ಮುಂಬೈ(ನ.13): ಸಿಕ್ಸರ್ ಸಿಡಿಸುವುದರಲ್ಲಿ ಮಾತ್ರವಲ್ಲ, ದ್ವಿಶತಕ ಸಿಡಿಸುವುದರಲ್ಲೂ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎತ್ತಿದ ಕೈ. 2013ರಲ್ಲಿ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ದ  ಮೊದಲ ದ್ವಿಶತಕ ಸಿಡಿಸಿದ್ದರು. ಈ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ 3ನೇ ಕ್ರಿಕೆಟಿಗ  ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮರು ವರ್ಷವೇ ರೋಹಿತ್ ಶ್ರೀಲಂಕಾ ವಿರುದ್ದ ವಿಶ್ವದಾಖಲೆಯ ದ್ವಿಶತಕ ಸಿಡಿಸಿ ದಾಖಲೆ ಬರೆದರು. ಈ ದಾಖಲೆ ಅಳಿಸಿ ಹಾಕುವುದು ಅಷ್ಟು ಸುಲಭವಲ್ಲ.

ಇದನ್ನೂ ಓದಿ: 23 ಎಸೆತದಲ್ಲಿ ಅರ್ಧಶತಕ; 100ನೇ ಪಂದ್ಯದಲ್ಲಿ ರೋಹಿತ್ ದಾಖಲೆ!

ನವೆಂಬರ್ 13, 2014ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳು ಮೂಕವಿಸ್ಮಿತರಾಗಿದ್ದರು. ಕೇವಲ 4 ರನ್‌ಗೆ  ರೋಹಿತ್ ನೀಡಿದ್ದ ಕ್ಯಾಚ್ ಡ್ರಾಪ್ ಮಾಡಿದ್ದ ರೋಹಿತ್ ಶರ್ಮಾ, ಬಳಿಕ ಹಿಂತಿರುಗಿ ನೋಡಲೇ ಇಲ್ಲ. ರೋಹಿತ್  264 ರನ್ ಸಿಡಿಸಿ, ಏಕದಿನದ ವೈಯುಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು.

 

ಇದನ್ನೂ ಓದಿ: ರಾಂಚಿ ಟೆಸ್ಟ್: ಸಿಕ್ಸರ್ ಮೂಲಕವೇ ಡಬಲ್ ಸೆಂಚುರಿ ಬಾರಿಸಿದ ರೋಹಿತ್ ಶರ್ಮಾ

173 ಎಸೆತದಲ್ಲಿ ರೋಹಿತ್ ಶರ್ಮಾ 33 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ ರೋಹಿತ್ 264 ರನ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 404 ರನ್ ಸಿಡಿಸಿತು. ಶ್ರೀಲಂಕಾ 251 ರನ್‌ಗೆ ಆಲೌಟ್ ಆಗೋ ಮೂಲಕ 153 ರನ್ ಗೆಲುವು ಕಂಡಿತು. ರೋಹಿತ್ ದಾಖಲೆಯ ದ್ವಿಶತಕಕ್ಕೆ 5ನೇ ವರ್ಷದ  ಸಂಭ್ರಮ.