*ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿರುವ ಟೀಂ ಇಂಡಿಯಾ*ಸೆಮಿಫೈನಲ್‌ ಆಸೆ ಜೀವಂತವಾಗಿರಿಸಲು ದೊಡ್ಡ ಗೆಲುವು ಅನಿವಾರ್ಯ*ಆಫ್ಘನ್‌ ವಿರುದ್ಧ ಭರ್ಜರಿ ಆಟವಾಡಿ ಲಯಕ್ಕೆ ಮರಳಿರುವ ಭಾರತ*ನೆಟ್‌ ರನ್‌ ಉತ್ತಮಗೊಳಿಸಿಕೊಳ್ಳುವುದರ ಕಡೆ ಕೊಹ್ಲಿ ಪಡೆ ಗಮನ 

ದುಬೈ(ನ.5): ಅಫ್ಘಾನಿಸ್ತಾನ ವಿರುದ್ಧ 66 ರನ್‌ಗಳ ಗೆಲುವು ಸಾಧಿಸಿ ಖಾತೆ ತೆರೆದಿರುವ ಭಾರತ, ಶುಕ್ರವಾರ ಗುಂಪು-1ರ ತನ್ನ 4ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದ್ದು(India Vs Scotland), ಮತ್ತೊಂದು ದೊಡ್ಡ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಸೆಮಿಫೈನಲ್‌ ಭವಿಷ್ಯ ತನ್ನ ಕೈಯಲಿಲ್ಲದಿದ್ದರೂ ಟೀಂ ಇಂಡಿಯಾಗಿದು ಮಾಡು ಇಲ್ಲವೇ ಮಡಿ ಪಂದ್ಯವೇ ಆಗಿದೆ. ಹಾಗಾಗಿ ನೆಟ್‌ ರನ್‌ ಉತ್ತಮಗೊಳಿಸಿಕೊಳ್ಳುವುದರ ಕಡೆ ಕೊಹ್ಲಿ ಪಡೆ ಗಮನಹರಿಸಬೇಕಿದೆ.

ಆಫ್ಘನ್‌ (Afghanistan) ವಿರುದ್ಧ ಗೆದ್ದ ಕೇವಲ 2 ದಿನದಲ್ಲಿ ಮತ್ತೆ ಕಣಕ್ಕಿಳಿಯಲಿರುವ ಟೀಂ ಇಂಡಿಯಾ, ದೊಡ್ಡ ಅಂತರದಲ್ಲಿ ಜಯಿಸಿ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕಿದೆ. ತಂಡ ಬಾಕಿ ಇರುವ 2 ಪಂದ್ಯಗಳಲ್ಲೂ ಗೆದ್ದು, ನ್ಯೂಜಿಲೆಂಡ್‌ ತಂಡ ನಮೀಬಿಯಾ ಇಲ್ಲವೇ ಅಫ್ಘಾನಿಸ್ತಾನ ವಿರುದ್ಧ ಸೋತರೆ ಭಾರತಕ್ಕೆ ಸೆಮೀಸ್‌ಗೇರಲು ಅವಕಾಶವಿರಲಿದೆ. ಹೀಗಾಗಿ, ತಂಡ ತನ್ನಿಂದ ಸಾಧ್ಯವಾಗುವುದನ್ನು ಸಾಧಿಸಬೇಕಿದೆ.

ಶ್ರೀಲಂಕಾ ವಿರುದ್ಧ ಸೋಲು, ವೆಸ್ಟ್ ಇಂಡೀಸ್ ಕನಸು ಛಿದ್ರ!

ಸ್ಕಾಟ್ಲೆಂಡ್‌ ತನ್ನ ಹಿಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಉತ್ತಮ ಹೋರಾಟ ಪ್ರದರ್ಶಿಸಿತ್ತು. ಕೇವಲ 16 ರನ್‌ಗಳಿಂದ ಸೋಲುಂಡಿತ್ತು. ಹೀಗಾಗಿ, ಭಾರತ ಮೈಮರೆಯುವಂತ್ತಿಲ್ಲ. ಸ್ಕಾಟ್ಲೆಂಡ್‌ ತಂಡದಲ್ಲಿ ಅತ್ಯುತ್ತಮ ಟಿ20 ಆಟಗಾರರಿದ್ದು, ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ. ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ ಹಾಗೂ ಹಾರ್ದಿಕ್‌ ಪಾಂಡ್ಯ ಆಫ್ಘನ್‌ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಈ ಪಂದ್ಯದಲ್ಲೂ ಭಾರತೀಯ ಬ್ಯಾಟರ್‌ಗಳಿಂದ ಸ್ಫೋಟಕ ಆಟ ನಿರೀಕ್ಷಿಸಲಾಗಿದೆ.

Aus vs Ban ಆಸೀಸ್‌ ಅಬ್ಬರಕ್ಕೆ ಬಾಂಗ್ಲಾದೇಶ ಧೂಳೀಪಟ..!

ಇನ್ನು 4 ವರ್ಷದ ಬಳಿಕ ಭಾರತ ಪರ ಟಿ20 (T20 World Cup) ಪಂದ್ಯವಾಡಿದ ಆರ್‌.ಅಶ್ವಿನ್‌, ಆಫ್ಘನ್‌ ವಿರುದ್ಧ 2 ವಿಕೆಟ್‌ ಕಬಳಿಸಿದ್ದಲ್ಲದೆ, 4 ಓವರಲ್ಲಿ ಕೇವಲ 14 ರನ್‌ ನೀಡಿದ್ದರು. ಹೀಗಾಗಿ ಅವರು ತಂಡದಲ್ಲಿ ಮುಂದುವರಿಯಲಿದ್ದಾರೆ. ಶಮಿ, ಬೂಮ್ರಾ ಸಹ ಲಯ ಕಾಯ್ದುಕೊಳ್ಳಲು ಎದುರು ನೋಡುತ್ತಿದ್ದು, ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಶಾರ್ದೂಲ್‌ ಹಾಗೂ ಜಡೇಜಾರಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ. ಯಾವುದೇ ಗಾಯದ ಸಮಸ್ಯೆ ಎದುರಾಗದಿದ್ದರೆ ಭಾರತ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುವುದು ಬಹುತೇಕ ಖಚಿತ.

ಮಳೆಗೆ ಬಲಿಯಾಗಿದ್ದ 2007ರ ವಿಶ್ವಕಪ್‌ ಪಂದ್ಯ

ಭಾರತ ಹಾಗೂ ಸ್ಕಾಟ್ಲೆಂಡ್‌ ತಂಡಗಳು 2007ರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ ಉಭಯ ತಂಡಗಳ ನಡುವಿನ ಗುಂಪು ಹಂತದ ಪಂದ್ಯ ಮಳೆಗೆ ಬಲಿಯಾಗಿತ್ತು. ಆ ಬಳಿಕ ಎರಡೂ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಸೆಣಸಿಲ್ಲ. ಶುಕ್ರವಾರ ಮೊದಲ ಬಾರಿಗೆ ಪರಸ್ಪರ ಎದುರಾಗಲಿವೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರಾಹುಲ್‌, ರೋಹಿತ್‌, ಕೊಹ್ಲಿ(ನಾಯಕ), ಪಂತ್‌, ಸೂರ್ಯಕುಮಾರ್‌, ಹಾರ್ದಿಕ್‌, ಜಡೇಜಾ, ಶಾರ್ದೂಲ್‌, ಅಶ್ವಿನ್‌, ಶಮಿ, ಬೂಮ್ರಾ.

8 ಲಕ್ಷದಿಂದ 2 ಕೋಟಿವರೆಗಿನ ಕ್ರಿಕೆಟಿಗನ ವಾಚ್‌ ಕಲೆಕ್ಷನ್‌!

ಸ್ಕಾಟ್ಲೆಂಡ್‌: ಮುನ್ಸೆ, ಕೋಟ್ಜಿ(ನಾಯಕ), ಕ್ರಾಸ್‌, ಬೆರಿಂಗ್ಟನ್‌, ಮೆಕ್‌ಲೋಡ್‌, ಮಿಚೆಲ್‌ ಲೀಸ್ಕ್‌, ಗ್ರೀವ್‌್ಸ, ವ್ಯಾಟ್‌, ಶರೀಫ್‌, ಈವನ್ಸ್‌, ವೀಲ್‌್ಹ.

ಪಿಚ್‌ ರಿಪೋರ್ಟ್‌

ದುಬೈನಲ್ಲಿ ನಡೆದ ಬಹುತೇಕ ಪಂದ್ಯಗಳಲ್ಲಿ ಚೇಸ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಆದರೆ ಸ್ಕಾಟ್ಲೆಂಡ್‌ ವಿರುದ್ಧ ಮೊದಲು ಬ್ಯಾಟ್‌ ಮಾಡಿ 170ಕ್ಕೂ ಹೆಚ್ಚು ರನ್‌ ಗಳಿಸಿದ್ದ ನ್ಯೂಜಿಲೆಂಡ್‌ 16 ರನ್‌ಗಳಿಂದ ಗೆದ್ದಿತ್ತು. ಇಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ 170-180 ರನ್‌ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚು.