"

ಮೌಂಟ್ ಮೌಂಗನುಯಿ(ಫೆ.11): ಕೆಎಲ್ ರಾಹುಲ್ ಸೆಂಚುರಿ, ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ವ್ಯರ್ಥವಾಯಿತು. ನ್ಯೂಜಿಲೆಂಡ್ ವಿರುದ್ಧ ಮಾನ ಉಳಿಸಿಕೊಳ್ಳಲು ಕಣಕ್ಕಿಳಿದ ಟೀಂ ಇಂಡಿಯಾ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿತು. ಈ ಮೂಲಕ ನ್ಯೂಜಿಲೆಂಡ್ 3-0 ಅಂತರದಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಇದನ್ನೂ ಓದಿ: ಕಿವೀಸ್ ನೆಲದಲ್ಲಿ ಕನ್ನಡ ಕಲರವ: ರಾಹುಲ್-ಪಾಂಡೆ ಮಾತಿಗೆ ಫ್ಯಾನ್ಸ್ ಫುಲ್ ಖುಷ್

ಗೆಲುವಿಗೆ 297 ರನ್ ಟಾರ್ಗೆಟ್ ನ್ಯೂಜಿಲೆಂಡ್ ತಂಡಕ್ಕೆ ಯಾವ ಹಂತದಲ್ಲೂ ಸವಾಲು ಎನಿಸಲಿಲ್ಲ. ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೊಲಸ್ ಮೊದಲ ವಿಕೆಟ್‌ಗೆ 106  ರನ್ ಜೊತೆಯಾಟ ನೀಡೋ ಮೂಲಕ ಆರಂಭಲ್ಲೇ ಟೀಂ ಇಂಡಿಯಾ ಮೇಲೆ ಸವಾರಿ ಮಾಡಿದರು. 

ಇದನ್ನೂ ಓದಿ: ರಾಹುಲ್ ಶತಕ: ಕಿವೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ

ಗಪ್ಟಿಲ್ 66 ರನ್ ಸಿಡಿಸಿ ಔಟಾದರು.  ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 80 ರನ್ ಸಿಡಿಸಿ ಟೀಂ ಇಂಡಿಯಾಗೆ ತಲೆನೋವು ತಂದ ನಿಕೊಸಲ್ ವಿಕೆಟ್ ಕಬಳಿಸಿದ  ಶಾರ್ದೂಲ್ ಠಾಕೂರ್ ಭಾರತಕ್ಕೆ ಕೊಂಚ ಮುನ್ನಡೆ ತಂದುಕೊಟ್ಟರು.

ಟಾಮ್ ಲಾಥಮ್ ತಂಡಕ್ಕೆ ಆಸರೆಯಾದರೆ, ಜೇಮ್ಸ್ ನೀಶಮ್ 19 ರನ್ ಸಿಡಿಸಿ ಔಟಾದರು. ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ ಹಾಗೂ ಲಾಥಮ್ ಕಿವೀಸ್ ಗೆಲುವು ಖಚಿತಪಡಿಸಿದರು. ಇದೇ ವೇಳೆ ಗ್ರ್ಯಾಂಡ್‌ಹೊಮ್ಮೆ ಹಾಫ್ ಸೆಂಚುರಿ ಸಿಡಿಸಿದರು. 47.1 ಓವರ್‌ಗಳಲ್ಲಿ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಗ್ರ್ಯಾಂಡ್‌ಹೊಮ್ಮೆ ಅಜೇಯ 58 ಹಾಗೂ ಟಾಮ್ ಲಾಥಮ್ ಅಜೇಯ 32 ರನ್ ಸಿಡಿಸಿದರು. 5 ವಿಕೆಟ್ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು. ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ನ್ಯೂಜಿಲೆಂಡ್, ಏಕದಿನ ಸರಣಿ ಗೆದ್ದು ತಿರುಗೇಟು ನೀಡಿತು.

ಫೆಬ್ರವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ