ಕಳೆದ ವರ್ಷದ ಆಗಸ್ಟ್‌ನಲ್ಲಿ ಕಾಠ್ಮಂಡುವಿನ ಹೋಟೆಲ್‌ವೊಂದರ ಕೋಣೆಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸೆಗಿದ್ದಾಗಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚ್ಚಾನೆ ಅವರನ್ನು ನೇಪಾಳ ಕ್ರಿಕೆಟ್ ಮಂಡಳಿ ಅಮಾನತುಗೊಳಿಸಿತ್ತು.
ಕಾಠ್ಮುಂಡು: ನೇಪಾಳ ತಾರಾ ಕ್ರಿಕೆಟಿಗ ಸಂದೀಪ ಲಮಿಚ್ಚಾನೆಯನ್ನು ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಇಲ್ಲಿನ ನ್ಯಾಯಾಲಯ ತೀರ್ಪಿತ್ತಿದೆ. ಸದ್ಯದಲ್ಲಿಯೇ ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ಕೋರ್ಟ್ ತಿಳಿಸಿದ್ದು, ನೇಪಾಳ ಸ್ಪಿನ್ನರ್ ಜೈಲು ಶಿಕ್ಷೆ ಅನುಭವಿಸುವುದು ಬಹುತೇಕ ಖಚಿತ ಎನಿಸಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಕಾಠ್ಮಂಡುವಿನ ಹೋಟೆಲ್‌ವೊಂದರ ಕೋಣೆಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸೆಗಿದ್ದಾಗಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚ್ಚಾನೆ ಅವರನ್ನು ನೇಪಾಳ ಕ್ರಿಕೆಟ್ ಮಂಡಳಿ ಅಮಾನತುಗೊಳಿಸಿತ್ತು. 2022ರ ಆಗಸ್ಟ್ 21ರಂದು ಅಪ್ರಾಪ್ತೆ ಮೇಲೆ ಅತ್ಯಾಚಾರದ ಬಗ್ಗೆ ಇಲ್ಲಿನ ಗೌಶಾಲಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿ ಎಫ್‌ಐಆರ್ ದಾಖಲಾದ ಬಳಿಕ ಸಂದೀಪ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು.
ಸಂದೀಪ್ ಲಮಿಚ್ಚಾನೆ ಅವರ ಮೇಲೆ ಎಫ್‌ಐಆರ್ ದಾಖಲಾದ ಸಂದರ್ಭದಲ್ಲಿ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಟೂರ್ನಿ ಮುಗಿದ ಬಳಿಕ ಅವರು ನೇಪಾಳಕ್ಕೆ ವಾಪಸಾಗಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಸಂದೀಪ್ ವಿಂಡೀಸ್‌ನಲ್ಲೇ ಉಳಿದ ಕಾರಣ ಅವರ ಮೇಲೆ ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು. ಇದಾದ ಬಳಿಕ ಸಂದೀಪ್ ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ತಾವು ಕಾಠ್ಮಂಡುಗೆ ಆಗಮಿಸುತ್ತಿರುವ ವಿಮಾನದ ವಿವರಗಳನ್ನು ಹಾಕಿ, ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದರು. ಅವರು ಆಗಮಿಸುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದರು.
Ind vs SA: ನಿವೃತ್ತಿಯ ಪಂದ್ಯದಲ್ಲಿ ಡೀನ್ ಎಲ್ಗರ್‌ಗೆ ದಕ್ಷಿಣ ಆಫ್ರಿಕಾ ನಾಯಕ ಸ್ಥಾನ!
ಇದಾದ ನಂತರ ಸಾಕಷ್ಟು ವಿಚಾರಣೆಯ ಬಳಿಕ ಬಂಧನಕ್ಕೊಳಗಾಗಿದ್ದ 23 ವರ್ಷದ ಸಂದೀಪ್ ಲಮಿಚ್ಚಾನೆ, ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಹಲವು ಟಿ20 ಲೀಗ್‌ಗಳಲ್ಲಿ ಆಡಿರುವ ಅವರು, ನೇಪಾಳ ಪರ 51 ಏಕದಿನ, 52 ಟಿ20 ಪಂದ್ಯಗಳನ್ನಾಡಿದ್ದಾರೆ.
ಕಿವೀಸ್-ಬಾಂಗ್ಲಾ 2ನೇ ಟಿ20 ಮಳೆಗೆ ಆಹುತಿ
ಮೌಂಟ್ ಮಾಂಗನ್ಯುಯಿ: ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯ ಮಳೆಗೆ ಬಲಿಯಾಯಿತು. ನಿಗದಿತ ಸಮಯಕ್ಕೆ ಆರಂಭಗೊಂಡ ಪಂದ್ಯದಲ್ಲಿ ಕಿವೀಸ್ ಮೊದಲು ಬ್ಯಾಟ್ ಮಾಡುತ್ತಾ, 11 ಓವರಲ್ಲಿ 2 ವಿಕೆಟ್‌ಗೆ 72 ರನ್ ಗಳಿಸಿದ್ದಾಗ ಆರಂಭಗೊಂಡ ಮಳೆ, ಆಟ ಮುಂದುವರಿಸಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ 1-0 ಮುನ್ನಡೆಯಲ್ಲಿದೆ.
ಮಹಿಳಾ ಕ್ರಿಕೆಟ್: ಇಂದು ಭಾರತ-ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯ
ಮುಂಬೈ: ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿ ದೊಡ್ಡ ಮೊತ್ತ ಕಲೆಹಾಕಿದರೂ, ಸಾಧಾರಣ ಬೌಲಿಂಗ್ ಪ್ರದರ್ಶನದಿಂದಾಗಿ ಸೋಲು ಕಂಡಿದ್ದ ಭಾರತ, ಶನಿವಾರ ಎರಡನೇ ಏಕದಿನ ಪಂದ್ಯದಲ್ಲಿ ಸುಧಾರಿತ ಆಟವಾಡುವ ವಿಶ್ವಾಸ ಹೊಂದಿದೆ.
ಅಭ್ಯಾಸ ಆರಂಭಿಸಿದ ಜಡ್ಡು, ಕೇಪ್‌ಟೌನ್ ಟೆಸ್ಟ್‌ಗೆ ಟೀಂ ಇಂಡಿಯಾ ಆಲ್ರೌಂಡರ್ ರೆಡಿ?
ಈ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸುವುದು ಹರ್ಮನ್‌ಪ್ರೀತ್ ಕೌರ್ ಪಡೆಯ ಮುಂದಿನ ಗುರಿ. ಮೊದಲ ಪಂದ್ಯದಲ್ಲಿ ಎದುರಾದ ಸೋಲು, ತವರಿನಲ್ಲಿ ಆಸೀಸ್ ವಿರುದ್ದ ಭಾರತಕ್ಕೆ ಸತತ 6ನೇ ಸೋಲು ಆಗಿತ್ತು. ತಂಡ 2007ರ ಫೆಬ್ರವರಿ ಬಳಿಕ ತವರಿನಲ್ಲಿ ಆಸೀಸ್ ವಿರುದ್ದ ಗೆದ್ದಿಲ್ಲ. ಮತ್ತೊಂದೆಡೆ ಆಸೀಸ್ ಈ ಪಂದ್ಯ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ
