ವೈಟ್‌ವಾಶ್ ಮುಖಭಂಗದಿಂದ ಪಾರಾಗುತ್ತಾ ಟೀಂ ಇಂಡಿಯಾ?

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಇಂದಿನಿಂದ ಮುಂಬೈನಲ್ಲಿ ಆರಂಭವಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Mumbai Test Team India take on New Zealand Challenge in 3rd test kvn

ಮುಂಬೈ: 12 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದಲೇ ಹೊರಬೀಳುವ ಅತಂಕದ ನಡುವೆ ಭಾರತ ತಂಡ ಮತ್ತೊಂದು ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಶುಕ್ರವಾರದಿಂದ ನ್ಯೂಜಿಲೆಂಡ್ ವಿರುದ್ದ 3ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದ್ದು, ವೈಟ್‌ವಾಶ್ ಅವಮಾನದಿಂದ ಪಾರಾಗಲು ಎದುರು ನೋಡುತ್ತಿದೆ. ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ಬೆಂಗಳೂರು ಹಾಗೂ ಪುಣೆ ಟೆಸ್ಟ್‌ನಲ್ಲಿ ಹೀನಾಯ ಸೋಲನುಭವಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಸದ್ಯ ಕಠಿಣಗೊಂಡಿದ್ದು, ಉಳಿದಿರುವ 6 ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲ್ಲಬೇಕಿದೆ. ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳ ಸರಣಿ ಆಡಲಿರುವ ಭಾರತ ತಂಡ, ಅದಕ್ಕೂ ಮುನ್ನ ಕಿವೀಸ್ ವಿರುದ್ಧ ತವರಿನ ಕೊನೆ ಟೆಸ್ಟ್ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಕಾತರದಲ್ಲಿದೆ.

ಈ ಬಾರಿಯ ಆಸೀಸ್ ಟೂರ್ ಕೊಹ್ಲಿಗೆ ಬಿಗ್ ಚಾಲೆಂಜ್: ಮತ್ತೊಮ್ಮೆ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬರ್ತಾರಾ ವಿರಾಟ್?

ಬ್ಯಾಟರ್‌ಗಳದ್ದೇ ಚಿಂತೆ: ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟರ್‌ಗಳ ಪ್ರದರ್ಶನ ಕಳಪೆಯಾಗಿತ್ತು. ವಿಶೇಷವಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್ ಹರಿದುಬರುತ್ತಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ರಿಷಭ್ ಪಂತ್, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಪುಣೆ ಪಿಚ್ ಸ್ಪರ್ಧಾತ್ಮಕ ಆಗಿರುವುದರಿಂದ ತಂಡ ಈ ಪಂದ್ಯದಲ್ಲಿ ಯಾವ ಬದಲಾವಣೆ ಮಾಡಲಿದೆ ಎಂಬ ಕುತೂಹಲವಿದೆ.

ಮೂವರು ವೇಗಿಗಳೋ ಅಥವಾ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆಯೋ ಕಾದು ನೋಡಬೇಕಿದೆ. ಈ ನಡುವೆ ಜಸ್‌ಪ್ರೀತ್‌ ಬುಮ್ರಾಗೆ ಕಾರ್ಯದೊತ್ತಡ ತಗ್ಗಿಸಲು ವಿಶ್ರಾಂತಿ ನೀಡುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, 
ನೇರಪ್ರಸಾರ: ಸ್ಪೋರ್ಟ್ಸ್18 ಚಾನೆಲ್, ಜಿಯೋ ಸಿನಿಮಾ ಆ್ಯಪ್.

Latest Videos
Follow Us:
Download App:
  • android
  • ios