ವೆಲ್ಲಿಂಗ್ಟನ್(ಫೆ.21): ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿಯುತ್ತಿದ್ದಂತೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೇಲರ್ ಪಾಲಿಗೆ ಇದು 100ನೇ ಟೆಸ್ಟ್ ಪಂದ್ಯ. ಹೀಗಾಗಿ ಟೇಲರ್‌ಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸ್ಮರಣಿಕೆ ರೂಪದಲ್ಲಿ 100 ವೈನ್ ಬಾಟಲ್ ಗಿಫ್ಟ್ ನೀಡಿದೆ.

 

ಪಂದ್ಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಇಯಾನ್ ಸ್ಮಿತ್ 100 ವೈನ್ ಬಾಟಲ್‌ಗಳನ್ನು ವಿತರಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ರಾಸ್ ಟೇಲರ್ 100 ವೈನ್ ಬಾಟಲ್ ಕುಡಿಯಲು ಒಬ್ಬನಿಂದ ಸಾಧ್ಯವಿಲ್ಲ, ಸಹಾಯ ಬೇಕಿದೆ ಎಂದಿದ್ದಾರೆ.

ರಾಸ್ ಟೇಲರ್ 100 ಟೆಸ್ಟ್ ಪಂದ್ಯದ ವಿವರಗಳನ್ನು ವೈನ್ ಬಾಟಲಿ ಮೇಲೆ ನಮೂದಿಸಲಾಗಿದೆ. ವಿಶೇಷ ಸ್ಮರಣಿಕೆ ನೀಡಿದ ಎಲ್ಲರಿಗೂ ರಾಸ್ ಟೇಲರ್ ಧನ್ಯವಾದ ಹೇಳಿದ್ದಾರೆ. 

ಇದನ್ನೂ ಓದಿ: 30 ವರ್ಷ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಮಯಾಂಕ್ ಅಪರೂಪದ ದಾಖಲೆ!

ರಾಸ್ ಟೇಲರ್ 100 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ. ಮೊದಲ ದಿನದಾಟದಲ್ಲಿ 5 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 122 ರನ್ ಸಿಡಿಸಿದೆ.