Asianet Suvarna News Asianet Suvarna News

Omicron Variant Threat: ಐಸಿಸಿ ಮಹಿಳಾ ವಿಶ್ವಕಪ್‌ ಅರ್ಹತಾ ಟೂರ್ನಿ ರದ್ದು..!

* ಕ್ರಿಕೆಟ್‌ ಟೂರ್ನಿಯ ಮೇಲೆ ಕೋವಿಡ್‌ ವೈರಸ್‌ನ ಹೊಸ ರೂಪಾಂತರಿ ಕೆಂಗಣ್ಣು

* ಹರಾರೆಯಲ್ಲಿ ನಡೆಯುತ್ತಿದ್ದ ಮಹಿಳಾ ಏಕದಿನ ವಿಶ್ವಕಪ್‌ನ ಅರ್ಹತಾ ಪಂದ್ಯಾವಳಿ ರದ್ದು

* ಪಾಕಿಸ್ತಾನ, ವೆಸ್ಟ್‌ ಇಂಡೀಸ್‌ ಹಾಗೂ ಬಾಂಗ್ಲಾದೇಶ ತಂಡಗಳು ಅರ್ಹತೆ ಪಡೆದಿವೆ

Omicron Variant Threat forces abandonment of Womens World Cup qualifier Pakistan Bangladesh and West Indies Qualified kvn
Author
Bengaluru, First Published Nov 28, 2021, 9:30 AM IST

ದುಬೈ(ನ.28): ಆಫ್ರಿಕಾ ಭಾಗದಲ್ಲಿ ಕೋವಿಡ್‌ ವೈರಸ್‌ನ (Coronavirus Variant) ಹೊಸ ರೂಪಾಂತರಿ ಕಾಣಿಸಿಕೊಂಡ ಕಾರಣ ಜಿಂಬಾಬ್ವೆಯ ಹರಾರೆಯಲ್ಲಿ ನಡೆಯುತ್ತಿದ್ದ ಮಹಿಳಾ ಏಕದಿನ ವಿಶ್ವಕಪ್‌ನ ಅರ್ಹತಾ ಪಂದ್ಯಾವಳಿಯನ್ನು ಐಸಿಸಿ ರದ್ದುಗೊಳಿಸಿದೆ. ಹೀಗಾಗಿ ಪಾಕಿಸ್ತಾನ, ವೆಸ್ಟ್‌ ಇಂಡೀಸ್‌ ಹಾಗೂ ಬಾಂಗ್ಲಾದೇಶ ತಂಡಗಳು ರ‍್ಯಾಂಕಿಂಗ್‌ ಆಧಾರದಲ್ಲಿ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. 

ಹೊಸ ರೂಪಾಂತರಿ ಕಾಣಿಸಿಕೊಂಡ ನಂತರ ಹಲವು ರಾಷ್ಟ್ರಗಳು ಆಫ್ರಿಕಾದ ದೇಶಗಳ ಮೇಲೆ ಪ್ರಯಾಣದ ನಿರ್ಬಂಧವನ್ನು (Travel Restriction) ವಿಧಿಸಿವೆ. ಅದರ ಬೆನ್ನಲ್ಲೇ ಆಟಗಾರರ ಆರೋಗ್ಯದ ದೃಷ್ಟಿಯಿಂದ ಅರ್ಹತಾ ಪಂದ್ಯಾವಳಿಯನ್ನು ರದ್ದುಗೊಳಿಸುತ್ತಿರುವುದಾಗಿ ಐಸಿಸಿ (ICC) ತಿಳಿಸಿದೆ. 2022ರ ಮಾರ್ಚ್‌ 4ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯುವ ಮಹಿಳಾ ಏಕದಿನ ವಿಶ್ವಕಪ್‌ಗಾಗಿ (ICC Women's ODI World Cup) 9 ತಂಡಗಳ ನಡುವೆ ಈ ಟೂರ್ನಿ ಆಯೋಜಿಸಲಾಗಿತ್ತು. ಭಾರತ, ದಕ್ಷಿಣ ಆಫ್ರಿಕಾ, ಆಸ್ಪ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ಪಾಕಿಸ್ತಾನ್‌, ವೆಸ್ಟ್‌ ಇಂಡೀಸ್‌ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

ದ.ಆಫ್ರಿಕಾ-ನೆದರ್‌ಲೆಂಡ್ಸ್‌ ಸರಣಿ ಮುಂದಕ್ಕೆ

ಜೋಹಾನ್ಸ್‌ಬರ್ಗ್‌: ಕೋವಿಡ್‌ ರೂಪಾಂತರಿ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ಹಾಗೂ ನೆದರ್‌ಲೆಂಡ್ಸ್‌ ನಡುವಿನ 2 ಮತ್ತು 3ನೇ ಏಕದಿನ ಪಂದ್ಯ ಮುಂದೂಡಿಕೆಯಾಗಿದೆ. ಆಫ್ರಿಕಾ ಭಾಗದಲ್ಲಿ ಹೊಸ ರೂಪಾಂತರಿ ಕಾಣಿಸಿಕೊಂಡ ನಂತರ ಹಲವು ರಾಷ್ಟ್ರಗಳು ಆಫ್ರಿಕಾದ ದೇಶಗಳ ಮೇಲೆ ಪ್ರಯಾಣದ ನಿರ್ಬಂಧವನ್ನು ವಿಧಿಸಿವೆ. ಅದರ ಬೆನ್ನಲ್ಲೇ ಉಭಯ ತಂಡಗಳ ಆಡಳಿತ ಮಂಡಳಿಗಳು ಸರಣಿಯನ್ನು ಮುಂದೂಡಲು ನಿರ್ಧರಿಸಿದೆ. ಸರಣಿಯ ಮೊದಲ ಪಂದ್ಯ ಶುಕ್ರವಾರ ಮಳೆಯಿಂದಾಗಿ ಅರ್ಧದಲ್ಲೆ ಮೊಟಕುಗೊಂಡಿದ್ದರೆ, 2 ಮತ್ತು 3ನೇ ಪಂದ್ಯಗಳು ನವೆಂಬರ್ 28 ಮತ್ತು ಡಿಸೆಂಬರ್ 1ಕ್ಕೆ ನಿಗದಿಯಾಗಿತ್ತು.

ದ.ಆಫ್ರಿಕಾ ಪ್ರವಾಸಕ್ಕೂ ಮುನ್ನ ಬಿಸಿಸಿಐ ಸರ್ಕಾರವನ್ನು ಸಂಪರ್ಕಿಸಬೇಕು: ಠಾಕೂರ್‌

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ವೈರಸ್‌ನ ರೂಪಾಂತರಿ ತಳಿ ಒಮಿಕ್ರೋನ್‌ (Omicron Variant) ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ದಕ್ಷಿಣ ಆಫ್ರಿಕಾಕ್ಕೆ ಕ್ರಿಕೆಟ್‌ ತಂಡವನ್ನು (South Africa Cricket Team) ಕಳುಹಿಸುವ ಮೊದಲು ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕೆಂದು ಬಿಸಿಸಿಐಗೆ (BCCI) ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಸೂಚಿಸಿದ್ದಾರೆ.

Inzamam ul Haq Claims ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಜತೆ ಬಿಸಿಸಿಐ ಸಂಬಂಧ ಸರಿಯಿರಲಿಲ್ಲವೆಂದ ಪಾಕ್ ಮಾಜಿ ನಾಯಕ..!

ಬಿಸಿಸಿಐ ಮಾತ್ರವಲ್ಲ, ಎಲ್ಲಾ ಕ್ರೀಡಾ ಸಮಿತಿಗಳು ರೂಪಾಂತರಿ ತಳಿ ಪತ್ತೆಯಾಗಿರುವ ದೇಶಕ್ಕೆ ತಂಡಗಳನ್ನು ಕಳುಹಿಸುವ ಮುನ್ನ ಕೇಂದ್ರ ಸರ್ಕಾರದ (Central Govt) ಜೊತೆ ಚರ್ಚಿಸಬೇಕೆಂದು ಠಾಕೂರ್‌ ತಿಳಿಸಿದ್ದಾರೆ. ಮುಂದಿನ ತಿಂಗಳಿಂದ ಭಾರತ ಕ್ರಿಕೆಟ್‌ ತಂಡ (Indian Cricket Team) ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ-20 ಸರಣಿ ಆಡಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮುಂದಿನ ನಿರ್ಧಾರ ಕೈಗೊಳ್ಳುವ ಮೊದಲು ಕೇಂದ್ರ ಸರ್ಕಾರದ ಸಲಹೆ ಪಡೆಯಬೇಕೆಂದು ಠಾಕೂರ್‌ ಹೇಳಿದ್ದಾರೆ.

New Covid 19 variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಅತಂತ್ರ..?

ಕೊರೋನಾ ವೈರಸ್‌ನ ರೂಪಾಂತರ ತಳಿ ಬೋಟ್ಸ್‌ವಾನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಭಾರತ ಕ್ರಿಕೆಟ್‌ ತಂಡ ಕೈಗೊಳ್ಳಬೇಕಿರುವ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕರಿನೆರಳು ಆವರಿಸಿದೆ. ಸರ್ಕಾರದ ಸಲಹೆ ಆಧರಿಸಿದ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ ಮೂಲಗಳು ತಿಳಿಸಿದ್ದವು.

Follow Us:
Download App:
  • android
  • ios