ಟೀಂ ಇಂಡಿಯಾ ಆಲ್ರೌಂಡರ್ ಕೇದಾರ್ ಜಾಧವ್‌ರನ್ನು 2 ಕೋಟಿ ಮೂಲ ಬೆಲೆಗೆ ಹೈದ್ರಾಬಾದ್‌ ಫ್ರಾಂಚೈಸಿ ಖರೀದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ, ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಫೆ.19): 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೇವಲ 3 ಆಟಗಾರರನ್ನಷ್ಟೇ ಖರೀದಿಸಿದೆ. ಆರೆಂಜ್ ಆರ್ಮಿ ಈ ಬಾರಿ ಆಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್‌, ಜಗದೀಶ್ ಸುಚಿತ್ ಹಾಗೂ ಕೇದಾರ್ ಜಾಧವ್‌ರನ್ನು ಖರೀದಿಸಿದೆ.

ಆಫ್ಘನ್‌ ಸ್ಪಿನ್‌ ಪ್ರತಿಭೆ ಮುಜೀಬ್ ಉರ್‌ ರೆಹಮಾನ್ ಖರೀದಿಗೆ ಹೈದ್ರಾಬಾದ್‌ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಕೇದಾರ್ ಜಾಧವ್‌ರನ್ನು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದೇಕೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿವೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಅಗತ್ಯವಾದ ಸಂದರ್ಭದಲ್ಲಿ ರನ್‌ಗಳಿಸಲು ಪರದಾಡಿದ್ದ ಜಾಧವ್‌ ಅವರನ್ನು ಈ ಬಾರಿ ಹೈದ್ರಾಬಾದ್ ಫ್ರಾಂಚೈಸಿ ಖರೀದಿಸಿದ್ದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದಾರೆ.

ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪಾರ್ಟಿ ಕೇಳಿದರು: ಗೌತಮ್‌

ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಪರ ಕೇದಾರ್ ಜಾಧವ್ ಆಟವನ್ನು ಹೈದ್ರಾಬಾದ್ ಟ್ರೋಲ್‌ ಮಾಡಿತ್ತು, ಆದರೆ ಇದೀಗ ಹೈದ್ರಾಬಾದ್ ಫ್ರಾಂಚೈಸಿಯೇ ಜಾಧವ್‌ರನ್ನು ಖರೀದಿಸಿದೆ ಎಂದು ನೆಟ್ಟಿಗನೊಬ್ಬ ಕಾಲೆಳೆದಿದ್ದಾನೆ. 

Scroll to load tweet…
Scroll to load tweet…
Scroll to load tweet…
Scroll to load tweet…