ಕ್ರಿಕೆಟ್ ಜಗತ್ತಿನಲ್ಲೊಬ್ಬ ನಿತೀಶ್ ಕುಮಾರ್..! ಈತ ದೇಶ ಬದಲಿಸುವಲ್ಲಿ ನಿಸ್ಸೀಮ..!
ರಾಜಕಾರಣದಲ್ಲಿ ನಿತೀಶ್ ಕುಮಾರ್ ಇದ್ದಂತೆ, ಕ್ರಿಕೆಟ್ನಲ್ಲೂ ಒಬ್ಬ ನಿತೀಶ್ ಕುಮಾರ್ ಇದ್ದಾನೆ. ಆ ನಿತೀಶ್ ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡಿದ್ರೆ, ಈ ಕ್ರಿಕೆಟರ್ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಜಂಪ್ ಮಾಡ್ತಾನೆ. ಆ ಕ್ರಿಕೆಟರ್ ಬೇರ್ಯಾರು ಅಲ್ಲ, ಟಿ20 ವಿಶ್ವಕಪ್ನಲ್ಲಿ USA ಪರ ಆಡ್ತಿರೋ ಭಾರತೀಯ ಮೂಲದ ನಿತೀಶ್ ಕುಮಾರ್.
ನ್ಯೂಯಾರ್ಕ್: ಭಾರತದ ಈ ರಾಜಕಾರಣಿ ಅದ್ಯಾವಾಗ ಯಾವ ಪಕ್ಷ, ಯಾವ ಗುಂಪಿನಲ್ಲಿ ಇರ್ತಾರೆ ಅಂತ ಹೇಳೋಕಾಗಲ್ಲ. ಇವತ್ತು ಇಲ್ಲಿದ್ದವರು, ನಾಳೆ ಬೇರೆ ಕಡೆ ಇರ್ತಾರೆ. ಅದಕ್ಕೆ ಇವರನ್ನ ಭಾರತೀಯ ರಾಜಕಾರಣದ ಜಂಪಿಂಗ್ ಸ್ಟಾರ್ ಅಂತಾರೆ. ಇನ್ನು ಇವರಂತೆ ಕ್ರಿಕೆಟ್ ದುನಿಯಾದಲ್ಲೂ ಒಬ್ಬರಿದ್ದಾರೆ. ಇವ್ರು ಯಾವಾಗ ಯಾವ ದೇಶದ ಪರ ಆಡ್ತಾರೆ ಅಂತ ಹೇಳೋಕಾಗಲ್ಲ..!
ಆ ನಿತೀಶ್ ಪಕ್ಷ ಬದಲಿಸುವಲ್ಲಿ ಎಕ್ಸ್ಪರ್ಟ್..!
ನಿತೀಶ್ ಕುಮಾರ್..! ಭಾರತದ ಪವರ್‌ಫುಲ್ ರಾಜಕಾರಣಿ. ಸದ್ಯ ಬಿಹಾರದ ಚೀಫ್ ಮಿನಿಸ್ಟರ್. ಇದಕ್ಕೂ ಮೊದಲು 8 ಬಾರಿ ಸಿಎಂ ಆಗಿ ಬಿಹಾರವನ್ನೂ ಆಳಿದ್ದವರು. ಅಲ್ಲದೇ ಒಮ್ಮೆ ಸೆಂಟ್ರಲ್ ರೈಲ್ವೇ ಮಿನಿಸ್ಟರ್ ಆಗಿದ್ದವರು. ಹಲವು ಜನಪರ ಯೋಜನೆ, ಕಾರ್ಯಗಳ ಮೂಲಕ ಜನ ಮೆಚ್ಚುಗೆ ಗಳಿಸಿದವ್ರು. ಆದ್ರೆ, ಇಷ್ಟೆಲ್ಲಾ ಹೆಸರು, ಖ್ಯಾತಿ ಗಳಿಸಿರೋ ನಿತೀಶ್‌ಗೆ ಅದೊಂದು ಚಾಳಿಯಿದೆ. ಅದೇನಂದ್ರೆ, ಅದ್ಯಾವಾಗ ಯಾರ ಪರ, ಯಾರ ಗುಂಪಿನಲ್ಲಿ ಇರ್ತಾರೋ ಅಂತ ಹೇಳೋಕೆ ಆಗಲ್ಲ. ಬಟ್ಟೆ ಬದಲಾಯಿಸದಷ್ಟು ಸುಲಭವಾಗಿ ನಿತೀಶ್ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಂಪ್ ಆಗ್ತಾರೆ.
T20 World Cup 2024: ಟೀಂ ಇಂಡಿಯಾ ಆಟಗಾರರ ಜತೆ ಕಾಣಿಸಿಕೊಂಡ 'ನಿಗೂಢ ವ್ಯಕ್ತಿ'..! ವಿಡಿಯೋ ವೈರಲ್
2013ರವರೆಗೂ BJP ನೇತೃತ್ವದ NDA ಅಲಯನ್ಸ್‌ನಲ್ಲಿದ್ದ ಜೆಡಿಯು ಮುಖ್ಯಸ್ಥ 2013ರಲ್ಲಿ ಅದರಿಂದ ಹೊರಬಂದ್ರು. ಅಲ್ಲಿಂದ ಕಾಂಗ್ರೆಸ್ ಮುಂದಾಳತ್ವದ UPA ಮೈತ್ರಿಕೂಟ ಸೇರಿಕೊಂಡ್ರು. 2015ರಲ್ಲಿ UPA ಬಿಟ್ಟು ಮತ್ತೆ NDAಗೆ ಸೇರಿದ್ರು. 2022ರಲ್ಲಿ ಮತ್ತೆ NDAಗೆ ಕೈಕೊಟ್ಟು, NDA ಮಿತ್ರ ಪಕ್ಷ RJD ಜೊತೆ ಸೇರಿ 8ನೇ ಬಾರಿ ಸಿಎಂ ಪಟ್ಟಕ್ಕೇರಿದ್ರು. 2024ರ ಲೋಕಸಭಾ ಚುನಾವಣೆಗೂ ಮುನ್ನ INDIA ಒಕ್ಕೂಟದಲ್ಲಿದ್ದ ನಿತೀಶ್ ಮತ್ತೆ NDAಗೆ ಬಂದು, 9ನೇ ಬಾರಿ ಬಿಹಾರ ಸಿಎಂ ಆದ್ರು. ನೋಡಿದ್ರಲ್ಲಾ ನಿತೀಶ್ ಅದೆಷ್ಟು ಬಾರಿ ಪಕ್ಷ ಬದಲಿಸಿದ್ದಾರೆ ಅಂತ.
ರಾಜಕಾರಣದಲ್ಲಿ ನಿತೀಶ್ ಕುಮಾರ್ ಇದ್ದಂತೆ, ಕ್ರಿಕೆಟ್ನಲ್ಲೂ ಒಬ್ಬ ನಿತೀಶ್ ಕುಮಾರ್ ಇದ್ದಾನೆ. ಆ ನಿತೀಶ್ ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡಿದ್ರೆ, ಈ ಕ್ರಿಕೆಟರ್ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಜಂಪ್ ಮಾಡ್ತಾನೆ. ಆ ಕ್ರಿಕೆಟರ್ ಬೇರ್ಯಾರು ಅಲ್ಲ, ಟಿ20 ವಿಶ್ವಕಪ್ನಲ್ಲಿ USA ಪರ ಆಡ್ತಿರೋ ಭಾರತೀಯ ಮೂಲದ ನಿತೀಶ್ ಕುಮಾರ್.
ಒಮ್ಮೆ ಕೆನಡಾ ಪರ ಮತ್ತೊಮ್ಮೆ ಅಮೇರಿಕಾ ಪರ..!
ಯೆಸ್, ಸದ್ಯ ಅಮೇರಿಕಾ ಪರ ಆಡ್ತಿರೋ ನಿತೀಶ್ ಕುಮಾರ್, ಕೆಲ ವರ್ಷಗಳ ಹಿಂದೆ ಕೆನಡಾ ಪರ ಬ್ಯಾಟ್ ಬೀಸಿದ್ರು. ಇನ್ಫ್ಯಾಕ್ಟ್ ನಿತೀಶ್ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ ಆರಂಭವಾಗಿದ್ದೇ ಕೆನಡಾ ಮೂಲಕ. ಕೇವಲ 15ನೇ ವಯಸ್ಸಿನಲ್ಲೇ ಒನ್ಡೇ ಕ್ರಿಕೆಟ್‌ಗೆ ಎಂಟ್ರಿ ನೀಡಿದ್ದ ನಿತೀಶ್, ಕೆನಾಡದಿಂದ USAಗೆ, USAದಿಂದ ಕೆನಾಡಾಗೆ ಜಂಪ್ ಮಾಡಿದ್ದಾರೆ. ಕೆನಡಾ ಅಂಡರ್ 15, ಅಂಡರ್ 19 ಪರ ಆಡಿದ್ದ ನಿತೀಶ್, ಅಮೇರಿಕ ಅಂಡರ್ 15 ಪರವೂ ಆಡಿದ್ರು. ಅಲ್ಲದೇ, ಕೆಲ ಕಾಲ ಕೆನಡಾ ತಂಡದ ನಾಯಕರಾಗಿದ್ರು.ಆದ್ರೀಗ, T20 ವಿಶ್ವಕಪ್ನಲ್ಲಿ ಅಮೇರಿಕಾರ ಪರ ಆಡ್ತಿದ್ದಾರೆ.
ಕೊನೆಗೂ ಗಂಭೀರ್ ಆ 'ಡಿಮ್ಯಾಂಡ್' ಒಪ್ಪಿಕೊಂಡ ಬಿಸಿಸಿಐ..! ಟೀಂ ಇಂಡಿಯಾ ಹೆಡ್ ಕೋಚ್ ಘೋಷಣೆಗೆ ಕ್ಷಣಗಣನೆ
ಒಟ್ಟಿನಲ್ಲಿ ರಾಜಕಾರಣದ ನಿತೀಶ್ ಮೈತ್ರಿಕೂಟಗಳನ್ನ ಬದಲಿಸಿದ್ರೆ, ಕ್ರಿಕೆಟ್‌ನ ನಿತೀಶ್ ದೇಶವನ್ನೇ ಬದಲಾಯಿಸ್ತಿದ್ದಾರೆ. ಇದ್ರಿಂದ ಇವರಿಬ್ಬರು ಮಾತ್ರ ಹಿಂಗೇನಾ..? ಅಥವಾ ನಿತೀಶ್ ಅನ್ನೋ ಹೆಸರಿನವರೆಲ್ಲಾ ಹಿಂಗೇನಾ ಅನ್ನೋ ಪ್ರಶ್ನೆ ಮೂಡಿದೆ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್