ಮೌಂಟ್‌ ಮಾಂಗನ್ಯುಯಿ(ಡಿ.01): ಆತಿಥೇಯ ನ್ಯೂಜಿಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಇಲ್ಲಿ ಸೋಮವಾರ ನಡೆದ 3ನೇ ಹಾಗೂ ಸರಣಿಯ ಕೊನೆಯ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರ ಹೊರತಾಗಿಯೂ3 ಪಂದ್ಯಗಳ ಟಿ20 ಸರಣಿಯನ್ನು ನ್ಯೂಜಿಲೆಂಡ್‌ 2-0 ಯಿಂದ ವಶಪಡಿಸಿಕೊಂಡಿತು. 

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ಹಂಗಾಮಿ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 2.2 ಓವರಲ್ಲಿ 1 ವಿಕೆಟ್‌ಗೆ 25 ರನ್‌ಗಳಿಸಿದ್ದಾಗ ಮಳೆ ಸುರಿಯಿತು. ಮಳೆ ನಿಲ್ಲದೇ ಇದ್ದರಿಂದ ಪಂದ್ಯವನ್ನು ಅಂಪೈರ್‌ಗಳು ರದ್ದುಗೊಳಿಸಿದರು. 

ಇನ್ನು ಮೊದಲ ಟಿ20 ಪಂದ್ಯವನ್ನು ಡೆಕ್ವರ್ತ್ ಲೂಯಿಸ್ ನಿಯಮದಂತೆ ಆತಿಥೇಯ ನ್ಯೂಜಿಲೆಂಡ್ ತಂಡ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಗ್ಲೆನ್ ಫಿಲಿಫ್ಸ್ ವಿಸ್ಫೋಟಕ ಶತಕದ ನೆರವಿನಿಂದ 72 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಟಿ20 ಸರಣಿಯನ್ನು ಕಿವೀಸ್ ಪಡೆ ಕೈ ವಶಮಾಡಿಕೊಂಡಿತ್ತು.

ಕೊಹ್ಲಿ ಅನುಪಸ್ಥಿತಿಯಲ್ಲಿ ಆಸೀಸ್ ಎದುರು ಟೆಸ್ಟ್ ಸರಣಿ ಗೆದ್ರೆ ವರ್ಷ ಪೂರ್ತಿ ಸಂಭ್ರಮಾಚರಣೆ ಮಾಡಬಹುದು..!

ಇನ್ನು 3 ಪಂದ್ಯಗಳಲ್ಲಿ ಒಟ್ಟು 7 ವಿಕೆಟ್‌ ಕಬಳಿಸುವ ಮೂಲಕ ಅತ್ಯದ್ಭುತ ಪ್ರದರ್ಶನ ತೋರಿದ್ದ ಕಿವೀಸ್‌ನ ಲಾಕಿ ಫರ್ಗ್ಯೂಸನ್‌ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.