿದ ಬಳಿಕ ನಿನಗಿಂತ ಉತ್ತಮ ಮತ್ತೊಬ್ಬರಿಲ್ಲ ಎಂದು ಹೇಳುತ್ತಿದ್ದೆ ಎಂದಿದ್ದಾರೆ.

ನಾಯಕತ್ವದ ಬಗ್ಗೆ ಒಂದಂತೂ ಅರ್ಥವಾಗಿದೆ. ನಾವು ಪಂದ್ಯ ಗೆದ್ದಾಗ ಯಾರೂ ನಾಯಕನಿಂದ ಪಂದ್ಯ ಗೆದ್ದಿತು ಎನ್ನುತ್ತಿರಲಿಲ್ಲ. ಆದರೆ ಸೋತಾಗ ಎಲ್ಲಾ ಟೀಕೆ ಹಾಗೂ ಸೋಲಿನ ಹೊಣೆಗಾರಿಗೆ ನಾಯಕನ ತಲೆಗೆ ಕಟ್ಟಲಾಗುತ್ತಿತ್ತು. ಒಮ್ಮೊಮ್ಮೆ ಪ್ರತಿಭಾನ್ವಿತ ಆಟಗಾರರು ಕೈಕೊಡಬಹುದು, ಆದರೆ ಕ್ರೀಡೆಯ ಬಗ್ಗೆ ಬದ್ಧತೆಯಿರುವವರು ಕೈಚೆಲ್ಲಿ ಕೂರುವುದಿಲ್ಲ ಎಂದು ಕಪಿಲ್‌ ದೇವ್‌ ಹೇಳಿದ್ದಾರೆ.

ಕ್ಲೈವ್‌ ಲಾಯ್ಡ್‌ ನೇತೃತ್ವದ ವೆಸ್ಟ್ ಇಂಡೀಸ್ ತಂಡವು ಎರಡು ಏಕದಿನ ವಿಶ್ವಕಪ್ ಜಯಿಸಿ ಹ್ಯಾಟ್ರಿಕ್‌ ಗೆಲುವಿನ ಕನವರಿಕೆಯಲ್ಲಿ 1983ರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿತ್ತು. ಆದರೆ ಕಪಿಲ್‌ ಡೆವಿಲ್ಸ್ ಪಡೆ ಬಲಿಷ್ಠ ಕೆರಿಬಿಯನ್ ತಂಡವನ್ನು ಬಗ್ಗುಬಡಿಯುವ ಮೂಲಕ ದೇಶಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿತ್ತು.

Follow Us:
Download App:
  • android
  • ios