Asianet Suvarna News Asianet Suvarna News

World Cup 2023 Final: ಬೆಂಗಳೂರಿನಿಂದ ಅಹಮದಾಬಾದ್‌ ಫೈಟ್‌ ಟಿಕೆಟ್‌ ರೇಟ್‌ 33 ಸಾವಿರ!

flight ticket from bangalore to Ahmedabad ಐಸಿಸಿ ವಿಶ್ವಕಪ್ 2023 ಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಹಣಾಹಣಿಗೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಇದರ ಬೆನ್ನಲ್ಲಿಯೇ ದೇಶದ ವಿವಿಧ ನಗರಗಳಿಂದ ಅಹಮದಾಬಾದ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ವಿಮಾನ ಕಂಪನಿಗಳು ಇದರ ಲಾಭವನ್ನು ಎತ್ತಲು ಸಜ್ಜಾಗಿವೆ.

ODI World Cup 2023 Final Fever Rs 33,000 for a one way flight from Bengaluru to Ahmedabad san
Author
First Published Nov 17, 2023, 6:03 PM IST

ಬೆಂಗಳೂರು (ನ.17): ಭಾನುವಾರ ನವೆಂಬರ್‌ 19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯದ ಟಿಕೆಟ್‌ ಪಡೆಯಲು ನೀವು ಅದೃಷ್ಟವಂತರಾಗಿರಬಹುದು. ಸಮಯಕ್ಕೆ ಸರಿಯಾಗಿ ಸ್ಟೇಡಿಯಂ ತಲುಪಲು ಸಾಧ್ಯವಾಗುವ ಹೋಮ್‌ಸ್ಟೇ ಅಥವಾ ಹೋಟೆಲ್‌ಗಳನ್ನೂ ಕೂಡ ನೀವು ಬುಕ್‌ ಮಾಡಿರಬಹುದು. ಆದರೆ, ಫೈನಲ್‌ ಪಂದ್ಯಕ್ಕೆ ಅಹಮದಾಬಾದ್‌ಗೆ ಫ್ಲೈಟ್‌ನಲ್ಲಿ ಹೋಗ್ತೀರಿ ಎಂದಾದಲ್ಲಿ ಫೇರ್‌ ಬಾಂಬ್‌ ಎದುರಿಸಲು ನೀವು ಸಜ್ಜಾಗಿರಬೇಕು. ಈಗಾಗಲೇ ನೀವು ಅಹಮದಾಬಾದ್‌ಗೆ ಹೋಗುವ ಫ್ಲೈಟ್‌ ಟಿಕೆಟ್‌ಅನ್ನು ಬುಕ್‌ ಮಾಡದೇ, ಭಾರತ ವಿಶ್ವಕಪ್‌ ಫೈನಲ್‌ಗೇರಿದ ಬಳಿಕ ಬುಕ್‌ ಮಾಡಲು ಸಜ್ಜಾಗಿದ್ದೀರಿ ಎಂದಾದಲ್ಲಿ, ನಿಮಗೆ ಶಾಕ್‌ ಆಗೋದು ಖಂಡಿತ.

ಯಾಕೆಂದರೆ, ಬೆಂಗಳೂರಿನಿಂದ ಅಹಮದಾಬಾದ್‌ಗೆ ಏಕಮುಖ ಸಂಚಾರದ ಟಿಕೆಟ್‌ನ ಬೆಲೆ ಬರೋಬ್ಬರಿ 33 ಸಾವಿರ ರೂಪಾಯಿ ಆಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರು ಹಾಗೂ ಅಹಮದಾಬಾದ್‌ ನಡುವೆ ಏಕಮುಖ ಸಂಚಾರದ ಟಿಕೆಟ್‌ ಬೆಲೆ 5700 ರೂಪಾಯಿ ಆಗಿರುತ್ತದೆ. ಆದರೆ, ನವೆಂಬರ್‌ 18 ರ ಶನಿವಾರದಂದು ನೀವು ಬೆಂಗಳೂರಿನಿಂದ ಅಹಮದಾಬಾದ್‌ಗೆ ಪ್ರಯಾಣ ಮಾಡ್ತೀರಿ ಎಂದಾದಲ್ಲಿ ಟಿಕೆಟ್‌ ಬೆಲೆ 33 ಸಾವಿರ ರೂಪಾಯಿ ಆಗಿದೆ.

ಟೀಮ್‌ ಇಂಡಿಯಾ ಕೂಡ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ಗೇರಿರುವ ಕಾರಣ, ಫೈನಲ್‌ ಪಂದ್ಯ ನಡೆಯುವ ಅಹಮದಾಬಾದ್‌ ನಗರಕ್ಕೆ ವಿಮಾನ ಪ್ರಯಾಣದ ದರಗಳು ಭರ್ಜರಿಯಾಗಿ ಏರಿಕೆಯಾಗಿವೆ. ಶನಿವಾರ ಬೆಂಗಳೂರಿನಿಂದ ಅಹಮದಾಬಾದ್‌ನಲ್ಲಿ ಆರು ವಿಮಾನಗಳನ್ನು ಇಂಡಿಗೋ ನಿರ್ವಹಣೆ ಮಾಡುತ್ತಿದೆ. ಈ ವಿಮಾನಗಳ ದರಗಳು ಕೂಡ ಸಿಕ್ಕಾಪಟ್ಟೆ ಏರಿಕೆ ಕಂಡಿದೆ.

'ಟಿವಿಯಲ್ಲಿ ಟೀಮ್‌ ಇಂಡಿಯಾದ ಮೊದಲ ಸೆಮಿಫೈನಲ್‌ ಪಂದ್ಯ ನೋಡಿದ ಬಳಿಕ ನಾವಲ್ಲರೂ ಕ್ರೇಜಿ ಆಗಿದ್ದೆವು. ನನ್ನಂಥ ಫ್ಯಾನ್ಸ್‌ಗಳಿಗೆ ಟೀಮ್‌ ಇಂಡಿಯಾ ಬಹಳ ಖುಷಿ ತಂದಿದೆ. ಬಹಳ ಎಕ್ಸೈಟ್‌ ಆಗಿದ್ದ ನಾನು ಫೈನಲ್‌ಅನ್ನು ಅಹಮದಾಬಾದ್‌ ಸ್ಟೇಡಿಯಂನಲ್ಲಿಯೇ ನೋಡಬೇಕು ಎಂದು ಬಯಸಿದ್ದೇನೆ. ಹಾಗೇನಾದರೂ ಸ್ಟೇಡಿಯಂಗೆ ಟಿಕೆಟ್‌ ಸಿಗದೇ ಇದ್ದಲ್ಲಿ, ಅಲ್ಲಿನ ಫ್ಯಾನ್‌ ಜೋನ್‌ನಲ್ಲಿ ಕುಳಿತು ವೀಕ್ಷಣೆ ಮಾಡುತ್ತೇನೆ' ಎಂದು ಜಯನಗರ ನಿವಾಸಿಯಾಗಿರುವ ಹಾಗೂ ಇ-ಕಾಮರ್ಸ್‌ ಕಂಪನಿಯಲ್ಲಿ ಮ್ಯಾನೇಜರ್‌ ಆಗಿರುವ 31 ವರ್ಷದ ಮಧು ಪ್ರಸಾದ್‌ ಹೇಳುತ್ತಾರೆ.  ಆದರೆ, ಬೆಂಗಳೂರಿನಿಂದ ಅಹಮದಾಬಾದ್‌ಗೆ ಟಿಕೆಟ್‌ ಬುಕ್‌ ಮಾಡಲು ಮುಂದಾದಾಗ ನನಗೆ ಅಚ್ಚರಿ ಕಾದಿತ್ತು. ರಾತ್ರಿ 9 ಗಂಟೆಗೆ  ಬೆಂಗಳೂರಿನಿಂದ ಅಹಮದಾಬಾದ್‌ನ ಇಂಡಿಗೋ ವಿಮಾನ ಪ್ರಯಾಣದ ದರ 32,999 ರೂಪಾಯಿ ಆಗಿದೆ ಎಂದು ಹೇಳಿದ್ದಾರೆ.

ಇನ್ನು ಗುರುವಾರದ ಮುಂಜಾನೆ ಹಾಗೂ ಸಂಜೆ 7 ಗಂಟೆಯ ಫ್ಲೈಟ್‌ಗಳು ಅತ್ಯಂತ ಕಡಿಮೆ ದರವಾಗಿದ್ದವು. ಈ ವೇಳೆ ಏಕಮುಖ ಸಂಚಾರಕ್ಕೆ 26,999 ರೂಪಾಯಿ ಟಿಕೆಟ್‌ ಆಗಿದೆ. ಶನಿವಾರದಂದು ಅತ್ಯಂತ ಕಡಿಮೆ ದರದ ಫ್ಲೈಟ್‌ ಕ್ಯಾರಿಯರ್‌ ಆಗಿರುವ ಅಕ್ಸಾ ಏರ್‌ನ ವಿಮಾನ ಪ್ರಯಾಣದ ದರವೇ 28,778 ರೂಪಾಯಿ ಆಗಿದೆ.

ಸಚಿನ್ ಸೆಂಚುರಿ ದಾಖಲೆ ಯಾರು ಮುರೀತಾರೆ ಅನ್ಸಿತ್ತು: ಕೊಹ್ಲಿ ಬಗ್ಗೆ ಪಾಕ್ ಕ್ರಿಕೆಟಿಗ!

ಭಾರತದಲ್ಲಿ ಕ್ರಿಕೆಟ್ ಮೇಲಿನ ಉತ್ಸಾಹವು ಎಷ್ಟು ತೀವ್ರವಾಗಿದೆಯೆಂದರೆ, ಪಂದ್ಯದ ದಿನದಂದು ಅಂದರೆ ಭಾನುವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಅಹಮದಾಬಾದ್‌ಗೆ ಮುಂಜಾನೆ ನಿರ್ಗಮನವು ರೂ 30,999 ರಿಂದ ಪ್ರಾರಂಭವಾಗುತ್ತಿದೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಬೆಂಗಳೂರಿನ ಕೆಲವು ಅಭಿಮಾನಿಗಳು ಮುಂಬೈನಲ್ಲಿ ಒಂದು ಸ್ಟಾಪ್‌ ನೀಡಲಿರುವ ವಿಮಾನವನ್ನು ಏರಲು ಪ್ರಯತ್ನಿಸುತ್ತಿದ್ದಾರೆ. ಇಂಥ ವಿಮಾನಗಳ ಏಕಮುಖ ಸಂಚಾರದ ಟಿಕೆಟ್‌ ದರ ಕೂಡ 16 ಸಾವಿರ ರೂಪಾಯಿ ಅಗಿದೆ.

ಪತ್ನಿ ಮೇಲಿನ ಕಳಂಕ ತೊಡೆದು ಹಾಕಿದ ವಿರಾಟ್‌: ಟೀಂ ಇಂಡಿಯಾಗೆ ಅದೃಷ್ಟ ದೇವತೆಯಾದ ಅನುಷ್ಕಾ..!

Follow Us:
Download App:
  • android
  • ios