Watch: ಕಿಕ್ಕಿರಿದ ಜನಸಂದಣಿ ನಡುವೆಯೂ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಟೀಮ್ ಇಂಡಿಯಾ ಫ್ಯಾನ್ಸ್!
ಮುಂಬೈನ ಐಕಾನಿಕ್ ಮರೀನ್ ಡ್ರೈವ್‌ನಲ್ಲಿ ಗುರುವಾರ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಗೆಲುವಿನ ಪರೇಡ್ ನಡೆದಿದೆ. ಇದಕ್ಕಾಗಿ ಲಕ್ಷಾಂತರ ಜನರು ಇಲ್ಲಿ ನೆರೆದಿದ್ದರು. ಇದರ ನಡುವೆಯೂ ಅಂಬ್ಯುಲೆನ್ಸ್‌ಗೆ ಅತ್ಯಂತ ಕ್ವಿಕ್ ಆಗಿ ದಾರಿ ಮಾಡಿಕೊಟ್ಟಿದ್ದಾರೆ.
ಮುಂಬೈ (ಜು.4): ಐಕಾನಿಕ್ ಮರೀನ್ ಡ್ರೈವ್‌ನಲ್ಲಿ ಗುರುವಾರ ನಡೆದ ಟೀಮ್ ಇಂಡಿಯಾದ T20 ವಿಶ್ವಕಪ್ 2024 ಗೆಲುವಿನ ಪರೇಡ್‌ಗಾಗಿ ತಮ್ಮ ನಿರೀಕ್ಷೆ ಮುಂದುವರಿಸಿದ್ದಾರೆ. ಈಗ ತಾನೆ ಟೀಮ್‌ನ ಗೆಲುವಿನ ಪರೇಡ್ ಆರಂಭವಾಗಿದೆ. ಇದಕ್ಕಾಗಿ ಲಕ್ಷಾಂತರ ಜನರು ಮರೀನ್ ಡ್ರೈವ್‌ನಲ್ಲಿ ಸೇರಿದ್ದಾರೆ. ಕಿಕ್ಕಿರಿದ ಜನಸಂದಣಿಯ ನಡುವೆಯೂ ಅಂಬ್ಯುಲೆನ್ಸ್‌ಗೆ ಟೀಮ್ ಇಂಡಿಯಾ ಅಭಿಮಾನಿಗಳು ಅತ್ಯಂತ ಕ್ವಿಕ್ ಆಗಿ ದಾರಿ ಮಾಡಿಕೊಡುವ ಮೂಲಕ ಮಾನವೀಯತೆಯನ್ನು ಪ್ರದರ್ಶನ ಮಾಡಿದ್ದಾರೆ. ಉತ್ಸಾಹಿ ಕ್ರಿಕೆಟ್ ಅಭಿಮಾನಿಗಳ ನಡುವೆ ಅಂಬ್ಯುಲೆನ್ಸ್ ಯಾವ ಸಮಸ್ಯೆಯೂ ಇಲ್ಲದಂತೆ ಸರಾಗವಾಗಿ ಮುನ್ನಡೆಯಿತು. ವಿಶ್ವ ಚಾಂಪಿಯನ್ ಆಟಗಾರರನ್ನು ಗೌರವಿಸುವ ಮೆರವಣಿಗೆಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಇದರ ನಡುವೆಯೂ ಇವರು ತೋರಿದ ಮಾನವೀಯತೆ ಮನೋಭಾವಕ್ಕೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಾಜು ಮೂರು ಕಿಲೋಮೀಟರ್ ದೂರ ಗೆಲುವಿನ ಪರೇಡ್ ನಡೆಯುತ್ತಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿ ಈ ಪರೇಡ್ ಮುಕ್ತಾಯಗೊಳ್ಳಲಿದೆ.
ನವದೆಹಲಿಯಿಂದ ಟೀಮ್ ಇಂಡಿಯಾ ಆಟಗಾರರನ್ನು ಹೊತ್ತ ವಿಮಾನ ಮುಂಬೈಗೆ ತಡವಾಗಿ ಬಂದ ಕಾರಣದಿಂದ ಗೆಲುವಿನ ಪರೇಡ್ ವಿಳಂಬವಾಗಿದೆ. ನವದೆಹಲಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಗೃಹದಲ್ಲಿ ಭೇಟಿಯಾಗಿದ್ದರು. ಆ ಬಳಿಕ ಮುಂಬೈ ವಿಮಾನ ಹತ್ತಿದ ಆಟಗಾರರಿಗೆ ನಿಲ್ದಾಣದಲ್ಲಿ ವಾಟರ್ ಸಲ್ಯೂಟ್ ಕೂಡ ನೀಡಲಾಗಿದೆ. ಇದರಿಂದಾಗಿ ಮರೀನ್ ಡ್ರೈವ್‌ನ ಗೆಲುವಿನ ಪರೇಡ್ ವಿಳಂಬವಾಗಿದೆ. ಆರಂಭದಲ್ಲಿ ಸಂಜೆ 5 ಗಂಟೆಯಿಂದ ಪರೇಡ್ ಆರಂಭವಾಗುವುದಾಗಿ ತಿಳಿಸಿದ್ದರೂ, ಸಂಜೆ 7.45ರ ವೇಳೆಗೆ ಪರೇಡ್ ಆರಂಭವಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್‌ನಿಂದ ವಾಂಖೆಂಡೆ ಸ್ಟೇಡಿಯಂವರೆಗೆ ಮೆರವಣಿಗೆ ನಡೆಯಲಿದೆ. ಲಕ್ಷಾಂತರ ಜನರು ಈಗಾಗಲೇ ವಾಂಖೆಡೆ ಸ್ಟೇಡಿಯಂನಲ್ಲಿ ನೆರಿದ್ದಾರೆ. ಇದು 2011ರ ಏಕದಿನ ವಿಶ್ವಕಪ್ ಗೆಲುವಿನ ದಿನಗಳನ್ನು ನೆನಪಿಸಿದೆ. ಸ್ಟೇಡಿಯಂನಲ್ಲಿ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟಿ20 ವಿಶ್ವಕಪ್ ವಿಜೇತ ತಂಡವನ್ನು ತಮ್ಮ ನಿವಾಸ 7, ಲೋಕ ಕಲ್ಯಾಣ್ ಮಾರ್ಗ್‌ಗೆ ಸ್ವಾಗತಿಸಿದರು. ಈ ವೇಳೆ ಆಟಗಾರರೊಂದಿಗೆ ಸಂವಾದದಲ್ಲಿ ತೊಡಗಿದ ಪ್ರಧಾನಮಂತ್ರಿಯವರು, ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ನಡೆದ ಪಂದ್ಯಾವಳಿಯ ಮೂಲಕ ತಮ್ಮ ವಿಜಯೋತ್ಸವದ ಪಯಣವನ್ನು ನೆನಪಿಸಿಕೊಂಡರು.
'ನನಗೂ ವಿನಯ್ ರಾಜ್‌ಕುಮಾರ್‌ಗೂ ಮದುವೆಯಾಗಿಲ್ಲ..' ಸ್ಪಷ್ಟನೆ ನೀಡಿದ ಸರಳ ಪ್ರೇಮಕಥೆ ನಾಯಕಿ!
T20 ವಿಶ್ವಕಪ್ ಚಾಂಪಿಯನ್‌ಗಳು ದೆಹಲಿಗೆ ಆಗಮಿಸಿದ ಬಳಿಕ ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಹೋಟೆಲ್‌ಗೆ ಆಗಮಿಸಿದ ತಂಡ ಅಲ್ಲಿಂದ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದರು. ಅವರ ಜೊತೆಗಿನ ಸುಮಾರು ಎರಡು ಗಂಟೆಗಳ ಸಂವಾದದಲ್ಲಿ, ತಂಡವು ಭಾರತದ ಎರಡನೇ T20 ವಿಶ್ವ ಪ್ರಶಸ್ತಿಯನ್ನು ಗಳಿಸುವಲ್ಲಿ ನೆರವಾದ ಕ್ಷಣವನ್ನು ನೆನಪಿಸಿಕೊಂಡಿತು.
ಟೀಮ್ ಇಂಡಿಯಾ ಜೊತೆ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ Leader-Dictator!
ಕಳೆದ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಜಯದೊಂದಿಗೆ ಭಾರತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಜಯಿಸಿತು. ಎಂಎಸ್ ಧೋನಿ ನೇತೃತ್ವದಲ್ಲಿ 2013ರ ಚಾಂಪಿಯನ್ಸ್ ಟ್ರೋಫಿ ಕೊನೆಯ ಐಸಿಸಿ ಟೂರ್ನಿ ಆಗಿತ್ತು. ಇದಕ್ಕೂ ಮುನ್ನ 1983(ಏಕದಿನ), 2007 (ಟಿ20) ಹಾಗೂ 2011 (ಏಕದಿನ) ವಿಶ್ವಕಪ್ ಟ್ರೋಫಿ ಜಯಿಸಿತ್ತು.