ಮಾಜಿ ಕ್ರಿಕೆಟಿಗ ನಮನ್ ಓಝಾ ತಂದೆ ವಿನಯ್ ಓಝಾರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಬ್ರ್ಯಾಂಚ್‌ವೊಂದರಲ್ಲಿ 1.25 ಕೋಟಿ ರೂ. ವಂಚನೆ ಪ್ರಕರಣದಲ್ಲಿ ದೋಷಿ ಎಂದು ಮುಲ್ತಾಯಿ ನ್ಯಾಯಾಲಯ ತೀರ್ಪು ನೀಡಿದೆ. 7 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್‌ಗೆ 10 ವರ್ಷ ಜೈಲು ಶಿಕ್ಷೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ನಮನ್ ಓಝಾ ಪಾಲಿಗೆ ದುಃಖಕರ ಸುದ್ದಿಯೊಂದು ಹೊರಬಿದ್ದಿದೆ. ನಮನ್ ಓಝಾ ಅವರ ತಂದೆ ವಿನಯ್ ಓಝಾ ಅವರು ಬ್ಯಾಂಕಿನ ಹಣ ದುರುಪಯೋಗ ಪಡಿಸಿಕೊಂಡ ಪ್ರಕರಣದಡಿ ಆರೋಪ ಸಾಬೀತಾಗಿರುವುದರಿಂದ 7 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಬರೋಬ್ಬರಿ 11 ವರ್ಷಗಳ ವಿಚಾರಣೆಯ ಬಳಿಕ ಕೋರ್ಟ್ ಮಹತ್ವದ ತೀರ್ಮಾನವನ್ನು ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಯಾಂಕ್ ಆಫ್ ಮಹಾರಾಷ್ಟ್ರದ ಒಂದು ಬ್ರ್ಯಾಂಚ್ ಮಧ್ಯಪ್ರದೇಶದ ಜೋಲಖೇಡ ಎಂಬ ಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಬ್ಯಾಂಕ್‌ನಲ್ಲಿ ನಮನ್ ಓಝಾ ಅವರ ತಂದೆ ವಿನಯ್ ಓಝಾ ಅವರು ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2013ರಲ್ಲಿ ಈ ಬ್ಯಾಂಕ್‌ನಿಂದ ಸುಮಾರು 1.25 ಕೋಟಿ ರುಪಾಯಿ ವಂಚನೆ ಮಾಡಿದ್ದಾರೆ ಎಂದು ವಿನಯ್ ಓಝಾ ಅವರು ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅಲ್ಲಿನ ಮುಲ್ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂ ಸೇರಿದಂತೆ ಈ ಕೆಲವು ಪ್ರಮುಖರಿಗೆ ಶಿಕ್ಷೆ ಪ್ರಕಟಿಸಿದೆ.

ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಫಿಟ್ ಆದ ಟೀಂ ಇಂಡಿಯಾ ದುಷ್ಮನ್; ರೋಹಿತ್ ಪಡೆಗೆ ಶುರುವಾಯ್ತು ಟೆನ್ಷನ್!

ಈ ಪ್ರಕರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂ ಅವರಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಜತೆಗೆ 80 ಲಕ್ಷ ರುಪಾಯಿ ದಂಡ ವಿಧಿಸಿದೆ. ಇನ್ನು ನಮನ್ ಓಝಾ ಅವರ ತಂದೆ ವಿನಯ್ ಓಝಾ ಅವರಿಗೆ 7 ವರ್ಷ ಜೈಲು ಹಾಗೂ 7 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇನ್ನು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ಯಾಂಕಿನ ಬ್ರೋಕರ್‌ಗಳಾದ ಧನ್‌ರಾಜ್ ಪವರ್ ಹಾಗೂ ಲಖನ್ ಹಿಂಗ್ವೆ ಅವರಿಗೆ 7 ವರ್ಷ ಜೈಲು ಹಾಗೂ ತಲಾ 7 ಲಕ್ಷ ರುಪಾಯಿ ದಂಡ ವಿಧಿಸಿದೆ.

ಮಧ್ಯಪ್ರದೇಶದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೋಲಖೇಡ ಬ್ರ್ಯಾಂಚ್‌ನಲ್ಲಾದ ಕೋಟ್ಯಾಂತರ ರುಪಾಯಿ ಅವ್ಯವಹಾರ ಮುಲ್ತಾಯಿ ಬ್ಲಾಕ್ ಸೇರಿದಂತೆ ಆ ಭಾಗದಲ್ಲೇ ದೊಡ್ಡ ಸದ್ದು ಮಾಡಿತ್ತು. ಹೈಪ್ರೊಫೈಲ್ ಕೇಸ್ ಆಗಿದ್ದರಿಂದ ಕೋರ್ಟ್ ತೀರ್ಪಿನ ಕುರಿತಂತೆ ಸಾಕಷ್ಟು ಕುತೂಹಲವವಿತ್ತು. ಆದರೆ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಾದವಿವಾದ ಹಾಗೂ ಸೂಕ್ತ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ಪ್ರಕಟಿಸಿದೆ. ಈ ಮೂಲಕ ಭ್ರಷ್ಟಾಚಾರ ಮಾಡುವವರಿಗೆ ಈ ತೀರ್ಪು ಶಿಕ್ಷೆ ತಪ್ಪಿದ್ದಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.