ಮೈದಾನಕ್ಕಿಳಿದ ನ್ಯೂಜಿಲೆಂಡ್ ಫೀಲ್ಡಿಂಗ್ ಕೋಚ್..!
ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಅಚ್ಚರಿಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕೀವೀಸ್ ಫೀಲ್ಡಿಂಗ್ ಕೋಚ್ ಮೈದಾನಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಆಕ್ಲೆಂಡ್(ಫೆ.08): ಟಿ20 ಸರಣಿಯಲ್ಲಿ ಭಾರತದೆದುರು ವೈಟ್‌ವಾಷ್ ಅನುಭವಿಸಿದ್ದ ನ್ಯೂಜಿಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದೆ. ಹ್ಯಾಮಿಲ್ಟನ್‌ನಲ್ಲಿ ಭಾರತ ವಿರುದ್ಧ ದಾಖಲೆಯ ರನ್ ಗುರಿ ಬೆನ್ನತ್ತಿ ಗೆಲುವು ದಾಖಲಿಸಿತ್ತು. ಇನ್ನು ಆಕ್ಲೆಂಡ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು 22 ರನ್‌ಗಳಿಂದ ಜಯಿಸುವ ಮೂಲಕ ನ್ಯೂಜಿಲೆಂಡ್ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿ ಕೈವಶ ಮಾಡಿಕೊಂಡಿದೆ.
ಸೈನಿ-ಜಡೇಜಾ ಹೋರಾಟ, ದಡ ಸೇರಲಿಲ್ಲ ಭಾರತ; ನ್ಯೂಜಿಲೆಂಡ್‌ಗೆ ಏಕದಿನ ಕಿರೀಟ!
ಟಾಸ್ ಗೆದ್ದ ನಾಯಕ ಕೊಹ್ಲಿ ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಚಹಲ್ ಹಾಗೂ ಶಾರ್ದೂಲ್ ಠಾಕೂರ್ ಮಿಂಚಿನ ಪ್ರದರ್ಶನದ ಹೊರತಾಗಿಯೂ ರಾಸ್ ಟೇಲರ್ ಹಾಗೂ ಮಾರ್ಟಿನ್ ಗಪ್ಟಿಲ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 273 ರನ್‌ಗಳನ್ನು ಕಲೆಹಾಕಿತ್ತು. ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 251 ರನ್‌ಗಳಿಸಿ ಆಲೌಟ್ ಆಯಿತು.
ಮೈದಾನಕ್ಕಿಳಿದ ಫೀಲ್ಡಿಂಗ್ ಕೋಚ್ ಲೂಕಿ ರೋಂಚಿ:
ನ್ಯೂಜಿಲೆಂಡ್ ಮಾಜಿ ವಿಕೆಟ್ ಕೀಪರ್ ಹಾಗೂ ಹಾಲಿ ಫೀಲ್ಡಿಂಗ್ ಕೋಚ್ ಲೂಕಿ ರೋಂಚಿ ಸಬ್‌ಸ್ಟಿಟ್ಯೂಟ್ ಜೆರ್ಸಿ ತೊಟ್ಟು ಅಚ್ಚರಿ ಮೂಡಿಸಿದರು. ಪಂದ್ಯ ಆರಂಭಕ್ಕೂ ಮುನ್ನ ಮಿಚೆಲ್ ಸ್ಯಾಂಟ್ನರ್ ಅವರನ್ನು ಏಕೈಕ ಬದಲಿ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ಸ್ಯಾಂಟ್ನರ್ ಸಹಾ ಹೊಟ್ಟೆ ನೋವಿಗೆ ಒಳಗಾಗಿದ್ದರಿಂದ ಅಗತ್ಯಬಿದ್ದಾಗ ಮೈದಾನಕ್ಕಿಳಿಯಲಿಲ್ಲ. 2015ರ ಏಕದಿನ ವಿಶ್ವಕಪ್ ಫೈನಲ್ ತಂಡದ ಸದಸ್ಯರಾಗಿದ್ದ ರೋಂಚಿ, ಸಬ್‌ಸ್ಟಿಟ್ಯೂಟ್ ಫೀಲ್ಡರ್ ಆಗಿ ಮೈದಾನಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದರು. ಭಾರತ ಬ್ಯಾಟಿಂಗ್ ಮಾಡುವಾಗ 37ನೇ ಓವರ್‌ನಲ್ಲಿ ರೋಂಚಿ ಮೈದಾನದಲ್ಲಿ ಕಾಣಿಸಿಕೊಂಡರು.
ಅರ್ಧಶತಕ ಸಿಡಿಸಿ ಭಾರತ ವಿರುದ್ಧ ದಾಖಲೆ ಬರೆದ ರಾಸ್ ಟೇಲರ್!
ಸ್ಯಾಟ್ನರ್ ಮಾತ್ರವಲ್ಲದೇ ನಾಯಕ ಕೇನ್ ವಿಲಿಯಮ್ಸನ್ ಭುಜದ ನೋವಿಗೆ ತುತ್ತಾಗಿದ್ದರೆ, ಸ್ಕಾಟ್ ಕುಗ್ಲೆಜಿನ್ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಕೋಚ್ ಅನಿವಾರ್ಯವಾಗಿ ಮೈದಾನಕ್ಕಿಳಿಯಬೇಕಾಯಿತು.